ನವದೆಹಲಿ:ಮದ್ವೆ ದಿನ ವರ, ಮೆರವಣಿಗೆಯಲ್ಲಿ ಕಾರಲ್ಲಿ ಬರೋದು ಸಾಮಾನ್ಯ. ಆದ್ರೆ ಇಲ್ಲೊಬ್ಬ ವರ ಮಾತ್ರ ಆಂಬುಲೆನ್ಸ್‌ ಮೂಲಕವಾಗಿ ಮಂಟಪಕ್ಕೆ ಬಂದಿಳಿದಿದ್ದಾನೆ.
ಜಾರ್ಖಂಡ್‌ನ ಪಲಮು ಜಿಲ್ಲೆಯಲ್ಲಿ ಮದ್ವೆಯ ಹಿಂದಿನ ದಿನ ವರ ಅಪಘಾತ ಕ್ಕೊಳಗಾದ. ಕಾಲು ಮುರಿದಿದ್ದರೂ ವರ, ನಿಗದಿತ ಮುಹೂರ್ತದಂದೇ ಮದುವೆಯಾಗಲು ನಿರ್ಧರಿಸಿದನು. ವರ ಆಂಬ್ಯುಲೆನ್ಸ್‌ನಲ್ಲಿ ಆಗಮಿಸಿ ಸ್ಟ್ರೆಚರ್‌ನಲ್ಲಿ ಕುಳಿತುಕೊಂಡೇ ಮದುವೆಯ ವಿಧಿ ವಿಧಾನಗಳಲ್ಲಿ ನಡೆಸಿದ್ದಾನೆ.

ನಡೆದಿದ್ದೇನು?:ಚಂದ್ರೇಶ್ ಮಿಶ್ರಾರ ಮದುವೆ ಜಾರ್ಖಂಡ್‌ನ ಪಲಾಮು ಜಿಲ್ಲೆಯ ಮೇದಿನಿನಗರದ ಹೋಟೆಲ್‌ನಲ್ಲಿ ಜೂನ್ 25 ರಂದು ನಿಗದಿಪಡಿಸಲಾಗಿತ್ತು. ಆದರೆ ಇದಕ್ಕೂ ಮೊದಲು ಚಂದ್ರೇಶ್‌ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡರು. ಕಾಲು ಮುರಿತವಾಗಿದ್ದ ಕಾರಣ ಆಸ್ಪತ್ರೆಗೆ ಅಡ್ಮಿಟ್ ಮಾಡಲಾಯಿತು. ಚಂದ್ರೇಶ್‌ ಸ್ಥಿತಿಯಿಂದ ಆತಂಕಗೊಂಡ ಕುಟುಂಬಸ್ಥರು ಮದುವೆಯನ್ನು ಮುಂದೂಡುವಂತೆ ಮನವಿ ಮಾಡಿದರು. ಆದರೆ, ಮಿಶ್ರಾ ಎಲ್ಲಾ ನೋವಿನ ಮಧ್ಯೆಯೂ ನಿಗದಿತ ದಿನಾಂಕದಂದೇ ಸ್ಟ್ರಚರ್‌ನಲ್ಲಿ ಕುಳಿತುಕೊಂಡೇ ಸಪ್ತಪದಿ ತುಳಿದರು. ಮದುವೆಗೆ ಆಗಮಿಸಿದ ಬಂಧು-ಬಳಗದವರು ನವದಂಪತಿಯನ್ನು ಹಾರೈಸಿದ್ದಾರೆ.
ಕೃಷಿ ಹೊಂಡದೊಳಗೆ ಗಾಂಜಾ ಗಿಡ; 20 ಕೆ.ಜಿ ತೂಕವುಳ್ಳ 25 ಗಿಡಗಳ ಜತೆ ಆರೋಪಿ ಅರೆಸ್ಟ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 1 =
Remember me
