ನವದೆಹಲಿ:ಗುಹೆಯೊಂದರಲ್ಲಿ ಹುಡುಗಿಯೊಬ್ಬಳು ಹಾವಿನಂತೆ ತೆವಳುತ್ತಾ ನಾಲಿಗೆಯನ್ನು ಹೊರ ಚಾಚುತ್ತಿರುವ ವಿಚಿತ್ರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಯುವತಿಯ ಹಾವಿನ ವರ್ತನೆ ಹಿಂದಿನ ಕತೆ ಕೇಳಿ ಎಲ್ಲರು ದಿಗ್ಭ್ರಮೆಗೊಂಡಿದ್ದಾರೆ.
ಜಾರ್ಖಂಡ್‌ನ ಗರ್ವಾ ಮೂಲದ ವಿಶ್ವನಾಥ್ ಓರನ್ ಅವರ ಪುತ್ರಿ ಸಾಧ್ವಿ ನೀಲಂ ಮೇ 16 ರಂದು ನಾಪತ್ತೆಯಾಗಿದ್ದಳು. ನಾಪತ್ತೆಯಾಗುವ ಮುನ್ನ ತನ್ನ ತಾಯಿ ಅಮರಾವತಿ ದೇವಿ ಮತ್ತು ಸಹೋದರ ಗೌತಮ್ ಓರನ್‌ ಜತೆ ಮಾತನಾಡಿದ್ದ ಸಾಧ್ವಿ ನೀಲಂ, ನಾನು ಗುಹೆಗೆ ಹೋಗುತ್ತಿದ್ದೇನೆ, ದೇವಸ್ಥಾನಕ್ಕೆ ಹಾನಿ ಮಾಡಬೇಡಿ ಎಂದು ಹೇಳಿದ್ದಳು.
ಮಗಳ ಮಾತು ಕೇಳಿ ಪಾಲಕರು ಆಘಾತಕ್ಕೆ ಒಳಗಾಗಿದ್ದಲ್ಲದೆ, ಆಕೆ ಕಾಣೆಯಾದಾಗಿನಿಂದ ಆಕೆಗಾಗಿ ಪಾಲಕರು ವಿವಿಧೆಡೆ ಹುಡುಕಾಡಿದರೂ ಆಕೆ ಪತ್ತೆಯಾಗಿರಲಿಲ್ಲ. ಇದಾದ ಬಳಿಕ ಜುಲೈ 27ರಂದು ಆಕೆಯ ತಾಯಿಯ ಕನಸಿನಲ್ಲಿ ಬಂದು ತಾನು ಗರ್ವಾ ಜಿಲ್ಲೆಯ ಕರಿವಾದಿಹ್​ ಗ್ರಾಮದಲ್ಲಿರುವ ರಾನಿಧಿಹ್​ ಗುಪ್ತಾ ಗುಹೆಯಲ್ಲಿರುವುದಾಗಿ ಹೇಳಿದ್ದಳಂತೆ.
ಇದಾದ ಬಳಿಕ ಹುಡುಗಿಯನ್ನು ಹುಡುಕಿಕೊಂಡು ಗುಹೆಯ ಬಳಿ ಹೋಗಲಾಯಿತು. ಗುಹೆಯ ಒಳಗೆ 40 ಮೀಟರ್ ದೂರ ಹೋದಾಗ ಜೈ ಮಾ ಕಾಳಿ ಎಂಬ ಶಬ್ದ ಕೇಳಿಸಿತು. ಬೆಳಕು ಹಾಯಿಸಿ ನೋಡಿದಾಗ ಶಿವಲಿಂಗದ ಬಳಿ ಮಗಳು ಹಾವಿನಂತೆ ತೆವಳುತ್ತಾ ನಾಲಿಗೆ ಚಾಚುತ್ತಿರುವುದನ್ನು ಕಂದು ದಿಗ್ಭ್ರಮೆಗೊಂಡೆವು. ಆಕೆ 72 ದಿನಗಳಿಂದ ಯಾವುದೇ ಆಹಾರ ಸೇವಿಸಿಲ್ಲ. ನಾಪತ್ತೆಯಾಗುವ ಮೊದಲು ಏನಾಯಿತು ಎಂಬುದು ನನಗೆ ನೆನಪಿಲ್ಲ ಎಂದು ಆಕೆ ಹೇಳುತ್ತಿದ್ದಾಳೆ ಎಂದು ಹುಡುಗಿಯ ತಂದೆ ಹೇಳಿಕೆ ನೀಡಿದ್ದಾರೆ.
A post shared by purvanchal (@purvanchal51)

ಮಗಳನ್ನು ಆ ಸ್ಥಿತಿಯಲ್ಲಿ ನೋಡಿದ ಪಾಲಕರು ಕಂಗಾಲಾಗಿದ್ದಾರೆ. ಇತ್ತ ಈ ವಿಚಾರ ತಿಳಿದ ಸ್ಥಳೀಯ ಜನರು ಗುಹೆಯ ಬಳಿ ತಂಡೋಪತಂಡವಾಗಿ ಬರುತ್ತಿದ್ದಾರೆ. ದೇವರ ಕೀರ್ತನೆ ಮಾಡಿದರೆ ಮಾತ್ರ ಹುಡುಗಿ ತನ್ನ ಹಳೆಯ ಸ್ಥಿತಿಗೆ ಮರಳುತ್ತಾಳೆ ಎಂದು ಕೆಲವರು ಸಲಹೆ ನೀಡಿದ್ದಾರೆ. ಆಕೆಯನ್ನು ದೇವರ ಸ್ವರೂಪ ಎಂದು ನಂಬಿರುವ ಸ್ಥಳೀಯ ಜನರು 12 ಗಂಟೆಗಳ ಕಾಲ ಆಕೆಗೆ ಜೈಕಾರ ಹಾಕಿದರು. ಅಲ್ಲದೆ, ಅನೇಕ ಜನರು ಅಲ್ಲಿಗೆ ಬಂದು ಪೂಜೆ ಸಲ್ಲಿಸುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.(ಏಜೆನ್ಸೀಸ್​)
ಶ್ರೀಲಂಕಾದಲ್ಲಿ ವಿರಾಟ್​ ಕೊಹ್ಲಿಗೆ ಭಾರಿ ಅವಮಾನ: ಸಿಟ್ಟಿಗೆದ್ದ ಕಿಂಗ್​ ಕೊಹ್ಲಿ ಏನ್​ ಮಾಡಿದ್ರು ನೋಡಿ…

ಪ್ಯಾನ್ ವರ್ಲ್ಡ್ ‘ಮಾರ್ಟಿನ್’: ಇದೇ ತಿಂಗಳ 5ರಂದು ಅಂತಾರಾಷ್ಟ್ರೀಯ ಪ್ರೆಸ್‌ಮೀಟ್‌ನಲ್ಲಿ ಟ್ರೇಲರ್ ಬಿಡುಗಡೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + thirteen =
Remember me
