ನವದೆಹಲಿ:ಜಾರ್ಖಂಡ್​ನ ನರ್ಸರಿ ಶಾಲೆಯು ನರ್ಸರಿ ಮಕ್ಕಳಿಗೆ ಆನ್​ಲೈನ್​ ಶಿಕ್ಷಣ ಒದಗಿಸುತ್ತಿದ್ದು, ಮಕ್ಕಳಿಗೆ ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ರಾಷ್ಟ್ರಗೀತೆಗಳನ್ನು ಕಲಿಯುವಂತೆ ಹೋಂವರ್ಕ್​ ಕೊಡುವ ಮೂಲಕ ವಿವಾದಕ್ಕೆ ಸಿಲುಕಿಕೊಂಡಿದೆ.
ಜಾರ್ಖಂಡ್​ನ ಪೂರ್ವ ಸಿಂಗ್​ಭಂ ಜಿಲ್ಲೆಯ ಘಾಟ್​ಸಿಲಾದಲ್ಲಿರು ಇರುವ ಖಾಸಗಿ ಶಾಲೆಯ ಎಲ್​ಕೆಜಿ ಮತ್ತು ಯುಕೆಜಿ ಮಕ್ಕಳಿಗೆ ಈ ಹೋಂವರ್ಕ್​ ಕೊಡಲಾಗಿತ್ತು. ರಾಷ್ಟ್ರವಿರೋಧಿ ಮನೋಭಾವವುಳ್ಳ ಶಿಕ್ಷಕಿ ಮಕ್ಕಳಿಗೆ ಈ ಹೋಂವರ್ಕ್​ ಕೊಟ್ಟಿದ್ದರು ಎಂದು ಆರೋಪಿಸಲಾಗಿದೆ.
ಆನ್​ಲೈನ್​ ತರಗತಿ ವೇಳೆ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ರಾಷ್ಟ್ರಗೀತೆಗಳ ಸಾಲುಗಳು ಮತ್ತು ಯುಟ್ಯೂಬ್​ ವಿಡಿಯೋಗಳನ್ನು ಕೂಡ ಈ ಶಿಕ್ಷಕಿ ಶಾಲೆಯ ವಾಟ್ಸ್​ಆ್ಯಪ್ ಗ್ರೂಪ್​ನಲ್ಲಿ ಹಂಚಿದ್ದರು. ಇದನ್ನು ಕಡ್ಡಾಯವಾಗಿ ಮಕ್ಕಳಿಗೆ ಕಲಿಸುವಂತೆ ಪಾಲಕರಿಗೂ ಸೂಚಿಸಿದ್ದರು ಎನ್ನಲಾಗಿದೆ.
ಇದನ್ನೂ ಓದಿ:ಕೊನೆಗೂ ಇತ್ಯರ್ಥವಾಯಿತು 6ನೇ ಶತಮಾನದ ದೇಗುಲವೊಂದರ ಆಡಳಿತ ವಿವಾದ, ಸುಪ್ರೀಂಕೋರ್ಟ್​ ಹೇಳಿದ್ದೇನು?
ಈ ಹೋಂವರ್ಕ್​ ಬಗ್ಗೆ ಮಕ್ಕಳ ಪಾಲಕರು ಭಾರಿ ಆಕ್ಷೇಪ ವ್ಯಕ್ತಪಡಿಸಿ ಶಾಲೆಯ ಆಡಳಿತ ಮಂಡಳಿಯ ಗಮನಕ್ಕೂ ತಂದಿದ್ದರು. ಇದು ಜಾರ್ಖಂಡ್​ ಬಿಜೆಪಿ ವಕ್ತಾರ ಕುನಾಲ್​ ಸಾರಂಗಿ ತನಕ ತಲುಪಿ, ಅವರು ಈ ವಿಷಯವಾಗಿ ಜಿಲ್ಲಾಧಿಕಾರಿಗೆ ಆಕ್ಷೇಪಣೆ ಸಲ್ಲಿಸಿದ್ದರು. ಇದನ್ನು ಆಧರಿಸಿ ಜಿಲ್ಲಾಡಳಿ ಇಬ್ಬರು ಸದಸ್ಯರ ತನಿಖಾ ತಂಡವನ್ನು ರಚಿಸಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಶಿಕ್ಷಕಿ, ಶಾಲೆಯ ಆಡಳಿತ ಮಂಡಳಿ ಮಕ್ಕಳ ಸಾಮಾನ್ಯಜ್ಞಾನ ಹೆಚ್ಚಿಸುವಂತೆ ಸೂಚಿಸಿದ್ದರು. ಜತೆಗೆ ಅವರೇ ಪಾಕ್​ ಮತ್ತು ಬಾಂಗ್ಲಾ ರಾಷ್ಟ್ರಗೀತೆಗಳನ್ನು ಮಕ್ಕಳಿಗೆ ಹೇಳಿಕೊಡುವಂತೆ ತಿಳಿಸಿದ್ದರು. ಅದರಂತೆ ನಾನು ಈ ಕ್ರಮ ಕೈಗೊಂಡಿದ್ದಾಗಿ ಹೇಳಿದ್ದಾರೆ.
ಈ ಪ್ರಮಾದಕ್ಕೆ ಕ್ಷಮೆಯಾಚಿಸಿರುವ ಶಾಲೆಯ ಪ್ರಾಂಶುಪಾಲರು, ಈ ತಕ್ಷಣವೇ ಆ ಹೋಂವರ್ಕ್​ ಅನ್ನು ಹಿಂದಕ್ಕೆ ಪಡೆಯುತ್ತಿರುವುದಾಗಿ ಸ್ಪಷ್ಟಪಡಿಸಿದ್ದಾರೆ.ಈ ಬಗ್ಗೆ ಪ್ರತಿಕ್ರಿಯಿಸಿರುವ ರಾಜ್ಯ ಶಿಕ್ಷಣ ಸಚಿವ ಜಗನ್ನಾಥ್​ ಮಹಾರೋ, ಪ್ರಕರಣದ ತನಿಖೆ ನಡೆಸಲಾಗುತ್ತಿದೆ. ಒಂದು ವೇಳೆ ಮಕ್ಕಳಲ್ಲಿ ರಾಷ್ಟ್ರವಿರೋಧಿ ಮನೋಭಾವ ಬಿತ್ತಲು ಶಾಲೆಯ ಆಡಳಿತ ಮಂಡಳಿ ಮತ್ತು ಶಿಕ್ಷಕಿ ಯತ್ನಿಸಿರುವುದು ಕಂಡುಬಂದರೆ ಇಬ್ಬರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಅಸ್ಸಾಂ ಬಿಜೆಪಿಯಲ್ಲಿ ಗ್ರೂಪಿಸಂ?: ಪಕ್ಷದಿಂದ ದೂರ ಸರಿದ ಶಾಸಕ ಶೈಲಾದಿತ್ಯ ದೇವ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine + 6 =
Remember me
