ಜನರಿಗೆ ಅತ್ಯದ್ಭುತ ಶಾಪಿಂಗ್ ಅನುಭವ ನೀಡುವ ಸಲುವಾಗಿ ಮುಂಬೈನಲ್ಲಿ ಜಿಯೋ ವರ್ಲ್ಡ್ ಡ್ರೖೆವ್ ಎಂಬ ಅತ್ಯಾಧುನಿಕ ಶಾಪಿಂಗ್ ಮಾಲ್ ಪ್ರಾರಂಭವಾಗಿದೆ. ಶಾಪಿಂಗ್ ಎಂದರೆ ಬರೀ ಖರೀದಿ ಆಗಬಾರದು, ಮನರಂಜನೆಯೂ ಜತೆಗಿರಬೇಕು ಮತ್ತು ಒಳ್ಳೆಯ ಅನುಭವವಾಗಬೇಕು ಎಂಬ ಹಿನ್ನೆಲೆಯಲ್ಲಿ ಈ ಮಾಲ್ ರೂಪಿಸಲಾಗಿದೆ. ಇಂಥದ್ದೊಂದು ವಿಭಿನ್ನ ಮತ್ತು ಅತ್ಯಾಧುನಿಕ ಮಾಲ್ ಬಗ್ಗೆ ಮಾತನಾಡುವ ರಿಲಯನ್ಸ್ ರೀಟೇಲ್​ನ ನಿರ್ದೇಶಕಿಯಾಗಿರುವ ಇಶಾ ಅಂಬಾನಿ, ‘ಇಂದಿನ ತಲೆಮಾರಿನವರು ಬರೀ ಶಾಪಿಂಗ್ ಮಾಡುವುದಕ್ಕೆ ಬಯಸುವುದಿಲ್ಲ. ಶಾಪಿಂಗ್ ಜತೆಗೆ ಮೋಜು-ಮಸ್ತಿ ಸಹ ಇಷ್ಟಪಡುತ್ತಾರೆ. ಅವರ ಆಶಯವನ್ನು ಗಮನದಲ್ಲಿಟ್ಟುಕೊಂಡು ಈ ಮಾಲ್ ರೂಪಿಸಲಾಗಿದೆ. ಜಿಯೋ ವರ್ಲ್ಡ್ ಡ್ರೖೆವ್ ಮೂಲಕ ಗ್ರಾಹಕರಿಗೆ ವಿಭಿನ್ನ ಅನುಭವ ನೀಡುವ ಉದ್ದೇಶ ನಮ್ಮದಾಗಿದ್ದು, ಅದಕ್ಕೊಂದು ಉದಾಹರಣೆಯೆಂದರೆ ಡ್ರೖೆವ್​ಇನ್ ಥಿಯೇಟರ್’ ಎನ್ನುತ್ತಾರೆ.
ಜಿಯೋ ವರ್ಲ್ಡ್ ಡ್ರೖೆವ್​ನ ವಿಶೇಷತೆಯೆಂದರೆ, ರೂಫ್​ಟಾಪ್ ಡ್ರೖೆವ್​ಇನ್ ಥಿಯೇಟರ್. ಭಾರತದಲ್ಲಿ ಡ್ರೖೆವ್​ಇನ್ ಚಿತ್ರಮಂದಿರಗಳ ಪರಿಕಲ್ಪನೆ ಹೊಸದೇನಲ್ಲ. ಹಲವು ನಗರಗಳಲ್ಲಿ ಡ್ರೖೆವ್​ಇನ್ ಚಿತ್ರಮಂದಿರಗಳು ಅಸ್ತಿತ್ವದಲ್ಲಿವೆ. ಆದರೆ, ಈ ಡ್ರೖೆವ್​ಇನ್ ಚಿತ್ರಮಂದಿರದ ಪರಿಕಲ್ಪನೆ ಹೊಸದಾಗಿದ್ದು, ನ.5ರಂದು ಉದ್ಘಾಟನೆಯಾಗಲಿದೆ. ಈ ಮೇಲ್ಛಾವಣಿ ಡ್ರೖೆವ್​ಇನ್ ಚಿತ್ರಮಂದಿರವನ್ನು ಪಿವಿಆರ್ ನಡೆಸುತ್ತಿದ್ದು, ಏಕಕಾಲದಲ್ಲಿ 290 ಕಾರ್​ಗಳನ್ನು ನಿಲ್ಲಿಸಿ, ಚಿತ್ರ ನೋಡಬಹುದಾಗಿದೆ. ಮುಂಬೈನ ಅತೀ ದೊಡ್ಡ ಚಿತ್ರಮಂದಿರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಚಿತ್ರಮಂದಿರವು ಅತ್ಯಾಧುನಿಕವಷ್ಟೇ ಅಲ್ಲ, ಸಾಟಿಯಿಲ್ಲದ ಅನುಭವ ನೀಡಲಿದೆಯಂತೆ. ಇದಲ್ಲದೆ, ದಿ ಬೇ ಕ್ಲಬ್ ಎಂಬ ಕ್ರೀಡಾ ಸಾಮಗ್ರಿಗಳ ಬೃಹತ್ ಮಳಿಗೆ, ನೈನ್ ಡೈನ್ ಎಂಬ ಜಾಗತಿಕ ತಿನಿಸುಗಳ ಜಾಯಿಂಟ್, ಮೋಟೋಡೋ ಎಂಬ ಇಟಾಲಿಯನ್ ರೆಸ್ಟೋರೆಂಟ್, ಸಂಸ್ಕೃತಿ ಮತ್ತು ಸೃಜನಶೀಲತೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಜಿಯೋ ವರ್ಲ್ಡ್ ಸೆಂಟರ್ ಎಂಬ ಕಲಾವೇದಿಕೆ ಈ ಮಾಲ್​ನ ಇನ್ನಿತರ ವಿಶೇಷತೆಗಳಾಗಿವೆ.
ಡಾಕ್ಟರ್​ ಆಗ್ತೀನಿ, ಫಾರಿನ್ನಲ್ಲೇ ಸೆಟ್ಲ್​ ಆಗ್ತೀನಿ, ಮದ್ವೆನೇ ಆಗಲ್ಲ ಎಂದಿದ್ದ ಅಪ್ಪು; ಬಾಲ್ಯದ ಆ ಸಂದರ್ಶನ ವೈರಲ್
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × two =
Remember me
