ರಾಂಚಿ:ಹತ್ತು ಮತ್ತು ಹನ್ನೆರಡನೆ ತರಗತಿಯ ಬೋರ್ಡ್ ಎಕ್ಸಾಂನಲ್ಲಿ ಟಾಪರ್​ಗಳಾಗುವ ಕನಸು ಅನೇಕ ವಿದ್ಯಾರ್ಥಿಗಳಲ್ಲಿರುತ್ತದೆ. ದುಬಾರಿ ಬಹುಮಾನ ಸಿಗುತ್ತದೆ ಎಂಬ ಕಾರಣಕ್ಕೆ ಟಾಪರ್​ಗಳಾಗುತ್ತಾರಾ ವಿದ್ಯಾರ್ಥಿಗಳು?! ಟಾಪರ್​ಗಳಾಗುವುದಕ್ಕೆ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳನ್ನು ಉತ್ತೇಜಿಸಲು ಜಾರ್ಖಂಡ್​ನ ಶಿಕ್ಷಣ ಸಚಿವರು ಕಂಡುಕೊಂಡ ದಾರಿ ಇದು!. ಹತ್ತು ಮತ್ತು ಹನ್ನೆರಡನೇ ತರಗತಿಯ ರಾಜ್ಯಮಟ್ಟದ ಟಾಪರ್​ಗಳಿಗೆ ಅವರು ಕಾರುಗಳನ್ನು ಬಹುಮಾನವಾಗಿ ಕೊಟ್ಟು ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.
ಜಾರ್ಖಂಡ್ ಅಕಾಡೆಮಿಕ್ ಕೌನ್ಸಿಲ್ ನಡೆಸಿದ 10 ಮತ್ತು 12ನೇ ತರಗತಿ ಪರೀಕ್ಷೆಗಳಲ್ಲಿ ರಾಜ್ಯದಲ್ಲಿ ಟಾಪರ್ ಆದ ಇಬ್ಬರಿಗೆ ಶಿಕ್ಷಣ ಸಚಿವ ಜಗರ್ನಾಥ್ ಮಹತೋ ಅವರು ಕಾರುಗಳನ್ನು ಬುಧವಾರ ಬಹುಮಾನವಾಗಿ ನೀಡಿದ್ದಾರೆ. ಅಕಾಡೆಮಿಕ್ ಕೌನ್ಸಿಲ್ ಸೆಪ್ಟೆಂಬರ್ 18ರಂದು ಸ್ಟೇಟ್ ಟಾಪರ್​ಗಳ ಹೆಸರನ್ನು ಪ್ರಕಟಿಸಿತ್ತು.
ಇದನ್ನೂ ಓದಿ:ದೆಹಲಿಯಲ್ಲಿ ನಡೆಯಲಿದೆ ಕೇಂದ್ರ ಸಚಿವ ಸುರೇಶ್ ಅಂಗಡಿ ಅವರ ಅಂತ್ಯಸಂಸ್ಕಾರ
ಸುರಿಯಾ ಗಿರಿಡಿಹ್​ನ ಎಸ್​ಆರ್​ಎಸ್​ಎಸ್​ಆರ್ ಹೈಸ್ಕೂಲ್​ನ 12ನೇ ತರಗತಿ ವಿದ್ಯಾರ್ಥಿ ಅಮಿತ್ ಕುಮಾರ್​ ರಾಜ್ಯಮಟ್ಟದ ಟಾಪರ್​ (91.4%) ಆದರೆ, 10ನೇ ತರಗತಿ ಪರೀಕ್ಷೆಯಲ್ಲಿ ನೇತರಹಟ್​ ರೆಸಿಡೆನ್ಶಿಯಲ್ ಸ್ಕೂಲ್​ನ ಮನೀಷ್ ಕುಮಾರ್​ ಕಟಿಯಾರ್ (98%) ಟಾಪರ್​. ಇವರಿಬ್ಬರೂ ಕಾರುಗಳನ್ನು ಪಡೆದುಕೊಂಡಿದ್ದಾರೆ. ಮುಂದಿನ ವರ್ಷದಿಂದ ಯಾರು ಟಾಪರ್​ಗಳಾಗುತ್ತಾರೋ ಅವರು ಆರ್ಥಿಕವಾಗಿ ಸಂಕಷ್ಟದಲ್ಲಿದ್ದರೆ ಅವರ ಉನ್ನತ ಶಿಕ್ಷಣ ಖರ್ಚುವೆಚ್ಚಗಳನ್ನು ಭರಿಸುವುದಾಗಿಯೂ ಶಿಕ್ಷಣ ಸಚಿವ ಜಗರ್ನಾಥ್ ಮಹತೋ(53) ಘೋಷಿಸಿದ್ದಾರೆ.
ಇದನ್ನೂ ಓದಿ:ಪೊಗರು ಹಾಡಿನ ಹವಾ: ದುಬಾರಿ ವೆಚ್ಚದ ಸೆಟ್​ನಲ್ಲಿ ಇಂಟ್ರೋ ಸಾಂಗ್
ಹತ್ತನೇ ತರಗತಿವರೆಗೆ ಓದಿದ್ದ ಶಿಕ್ಷಣ ಸಚಿವರು ಇತ್ತೀಚೆಗಷ್ಟೇ 11ನೇ ತರಗತಿ ಪ್ರವೇಶ ಪಡೆದುಕೊಂಡಿದ್ದಾರೆ. ಶಿಕ್ಷಣದ ಮಹತ್ವವನ್ನು ಸಾರುವ ಸಲುವಾಗಿ ಮುಂದಡಿ ಇರಿಸಿ ಗಮನಸೆಳೆದಿದ್ದಾರೆ. ಜಾರ್ಖಂಡ್ ಸರ್ಕಾರ ಜುಲೈ 22ರಂದು ಸಚಿವ ಸಂಪುಟ ಸಭೆಯಲ್ಲಿ 10 ಮತ್ತು 12 ನೇ ತರಗತಿಯ ಟಾಪರ್​ಗಳಿಗೆ ತಲಾ 1 ಲಕ್ಷ ರೂಪಾಯಿ ಬಹುಮಾನ ನೀಡುವ 22 ಪ್ರಸ್ತಾವನೆಗಳನ್ನು ಅಂಗೀಕರಿಸಿತ್ತು. (ಏಜೆನ್ಸೀಸ್)
ಗುಜರಾತ್ ಒಎನ್​ಜಿಸಿ ಘಟಕದಲ್ಲಿ ಸರಣಿ ಸ್ಫೋಟ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 + eleven =
Remember me
