ವಿಜಯವಾಡ:ಪ್ರೀತಿ ನಿರಾಕರಿಸಿದ ಕೋಪಕ್ಕೆ ಪ್ರಿಯಕರನೊಬ್ಬ ಪ್ರೇಯಸಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯ ನರಸರಾವ್​ಪೇಟೆಯಲ್ಲಿ ನಡೆದಿದೆ.
ಅನುಷಾ (19) ಕೊಲೆಯಾದ ಯುವತಿ. ಈಕೆ ಮುಪ್ಪಳ ಮಂಡಲದ ಗೊಲ್ಲಪಡು ಗ್ರಾಮದ ನಿವಾಸಿ. ನರಸರಾವ್​ಪೇಟೆಯ ಕೃಷ್ಣವೇಣಿ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿಎಸ್ಸಿ ವಿದ್ಯಾರ್ಥಿನಿಯಾಗಿದ್ದಳು.
ಬುಧವಾರ ಬೆಳಗ್ಗೆ ಕೊಲೆ ನಡೆದಿದೆ. ಕೊಲೆ ಆರೋಪಿ ವಿಷ್ಣುವರ್ಧನ್​ ರೆಡ್ಡಿ ಅನುಷಾಳ ಕ್ಲಾಸ್​ಮೇಟ್​. ಈತ ವಿನುಕೊಂಡ ಮಂಡಲದ ಬೊಲ್ಲಪಲ್ಲಿ ಗ್ರಾಮದವನು. ಮಾತನಾಡಬೇಕೆಂದು ಬುಧವಾರ ಅನುಷಾಳನ್ನು ಕಾಲೇಜಿನಿಂದ ಪಿಕ್​ಅಪ್​ ಮಾಡಿಕೊಂಡು ಪಲಪಡು ರಸ್ತೆಯಲ್ಲಿರುವ ನಿರ್ಜನ ಪ್ರದೇಶವೊಂದಕ್ಕೆ ಕರೆದೊಯ್ದು, ಉಸಿರುಗಟ್ಟಿಸಿ ಹತ್ಯೆಗೈದಿದ್ದಾನೆ.
ಇದನ್ನೂ ಓದಿರಿ:ಜಾತ್ರೆ ಮುಗಿಸಿ ವಾಪಸ್​ ಬರುತ್ತಿದ್ದ ನಾಲ್ವರು ಮರಳು ತುಂಬಿದ್ದ ಟಿಪ್ಪರ್​ ಲಾರಿಗೆ ಬಲಿ!
ಪರಸ್ಪರ ಪ್ರೀತಿಯಲ್ಲಿದ್ದ ಇಬ್ಬರು ಇತ್ತೀಚೆಗೆ ಕಿತ್ತಾಡಿಕೊಂಡಿದ್ದರು. ಅನುಷಾಳಿಗೆ ಬೇರೊಬ್ಬನ ಜತೆ ಸಂಬಂಧವಿದೆ ಎಂದು ವಿಷ್ಣುವರ್ಧನ್​ಗೆ ಅನುಮಾನ ಬಂದಿತ್ತು. ತನಗೆ ಮೋಸ ಮಾಡುತ್ತಿದ್ದಾಳೆ ಎಂಬ ಕೋಪದಿಂದ ಆಕೆಯೊಂದಿಗೆ ವಾಗ್ವಾದಕ್ಕೆ ಇಳಿದ ಆರೋಪಿ ತನ್ನ ಕೋಪದ ನಿಯಂತ್ರಣ ಕಳೆದುಕೊಂಡು ಕೊಂದೇ ಬಿಟ್ಟಿದ್ದಾನೆ. ಇದಾದ ಬಳಿಕ ಅನುಷಾಳ ಮೃತದೇಹವನ್ನು ಪಕ್ಕದಲ್ಲೇ ಇದ್ದ ಕಾಲುವೆಗೆ ಎಸೆದುಬಂದಿದ್ದ.
