ರಾಂಚಿ:ಜಾರ್ಖಂಡದ ಈ ಸಚಿವರು ಕರೊನಾ ಮಣಿಸಿದರೂ..ಸಾವನ್ನು ಗೆಲ್ಲಲಾಗಲಿಲ್ಲ.ಸೆಪ್ಟೆಂಬರ್​ 26ರಂದು ಕರೊನಾ ಸೋಂಕಿಗೆ ಒಳಗಾಗಿದ್ದ ಅಲ್ಪಸಂಖ್ಯಾತ ಕಲ್ಯಾಣ ಸಚಿವ ಹಾಜಿ ಹುಸೇನ್​ ಅನ್ಸಾರಿ ಅವರು ನಿನ್ನೆಯಷ್ಟೇ ಟ್ವೀಟ್​ ಮಾಡಿ, ತಾವು ಕರೊನಾದಿಂದ ಪಾರಾಗಿದ್ದಾಗಿ ಹೇಳಿದ್ದರು. ಆದರೆ ಇಂದು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಹುಸೇನ್ ಅನ್ಸಾರಿಗೆ 73 ವರ್ಷ ವಯಸ್ಸಾಗಿತ್ತು.
ಸೆಪ್ಟೆಂಬರ್​ 26ರಂದು ಟ್ವೀಟ್ ಮಾಡಿದ್ದ ಅನ್ಸಾರಿ ಅವರು, ನಾನು ಕರೊನಾ ಟೆಸ್ಟ್​ಗೆ ಒಳಪಟ್ಟಿದ್ದೆ. ನನ್ನ ರಿಪೋರ್ಟ್​ ಪಾಸಿಟಿವ್​ ಎಂದು ಬಂದಿದೆ. ಸದ್ಯ ರಾಂಚಿಯ ಮೇದಾಂತ ಆಸ್ಪತ್ರೆಗೆ ದಾಖಲಾಗಿದ್ದೇನೆ. ಆದಷ್ಟು ಶೀಘ್ರದಲ್ಲೇ ಗುಣಮುಖನಾಗುತ್ತೇನೆ ಎಂದಿದ್ದರು. ಹಾಗೇ ನಿನ್ನೆ ಟ್ವೀಟ್ ಮಾಡಿ, ನನ್ನ ಆರೋಗ್ಯ ಸುಧಾರಣೆಯಾಗುತ್ತಿದೆ ಎಂದಿದ್ದರು. ಅಷ್ಟೇ ಅಲ್ಲ ಅವರ ಕರೊನಾ ಟೆಸ್ಟ್​ ರಿಪೋರ್ಟ್​ ನೆಗೆಟಿವ್​ ಬಂದಿದ್ದಾಗಿ ವೈದ್ಯರೇ ತಿಳಿಸಿದ್ದಾರೆ.ಸಚಿವರು ಮೃತಪಟ್ಟಿದ್ದು ಕೊವಿಡ್​-19 ನಿಂದಲ್ಲ. ಹೃದಯಸ್ತಂಭನದಿಂದ ಸಾವನ್ನಪ್ಪಿದ್ದಾರೆ ಎಂದು ಜಾರ್ಖಂಡ್ ಮುಕ್ತಿ ಮೋರ್ಚಾ ವಕ್ತಾರ ಸುಪ್ರಿಯೋ ಭಟ್ಟಾಚಾರ್ಯ ಮಾಹಿತಿ ನೀಡಿದ್ದಾರೆ.ಇದನ್ನೂ ಓದಿ:ದಯವಿಟ್ಟು ಇಡೀ ಬಾಲಿವುಡ್ಡನ್ನೇ ಹಾಗೆ ನೋಡ್ಬೇಡಿ: ಅಕ್ಷಯ್​ ಕುಮಾರ್ ಕೈಮುಗಿದು ಹೇಳಿದ್ದೇನು?
ಹಾಜಿ ಹುಸೇನ್​ ಅನ್ಸಾರಿ ಅವರು ದಿಯೋಘರ್‌ನ ಮಧುಪುರ ವಿಧಾನಸಭಾ ಕ್ಷೇತ್ರದಿಂದ ನಾಲ್ಕು ಬಾರಿ ಶಾಸಕರಾಗಿದ್ದರು. ಮಾರ್ಚ್​​ನಲ್ಲಿ ತಬ್ಲಿಘಿ ಜಮಾತ್​ ಸಮಾವೇಶದಲ್ಲಿ ಪಾಲ್ಗೊಂಡಿದ ಅನ್ಸಾರಿ ಮತ್ತು ಅವರ ಪುತ್ರ ತಮ್ಮ ಮನೆಯಲ್ಲೇ ಕ್ವಾರಂಟೈನ್ ಆಗಿದ್ದರು. (ಏಜೆನ್ಸೀಸ್​)
ಎರಡನೇ ಪ್ರಯತ್ನದಲ್ಲಿ ಯಶಸ್ವಿಯಾದ ರಾಹುಲ್​-ಪ್ರಿಯಾಂಕಾ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − three =
Remember me
