ರಾಂಚಿ:2018ರಲ್ಲಿ ಅಂದಿನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಅಮಿತ್​ ಷಾ ಅವರನ್ನು ಕೊಲೆ ಆರೋಪಿ ಎಂದು ಎಂದು ಕರೆದಿದ್ದಕ್ಕಾಗಿ ತಮ್ಮ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯನ್ನು ರದ್ದುಗೊಳಿಸುವಂತೆ ಕೋರಿ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಸಲ್ಲಿಸಿದ್ದ ಅರ್ಜಿಯನ್ನು ಜಾರ್ಖಂಡ್ ಹೈಕೋರ್ಟ್ ವಜಾಗೊಳಿಸಿದೆ.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಂಬುಜನಾಥ್ ಅವರಿದ್ದ ಏಕಸದಸ್ಯ ಪೀಠವು ಫೆಬ್ರವರಿ 16ರಂದು ನೀಡಿದ್ದ ತೀರ್ಪನ್ನು ಕಾಯ್ದಿರಿಸಿದೆ. ರಾಹುಲ್​ ಗಾಂಧಿ ಪರ ವಕೀಲರಾದ ಪಿಯೂಷ್ ಚಿತ್ರೇಶ್ ಮತ್ತು ದೀಪಂಕರ್ ರೈ ವಾದ ಮಂಡಿಸಿದ್ದಾರೆ.
ಈ ವಿಚಾರವು 2018ರಲ್ಲಿ ಚೈಬಾಸಾದಲ್ಲಿ ನಡೆದ ಕಾಂಗ್ರೆಸ್​ ಸಮಾವೇಶದಲ್ಲಿ ನೀಡಲಾದ ಹೇಳಿಕೆಯಾಗಿದ್ದು, ಇದು ಚುನಾವಣೆ ಪ್ರಚಾರದ ವೇಳೆ ನೀಡಲಾದ ಹೇಳಿಕೆ ಎಂದು ತಿಳಿದು ಬಂದಿದೆ. ಈ ಹೇಳಿಕೆ ಸಂಬಂಧ ಬಿಜೆಪಿ ಮುಖಂಡ ನವೀನ್ ಝಾ ಅವರು ರಾಹುಲ್‌ ವಿರುದ್ಧ ಮಾನನಷ್ಟ ಪ್ರಕರಣ ದಾಖಲಿಸಿದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 12 =
Remember me
