ಜಾರ್ಖಂಡ್‌:ತಾಯಿಗೆ ಮಕ್ಕಳ ಮೇಲೆ ಅಪಾರವಾದ ಪ್ರೀತಿ ಇರುತ್ತದೆ. ಗಂಡು, ಹೆಣ್ಣು ಎನ್ನುವ ಭೇದಭಾವವಿಲ್ಲದೆ ಕಾಳಜಿ ಮತ್ತು ಅಕ್ಕರೆಯನ್ನು ತೋರಿಸುತ್ತಾಳೆ. ಆದರೆ ಇಲ್ಲೊಬ್ಬಳು ಮಹಿಳೆ ನವಜಾತ ಶಿಶುವನ್ನು ಲಕ್ಷಾಂತರ ರೂಪಾಯಿ ಹಣಕ್ಕೆ ಮಾರಾಟ ಮಾಡಿರುವ ಘಟನೆ ಜಾರ್ಖಂಡ್​ನ ಛತ್ರಾ ಜಿಲ್ಲೆಯಲ್ಲಿ ನಡೆದಿದೆ.
ಆಶಾ ದೇವಿ ಹುಟ್ಟಿದ ಗಂಡು ಮಗುವನ್ನು 4.5 ಲಕ್ಷ ರೂ.ಗಾಗಿ ಮಾರಾಟ ಮಾಡಿದ್ದಾಳೆ. ಘಟನೆ ಬಗ್ಗೆ ವೈದ್ಯರೊಬ್ಬರಿಂದ ಮಾಹಿತಿ ಪಡೆದ ಪೊಲೀಸರು ತಕ್ಷಣವೇ ಕ್ರಮ ಕೈಗೊಂಡು ಕೇವಲ 24 ಗಂಟೆಗಳೊಳಗಾಗಿ ಮಗುವನ್ನು ರಕ್ಷಿಸಿದ್ದಾರೆ.
ಇದನ್ನೂ ಓದಿ:ಕಂಪನಿಗಳನ್ನ ಪ್ರಶ್ನಿಸಿ, ಬಡ ಚಾಲಕರ ಮೇಲೇಕೆ ದೌರ್ಜನ್ಯ?;ಆಟೋ ಚಾಲಕರ ವಿರುದ್ಧ ಜನರ ಕಿಡಿಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿ ಅವಿನಾಶ್ ಕುಮಾರ್ ಮಾತನಾಡಿ, ಆಶಾ ದೇವಿಯನ್ನು ವಿಚಾರಣೆಗೆ ಒಳಪಡಿಸಿದಾಗ ಮಗುವನ್ನು ಡಿಂಪಲ್ ದೇವಿ ಎಂಬವರಿಗೆ ಮಾರಿರುವುದಾಗಿ ತಿಳಿಸಿದ್ದಾಳೆ. ಬಳಿಕ ಡಿಂಪಲ್ ದೇವಿಯನ್ನು ಪೊಲೀಸರು ಬಂಧಿಸಿ, ಇತರ ಆರೋಪಿಗಳ ಬಗ್ಗೆ ಮಾಹಿತಿ ಪಡೆದು, ಮಗುವನ್ನು ರಕ್ಷಿಸಿದ್ದಾರೆ. ಮಗುವಿನ ತಾಯಿಗೆ 1 ಲಕ್ಷ ರೂಪಾಯಿ ನೀಡಿದರೆ, ಉಳಿದ 3. 5 ಲಕ್ಷ ರೂಪಾಯಿಯನ್ನು ದಲ್ಲಾಳಿಗಳಿಗೆ ಹಂಚಲಾಗಿದೆ. ನವಜಾತ ಶಿಶುವಿನ ತಾಯಿ ಆಶಾದೇವಿ ಸೇರಿದಂತೆ 11 ಜನರನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ.
ಹಾಲಿಗಾಗಿ ಅಂಗಡಿಗೆ ಹೋಗಬೇಕಾಗಿಲ್ಲ..ಇನ್ಮುಂದೆ ಮನೆ ಬಾಗಿಲಿಗೇ ಬರಲಿದೆ ಫ್ರೆಶ್‌ ಮಿಲ್ಕ್

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:15 − fourteen =
Remember me
