ಮುಂಬೈ:ಸದಾ ಸುದ್ದಿಯಲ್ಲಿರುವ ರಿಲಯನ್ಸ್​​ ಜಿಯೋ ಕೇವಲ 999 ರೂ.ಗೆ 4ಜಿ ಫೋನ್​ನ್ನು ಬಿಡುಗಡೆ ಮಾಡಿ ಎಲ್ಲರೂ ಹುಬ್ಬೆರಿಸುವಂತೆ ಮಾಡಿದೆ.ಇದನ್ನೂ ಓದಿ:ಭಾರಿ ಮಳೆಯ ಹಿನ್ನೆಲೆ ರಾಜ್ಯದ 5 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್; ಈ ಪಟ್ಟಿಯಲ್ಲಿ ನಿಮ್ಮ ಜಿಲ್ಲೆ ಇದೆಯಾ ನೋಡಿಈ ಫೋನ್​​ಗೆ ಜಿಯೋ ಭಾರತ್ ಎಂದು ಹೆಸರಿಡಲಾಗಿದ್ದು, ಕಾರ್ಬನ್ ಸಹಭಾಗಿತ್ವದಲ್ಲಿ ಜಿಯೋ ಎರಡು ಮಾದರಿಗಳಲ್ಲಿ ಮೊಬೈಲ್​ ಫೋನ್​ನ್ನು ಅಭಿವೃದ್ಧಿಪಡಿಸಿ ಸದ್ಯ ಈ ಪೈಕಿ ಒಂದನ್ನು ಬಿಡುಗಡೆ ಮಾಡಿದೆ. ಈ ಮೊಬೈಲ್ ಫೋನ್​​ನ್ನು ಪ್ರಾರಂಭಿಸುವುದರ ಹಿಂದಿನ ಉದ್ದೇಶವೆಂದರೆ 4ಜಿಯ ಅಭಿವೃದ್ಧಿ ಜತೆಗೆ 2ಜಿ-ಮುಕ್ತ ಭಾರತ್​​ಗೆ ವೇಗ ನೀಡುವುದಾಗಿದೆ.ಜಿಯೋ ಭಾರತ್ ಫೋನ್‌ಗಳನ್ನು ನಿರ್ಮಿಸಲು ಇತರ ಬ್ರ್ಯಾಂಡ್‌ಗಳು ಶೀಘ್ರದಲ್ಲೇ ‘ಜಿಯೋ ಭಾರತ್ ಪ್ಲಾಟ್‌ಫಾರ್ಮ್’ನ್ನು ಅಳವಡಿಸಿಕೊಳ್ಳಲಿವೆ. ಸುಮಾರು 1 ಮಿಲಿಯನ್ ಫೋನ್​ಗಳನ್ನು ಮೊದಲ ಹಂತದಲ್ಲಿ 2023ರ ಜುಲೈ 7ರಿಂದ ಮಾರಾಟಕ್ಕೆ ಪ್ರಾರಂಭವಾಗಲಿದ್ದು, ಇವು ದೇಶಾದ್ಯಂತದ ಚಿಲ್ಲರೆ ಅಂಗಡಿಗಳಲ್ಲಿ ಲಭ್ಯವಿರುತ್ತದೆ ಎಂದು ಕಂಪನಿಯು ದೃಢಪಡಿಸಿದೆ.ಇದನ್ನೂ ಓದಿ:ವಿಶ್ವದ ಅತಿ ದೊಡ್ಡ ‘ಹಾಟ್ ಪಾಟ್’ ರೆಸ್ಟೋರೆಂಟ್​​​ ಹೇಗಿದೆ ಗೊತ್ತಾ?; ಇದರ ಹಿಂದಿದೆ ಅನೇಕ ಕಥೆಗಳುಜಿಯೋ ಭಾರತ್ ಫೋನ್ ಬಳಕೆದಾರರಿಗೆ ಭಾರತದಲ್ಲಿ ಎಲ್ಲಿಯಾದರೂ ಅನಿಯಮಿತ ಕರೆಗಳನ್ನು ಮಾಡಲು, ಫೋಟೋಗಳನ್ನು ಕ್ಲಿಕ್ ಮಾಡಲು ಮತ್ತು ಜಿಯೋ ಪೇ ಬಳಸಿಕೊಂಡು ಡಿಜಿಟಲ್​ ಪಾವತಿಗಳನ್ನು ಮಾಡಲು ಅನುಮತಿಸುತ್ತದೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × four =
Remember me