ಆಕೆ ನೀಡುವ ಸಮಜಾಯಿಸಿ ತನ್ನ ಮನಸ್ಸಿಗೆ ಸರಿ ಅನಿಸದಿದ್ದರೆ ಕೊಲೆ ಮಾಡಲು ಮೊದಲೇ ಆರೋಪಿ ಪ್ಲಾನ್​ ಮಾಡಿದ್ದ. ತನ್ನ ಯೋಜನೆಯಂತೆಯೇ ಆಕೆಯನ್ನು ಕೊಂದು ಕಾಲುವೆಗೆ ಎಸೆದು ನೇರ ನರಸರಾವ್​ಪೇಟ್​ ಪೊಲೀಸ್​ ಠಾಣೆಗೆ ತೆರಳಿ ಶರಣಾಗಿದ್ದಾನೆ.
ಇದಾದ ಬಳಿಕ ಪೊಲೀಸರು ಅನುಷಾಳ ಮೃತದೇಹವನ್ನು ಕಾಲುವೆಯಿಂದ ಹೊರತೆಗೆದು ನರಸರಾವ್​ಪೇಟೆಯ ಶವಗಾರಕ್ಕೆ ಸ್ಥಳಾಂತರಿಸಿದರು. ಇತ್ತ ಅನುಷಾಳ ಮಾಹಿತಿ ತಿಳಿದಿ ಪಾಲಕರು ಮತ್ತು ಸಂಬಂಧಿಕರು ಆಕೆಯ ಶವದ ಮುಂದೆ ಕೆಲಕಾಲ ಪ್ರತಿಭಟನೆ ನಡೆಸಿ, ಆರೋಪಿ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದರು. ಅಲ್ಲದೆ, ಬಹುಸಂಖ್ಯೆಯಲ್ಲಿ ಆಗಮಿಸಿದ ಕಾಲೇಜು ವಿದ್ಯಾರ್ಥಿಗಳು ಸಹ ಅನುಷಾ ಕುಟುಂಬದ ಜತೆ ಕೈಜೋಡಿಸಿ ಆರೋಪಿಯನ್ನು ತಮಗೆ ಒಪ್ಪಿಸುವಂತೆ ಪೊಲೀಸರನ್ನು ಒತ್ತಾಯಿಸಿದರು.
ಇದನ್ನೂ ಓದಿರಿ:ಬೆತ್ತಲೆ ಫೋಟೋ ಕೇಳಿದ ನೆಟ್ಟಿಗನಿಗೆ ನಟಿ ಕಳುಹಿಸಿದ ಫೋಟೋಗೆ ಅಭಿಮಾನಿಗಳು ಫಿದಾ!
ಆದರೆ, ಪೊಲೀಸರು ಹೇಗೋ ಪರಿಸ್ಥಿತಿಯನ್ನು ತಿಳಿಗೊಳಿಸಿ, ಆರೋಪಿಯನ್ನು ತಮ್ಮ ಕಸ್ಟಡಿಗೆ ತೆಗೆದುಕೊಂಡರು. ಇದೀಗ ಆರೋಪಿ ಮೇಲೆ ಭಾರತೀಯ ದಂಡ ಸಂಹಿತೆ (ಐಪಿಸಿ) 302 (ಕೊಲೆ) ಸೆಕ್ಷನ್​ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪೊಲೀಸ್​ ಠಾಣೆಯ ಸುತ್ತ ಬಿಗಿ ಪೊಲೀಸ್​ ಬಂದೋಬಸ್ತ್​ ಏರ್ಪಡಿಸಲಾಗಿದೆ.(ಏಜೆನ್ಸೀಸ್​)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ಮುಕೇಶ್​ ಅಂಬಾನಿ ಮನೆ ಬಳಿ ಸ್ಫೋಟಕ ಸಾಮಾಗ್ರಿ ತುಂಬಿದ ಕಾರು ಪತ್ತೆ!

ಗಂಡ ಹೆಂಡತಿ ಇದ್ದರೇ ಕುಟುಂಬ; ಸಲಿಂಗ ವಿವಾಹವನ್ನು ಕಾನೂನಾತ್ಮಕವಾಗಿ ಒಪ್ಪಲು ಅಸಾಧ್ಯವೆಂದ ಕೇಂದ್ರ

ಚೀನಾದಲ್ಲಿ ಇದೀಗ ಬಡತನ ಎಂಬುವುದೇ ಇಲ್ಲವಂತೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + thirteen =
Remember me
