ಲೂಧಿಯಾನ :ಕರೊನಾ ಉಲ್ಬಣವಾಗುತ್ತಿರುವುದನ್ನು ತಡೆಯಲು ಪಂಜಾಬಿನಲ್ಲಿ ಸಂಜೆ 6 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೆ ಕರ್ಫ್ಯೂ ವಿಧಿಸಲಾಗಿದೆ. ಆದರೆ ಈ ಆದೇಶವನ್ನು ಲೆಕ್ಕಿಸದೆ, ಲೂಧಿಯಾನದಲ್ಲಿ 150 ಜನರ ತಂಡದೊಂದಿಗೆ ವೆಬ್​ ಧಾರಾವಾಹಿಯೊಂದರ ಶೂಟಿಂಗ್​ ನಡೆಸುತ್ತಿದ್ದುದು ಬೆಳಕಿಗೆ ಬಂದಿದೆ. ಈ ನಿಟ್ಟಿನಲ್ಲಿ ನಟ ಜಿಮ್ಮಿ ಶೇರ್​ಗಿಲ್ ಮತ್ತು ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರ ನಿರ್ದೇಶಕ ಈಶ್ವರ್ ನಿವಾಸ್​ ಸೇರಿದಂತೆ 35 ಜನರ ಮೇಲೆ ಪೊಲೀಸರು ಕೇಸು ದಾಖಲಿಸಿದ್ದಾರೆ.
ಕರ್ಫ್ಯೂ ಜಾರಿಯಾಗಿ ಎರಡು ಗಂಟೆಗಳು ಕಳೆದರೂ ಲೂಧಿಯಾನದ ಆರ್ಯ ಸೀನಿಯರ್ ಸೆಕೆಂಡರಿ ಸ್ಕೂಲ್​ನಲ್ಲಿ 150 ಜನ ಸಿಬ್ಬಂದಿಯೊಂದಿಗೆ ಹಿಂದಿ ವೆಬ್ ಧಾರಾವಾಹಿಯಾದ ‘ಯುವರ್ ಆನರ್’ನ ಚಿತ್ರೀಕರಣ ನಡೆಯುತ್ತಿತ್ತು. ನಿನ್ನೆ ರಾತ್ರಿ 8 ಗಂಟೆಯ ಸುಮಾರಿಗೆ ಪೊಲೀಸರು ದಾಳಿ ನಡೆಸಿದಾಗ ಧಾರಾವಾಹಿಯಲ್ಲಿ ನ್ಯಾಯಾಧೀಶರ ಪಾತ್ರ ವಹಿಸುತ್ತಿರುವ ಜಿಮ್ಮಿ ಶೇರ್​ಗಿಲ್ ಅವರನ್ನೊಳಗೊಂಡ ಕೋರ್ಟ್​ ಸೀನ್​ಅನ್ನು ಸೆರೆ ಹಿಡಿಯಲಾಗುತ್ತಿತ್ತು ಎಂದು ಸಬ್​ಇನ್ಸ್​​ಪೆಕ್ಟರ್ ಹರ್​ಜೀತ್​ ಸಿಂಗ್ ಹೇಳಿದ್ದಾರೆ.
ಇದನ್ನೂ ಓದಿ:ಕರೊನಾಗೆ 2 ಲಕ್ಷ ಜನರನ್ನು ಕಳೆದುಕೊಂಡ ಭಾರತ
ನಿರ್ದೇಶಕ ಈಶ್ವರ್​ ನಿವಾಸ್, ನಿರ್ಮಾಣ ತಂಡದ ಆಕಾಶ್​​ದೀಪ್ ಸಿಂಗ್ ಮತ್ತು ಮಂದೀಪ್​ ಸಿಂಗ್ ಎಂಬುವರನ್ನು ಪೊಲೀಸರು ಬಂಧಿಸಿ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ. ಒಟ್ಟು 35 ಜನರ ವಿರುದ್ಧ ಸರ್ಕಾರಿ ಆದೇಶವನ್ನು ಉಲ್ಲಂಘಿಸಿದ ಮತ್ತು ರೋಗ ಹರಡುವುದಕ್ಕೆ ಎಡೆಮಾಡಿಕೊಡುವಂತೆ ನಿರ್ಲಕ್ಷ್ಯವಹಿಸಿದ ಆರೋಪಗಳನ್ನು ಐಪಿಸಿ ಸೆಕ್ಷನ್ 188, 269 ಮತ್ತು ಎಪಿಡೆಮಿಕ್ ಡಿಸೀಸಸ್ ಆ್ಯಕ್ಟ್​ನ ಸೆಕ್ಷನ್ 3 ರಡಿ ಹೊರಿಸಲಾಗಿದೆ ಎಂದು ಸಿಂಗ್ ತಿಳಿಸಿದ್ದಾರೆ.(ಏಜೆನ್ಸೀಸ್)
ಲಾಕ್​ಡೌನ್​ ವೇಳೆ ಓಡಾಡಲು ಪಾಸ್​ ನೀಡುತ್ತಿಲ್ಲ : ಪೊಲೀಸ್
ಸೋಂಕಿದ್ದರೂ ನೆಗೆಟೀವ್ ! ಸಿಟಿ ಸ್ಕ್ಯಾನ್​ನಲ್ಲಿ ಪಾಸಿಟಿವ್ ಬಂದರೆ ಆಸ್ಪತ್ರೆಗೆ ದಾಖಲು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 4 =
Remember me
