ರಾಂಚಿ:ಸ್ಥಳೀಯ ಸಂಘಟನೆವೊಂದರಿಂದ ಲಂಚ ಸ್ವೀಕರಿಸುವ ವೇಳೆ ಜಾರ್ಖಂಡ್‌ನ ಸಹಕಾರ ಇಲಾಖೆಯ ಮಹಿಳಾ ಅಧಿಕಾರಿ ಮಿಥಾಲಿ ಶರ್ಮಾ ಅವರು ಹಜಾರಿಬಾಘ್​ನ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಎಂಟು ತಿಂಗಳ ಹಿಂದೆ ತನ್ನ ಮೊದಲ ಪೋಸ್ಟಿಂಗ್‌ನಲ್ಲೇ ಕೊಡೆರ್ಮಾದಲ್ಲಿ ಸಹಾಯಕ ರಿಜಿಸ್ಟ್ರಾರ್ ಆಗಿ ಸೇವೆಗೆ ಸೇರಿದ್ದರು. ಕೋಡೆರ್ಮ ವ್ಯಾಪಾರಿ ಸಹಕಾರ ಸಮಿತಿಯಿಂದ ಮಿಥಾಲಿ 20 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಜುಲೈ 7ರಂದು ಮೊದಲ ಭಾಗವಾಗಿ 10 ಸಾವಿರ ರೂ.ಗಳನ್ನು ತೆಗೆದುಕೊಳ್ಳುತ್ತಿದ್ದಾಗ ಎಸಿಬಿ ತಂಡ ಆಕೆಯನ್ನು ರೆಡ್​ಹ್ಯಾಂಡ್​ ಆಗಿ ಬಂಧಿಸಿದೆ.
ಇದನ್ನೂ ಓದಿ:VIDEO| ಒಳಉಡುಪಿನಲ್ಲಿ 5 ಜೀವಂತ ಹಾವುಗಳನ್ನಿಟ್ಟು ಸಾಗಿಸುತ್ತಿದ್ದ ಯುವತಿ ಸಿಕ್ಕಿಬಿದ್ದಿದ್ದೇ ರೋಚಕ!
ದಿಢೀರ್ ತಪಾಸಣೆ ವೇಳೆ ಕಂಡು ಬಂದ ಕೆಲವು ಅವ್ಯವಹಾರಗಳಿಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಬೆದರಿಕೆ ಹಾಕಿದ್ದರು. ಕ್ರಮ ಜರುಗಿಸುವುದು ಬೇಡವೆಂದರೆ ಹಣ ನೀಡುವಂತೆ ಒತ್ತಾಯಿಸಿದ್ದರು. ಇದರ ವಿರುದ್ಧ ಸಮಿತಿಯ ಸದಸ್ಯ ರಾಮೇಶ್ವರ್​ ಪ್ರಸಾದ್​ ಯಾದವ್​ ಎಸಿಬಿಗೆ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಎಸಿಬಿ ಮಿಥಾಲಿ ವಿರುದ್ಧ ಬಲೆ ಎಣೆದು ನಿನ್ನೆ 10 ಸಾವಿರ ರೂ. ಹಣ ಪಡೆಯುವಾಗ ಬಂಧಿಸಿದೆ.
ಮಿಥಾಲಿ ಲಂಚ ತೆಗೆದುಕೊಳ್ಳುತ್ತಿರುವ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಆಕ್ರೋಶ ವ್ಯಕ್ತವಾಗಿದೆ. ಮುಂದಿನ ಕ್ರಮಕ್ಕಾಗಿ ಎಸಿಬಿ ತಂಡ ಆಕೆಯನ್ನು ಹಜಾರಿಬಾಗ್‌ಗೆ ಕರೆದೊಯ್ದಿದ್ದು, ಈ ವಿಷಯದ ಬಗ್ಗೆ ವಿಚಾರಣೆ ನಡೆಯುತ್ತಿದೆ.
ಲಂಚ ಸ್ವೀಕರಿಸುತ್ತಿದ್ದ ವೇಳೆ ಶರ್ಮಾ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ ಎಂದು ಎಸಿಬಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.(ಏಜೆನ್ಸೀಸ್​)
VIDEO| ಒಳಉಡುಪಿನಲ್ಲಿ 5 ಜೀವಂತ ಹಾವುಗಳನ್ನಿಟ್ಟು ಸಾಗಿಸುತ್ತಿದ್ದ ಯುವತಿ ಸಿಕ್ಕಿಬಿದ್ದಿದ್ದೇ ರೋಚಕ!

ಜೆಡಿಎಸ್‌ಗೆ ಸಿದ್ದಾಂತವಿಲ್ಲ, ಇವರಿಗೆ ಮಾತ್ರ ಸಿದ್ದಾಂತವಿದ್ಯಾ?; ಸಿಎಂ ಹೇಳಿಕೆಗೆ ಎಚ್​ಡಿಕೆ ತಿರುಗೇಟು

ಭಾರತ್‌ NCAP ನಿಯಮಗಳು ಅಕ್ಟೋಬರ್ 1ರಿಂದ ಜಾರಿಗೆ: ಈ ವಿಷಯಗಳ ಬಗ್ಗೆ ನಿಮಗೆ ಗೊತ್ತಿರಲಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 4 =
Remember me
