ನವದೆಹಲಿ:ಕರೊನಾ ವಿರುದ್ಧ ಮುಂಚೂಣಿಯಲ್ಲಿದ್ದು ಹೋರಾಡುತ್ತಿರುವವರಿಗೆ ಅಂದರೆ ವೈದ್ಯರು, ದಾದಿಯರು, ಅರೆವೈದ್ಯಕೀಯ ಸಿಬ್ಬಂದಿಗೆ ಪಿಪಿಇ ಕಿಟ್​ ಅನಿವಾರ್ಯ.ಇದರ ಹೊರತಾಗಿ ಕರೊನಾ ದಾಳಿಗೆ ತುತ್ತಾಗುವ ಹೆಚ್ಚು ಸಂಭಾವ್ಯತೆ ಇರುವುದು ಪೊಲೀಸರಿಗೆ. ಮುಂಬೈನಲ್ಲಿ ಈಗಾಗಲೇ 2,500ಕ್ಕೂ ಅಧಿಕ ಪೊಲೀಸರು ಕೋವಿಡ್​ಗೆ ಒಳಗಾಗಿದ್ದಾರೆ.
ಕೋವಿಡ್​ ತಡೆಯಲು ಪೊಲೀಸರು ಸಾಮಾನ್ಯ ಪಿಪಿಇ ಕಿಟ್​ ಧರಿಸಿ ಕರ್ತವ್ಯ ನಿರ್ವಹಿಸುವುದರಿಂದ ಒಂದು ಅಪಾಯವೂ ಇದೆ. ಅಡಿಯಿಂದ ಮುಡಿವರೆಗೆ ಮುಚ್ಚಿಕೊಂಡಿರುವುದು ಜನರಿಗೆ ಪೊಲೀಸರು ಯಾರು? ಇತರ ವೈದ್ಯಕೀಯ ಸಿಬ್ಬಂದಿ ಯಾರು ಎಂಬುದು ಗೊತ್ತಾಗುವುದು ಇಲ್ಲ. ಹೀಗಾಗಿ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸರು ಶ್ರಮಪಡಬೇಕಾಗುತ್ತದೆ.
ಇದನ್ನೂ ಓದಿ;ಧಮ್​ ಎಳೆಯೋದಕ್ಕೆ ಈಕೆಗೆ ದಿನಕ್ಕೆ 1.5 ಲಕ್ಷ ರೂ. ಸಂಬಳ….! ಸೋಷಿಯಲ್​ ಮೀಡಿಯಾದಿಂದ ಆದ್ಳು ಬ್ರಾಂಡ್​ ಅಂಬಾಸಿಡರ್​
ಈ ಕಾರಣಕ್ಕಾಗಿಯೇ ಉತ್ತರಪ್ರದೇಶದ ಝಾನ್ಸಿ ಪೊಲೀಸರು ವಿಶೇಷ ಪಿಪಿಇ ಕಿಟ್ ಅಭಿವೃದ್ಧಿಪಡಿಸಿದ್ದಾರೆ. ಇದು ಇತರ ಕಿಟ್​ಗಳಂತೆ ಬಿಳಿ ಅಥವಾ ತಿಳಿ ನೀಲಿ ಬಣ್ಣದಲ್ಲಿಲ್ಲ. ಬದಲಾಗಿ ಪಾರದರ್ಶಕವಾಗಿದೆ. ಇದನ್ನು ಧರಿಸಿದರೆ, ಪೊಲೀಸರ ಸಮವಸ್ತ್ರ ಗೋಚರಿಸುತ್ತದೆ. ಇದು ಕರ್ತವ್ಯ ನಿರ್ವಹಿಸಲು ಅನುವಾಗುತ್ತದೆ ಎನ್ನುತ್ತಾರೆ ಝಾನ್ಸಿ ಎಎಸ್​ಪಿ ಡಿ. ಪ್ರದೀಪ್​ಕುಮಾರ್​ ತಿಳಿಸಿದ್ದಾರೆ.
ಇದರ ಇನ್ನೊಂದು ಪ್ರಯೋಜನವೆಂದರೆ ಇದು ಜಲ ನಿರೋಧಕವಾಘಿದೆ. ಹೀಗಾಗಿ ಇದನ್ನು ಮಳೆಯಲ್ಲಿಯೂ ಧರಿಸಿ ಕೆಲಸ ಮಾಡಬಹುದು. ಮುಂಗಾರು ಶುರುವಾಗಿರುವುದರಿಂದ ಸಿಬ್ಬಂದಿಗೆ ಹೆಚ್ಚಿನ ಪ್ರಯೋಜನವಾಗಲಿದೆ. ಸದ್ಯ ಇಂಥ 1,000 ಪಿಪಿಇ ಕಿಟ್​ಗಳನ್ನು ಸಿದ್ಧಪಡಿಸಲಾಗಿದೆ.
ಇದನ್ನೂ ಓದಿ;‘ಯಾವುದಕ್ಕೂ ಜತೆಗೊಂದು ಸುತ್ತಿಗೆಯಿರಲಿ…’ ಜನರಿಗೆ ಮುಂಬೈ ಪಾಲಿಕೆ ಸಲಹೆ…..!
ಕೋವಿಡ್​ ಆಸ್ಪತ್ರೆ, ಕ್ವಾರಂಟೇನ್​ ಕೇಂದ್ರ, ಕಂಟೇನ್​ಮೆಂಟ್​ ಝೋನ್​ಗಳಲ್ಲಿ ಕೆಲಸ ಮಾಡುವ ಪೊಲೀಸ್​ ಸಿಬ್ಬಂದಿ ಒದಗಿಸಲಾಗುತ್ತದೆ ಎಂದು ಪ್ರದೀಪ್​ಕುಮಾರ್​ ಮಾಹಿತಿ ನೀಡಿದ್ದಾರೆ. ಇತ ಪೊಲೀಸರಿಗೂ ಇದು ಪ್ರಯೋಜನವಾಗಲಿದೆ ಎನ್ನುವ ವಿಶ್ವಾಸ ಅವರದ್ದು.
https://www.vijayavani.net/talks-on-to-privatise-state-run-banks-punjab-sind-indian-overseas-bank-of-maharrashtra-possible-names/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − 9 =
Remember me
