ರಾಂಚಿ:ಕುಡಿಯಲು ಹಣ ನೀಡಲಿಲ್ಲ ಎಂಬ ಕಾರಣಕ್ಕೆ ಮಗನೇ ತನ್ನ ವೃದ್ಧ ತಾಯಿಯನ್ನು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಝಾರ್ಖಂಡ್​ನ ರಾಂಚಿಯ ಬಳಿಯ ಕುಂತಿ ಎಂಬಲ್ಲಿ ನಡೆದಿದೆ.
ಇದನ್ನೂ ಓದಿ:ವಾಟ್ಸ್‌ಆ್ಯಪ್‌ನಲ್ಲಿ ಹುಡುಗಿಯರ ಡಿಪಿ ನೋಡಿ ಅಪರಿಚಿರೊಂದಿಗೆ ಚಾಟ್​ ಮಾಡುವ ಮುನ್ನ ಇದನ್ನೊಮ್ಮೆ ಓದಿ..ಮೃತಳನ್ನು ಕಲಾವತಿ ದೇವಿ(65) ಎಂದು ಗುರುತಿಸಲಾಗಿದೆ, ಆಕೆ ತನ್ನ ಪತಿ ನಿಧನದ ನಂತರ ಸಿಗುವ ಪಿಂಚಣಿಯಲ್ಲಿ ಜೀವನ ಸಾಗಿಸುತ್ತಿದ್ದು, ಆಕೆಗೆ 4 ಗಂಡು ಮತ್ತು ಓರ್ವ ಹೆಣ್ಣು ಸೇರಿದಂತೆ ಒಟ್ಟು 5 ಮಕ್ಕಳಿದ್ದಾರೆ. ಕಲಾವತಿಯ 3 ಮಕ್ಕಳು ಉದ್ಯೋಗದ ನಿಮಿತ್ತ ಬೇರೆ ಬೇರೆ ಸ್ಥಳಗಳಲ್ಲಿ ವಾಸಿಸುತ್ತಿದ್ದರೆ, ಚಿಕ್ಕ ಮಗ ಜಿತೇಂದ್ರ ಸಿಂಗ್ ಆಕೆಯೊಂದಿಗೆ ಗ್ರಾಮದಲ್ಲಿ ವಾಸಿಸುತ್ತಿದ್ದನು.ಜೀತೆಂದ್ರ ಕುಡಿತದ ಚಟ ಹೊಂದಿದ್ದು, ಆಗಾಗ್ಗೆ ತನ್ನ ತಾಯಿ ಬಳಿ ಮದ್ಯ ಸೇವಿಸಲು ಹಣ ಕೇಳುತ್ತಿದ್ದ. ಹಣ ಸಿಗದಿದ್ದಾಗ ಥಳಿಸಿ ಆಕೆಯನ್ನು ನಿಂದಿಸುತ್ತಿದ್ದನು. ಘಟನೆ ನಡೆದ ದಿನ ಶನಿವಾರದಂದು ಜಿತೇಂದ್ರ ಮದ್ಯ ಸೇವಿಸಲು ತನ್ನ ತಾಯಿಗೆ 700 ರೂ. ಕೇಳಿದ್ದು, ಆಕೆ ನಿರಾಕರಿಸಿದ್ದಾಳೆ. ಈ ವೇಳೆ ಆತ ಕೋಪದ ಭರದಲ್ಲಿ ಮನೆಯಲ್ಲಿಟ್ಟಿದ್ದ ಕೋಲಿನಿಂದ ತಾಯಿಯ ಮೇಲೆ ಹಲ್ಲೆ ನಡೆಸಿದ್ದಾನೆ. ಇದಾದ ಬಳಿಕ ಆ ಕ್ರೂರಿ ಮಗ ತಾಯಿಯ ಕತ್ತು ಹಿಸುಕಿ ಕೊಂದು ಪರಾರಿಯಾಗಿದ್ದಾನೆ.
ಇದನ್ನೂ ಓದಿ:ಡ್ರಂಕ್ ಅಂಡ್ ಡ್ರೈವ್: ಪೊಲೀಸರ ಮುಂದೆಯೇ ಬೈಕ್​ಗೆ ಬೆಂಕಿ ಹಚ್ಚಿದ ವ್ಯಕ್ತಿ..!
ಈ ವಿಷಯ ತಿಳಿದ ತಕ್ಷಣ ಗ್ರಾಮಸ್ಥರು ಹಾಗೂ ಕುಟುಂಬಸ್ಥರು ತೋರ್ಪಾ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಕೂಡಲೇ ಪೊಲೀಸರು ಜಿತೇಂದ್ರನನ್ನ ಬಂಧಿಸಿದ್ದಾರೆ. ಪೊಲೀಸರ ಎದುರೇ ತಾಯಿಯನ್ನು ಕೊಂದ ಅಪರಾಧವನ್ನು ಆರೋಪಿ ಮಗ ಒಪ್ಪಿಕೊಂಡಿದ್ದು, ಆತನನ್ನು ಗಲ್ಲಿಗೇರಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ.(ಏಜೆನ್ಸೀಸ್)
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
Sign in to your account
Please enter an answer in digits:17 + thirteen =
Remember me
