ನವದೆಹಲಿ:ದೇಶದ ಪ್ರಮುಖ ದೂರಸಂಪರ್ಕ ಕಂಪನಿ ಜಿಯೋ ಜು. 3ರಿಂದ ತನ್ನ ಮೊಬೈಲ್ ಸೇವಾ ದರಗಳನ್ನು ಶೇ. 12ರಿಂದ 27ರವರೆಗೆ ಏರಿಸಲು ನಿರ್ಧರಿಸಿದೆ. ಅದಲ್ಲದೆ 5ಜಿ ಅನ್​ಲಿಮಿಟೆಡ್ ಉಚಿತ ಸೇವೆಯನ್ನು ಮಿತಿಗೆ ಒಳಪಡಿಸಲು ತೀರ್ವನಿಸಿದೆ. ಎರಡೂವರೆ ವರ್ಷಗಳ ಬಳಿಕ ಇದೇ ಮೊದಲ ಸಲ ಜಿಯೋ ದರ ಏರಿಸುತ್ತಿದೆ. ಇದು ಬಹುತೇಕ ಎಲ್ಲ ಪ್ಲ್ಯಾನ್​ಗಳಿಗೆ ಅನ್ವಯವಾಗಲಿದೆ. 1 ಜಿಬಿ ಡೇಟಾ ಆಡ್ ಆನ್ ಪ್ಯಾಕ್​ನ ದರ ರೂ. 15 ಇದ್ದದ್ದು ರೂ. 19 ಆಗಲಿದೆ. 399 ರೂ. ಇದ್ದ 75 ಜಿಬಿ ಪೋಸ್ಟ್​ಪೇಡ್ 449 ರೂ. ಆಗಲಿದೆ. 84 ದಿನಗಳ ವ್ಯಾಲಿಡಿಟಿಯ 666 ರೂ.ನ ಪ್ಲ್ಯಾನ್ 799 ರೂ. ಆಗಲಿದೆ. ವಾರ್ಷಿಕ ರೀಚಾರ್ಜ್ ಪ್ಲ್ಯಾನ್​ಗಳು ಕೂಡ ಶೇ. 21ರಷ್ಟು ಏರಿಕೆಯಾಗಲಿವೆ. ಈ ಹಿಂದೆ 2021ರ ಡಿಸೆಂಬರ್​ನಲ್ಲಿ ಜಿಯೋ ದರ ಏರಿಸಿತ್ತು. ಈ ಮಾರುಕಟ್ಟೆಯ ಶೇ. 41ರಷ್ಟು, ಅಂದರೆ 47 ಕೋಟಿ ಮೊಬೈಲ್ ಚಂದಾದಾರರನ್ನು ಜಿಯೋ ಹೊಂದಿದೆ. ಭಾರ್ತಿ ಏರ್​ಟೆಲ್ ಮತ್ತು ವೊಡಾಫೋನ್ ಕೂಡ ಸದ್ಯದಲ್ಲೇ ದರ ಏರಿಸುವ ಸಾಧ್ಯತೆ ಇದೆ.
ಎರಡು ಹೊಸ ಆಪ್​ಗಳು
ಜಿಯೋ ತನ್ನ ಡಿಜಿಟಲ್ ಸೌಲಭ್ಯದ ವ್ಯಾಪ್ತಿಯನ್ನೂ ವಿಸ್ತರಿಸಿದೆ. ಜಿಯೋ ಸೇಫ್ ಮತ್ತು ಜಿಯೋ ಟ್ರಾನ್ಸ್​ಲೇಟ್ ಎಂಬ ಎರಡು ಅಪ್ಲಿಕೇಷನ್​ಗಳನ್ನು ಬಿಡುಗಡೆ ಮಾಡಿದೆ. ಜಿಯೋ ಸೇಫ್ ತಿಂಗಳ ದರ 199 ರೂ. ಇದ್ದು, ಸುರಕ್ಷಿತ ಕರೆ, ಮೆಸೇಜಿಂಗ್ ಮತ್ತು ಫೈಲ್ ಟ್ರಾನ್ಸ್​ಫರ್ ಸೇವೆಯನ್ನು ಒದಗಿಸುತ್ತದೆ. ಕೃತಕ ಬುದ್ಧಿಮತ್ತೆಯಿಂದ ಚಾಲಿತವಾದ ಜಿಯೋ ಟ್ರಾನ್ಸ್​ಲೇಟ್ ಆಪ್ ತಿಂಗಳಿಗೆ 99 ರೂ. ಪಾವತಿಸಿದರೆ, ವಾಯ್ಸ್, ಕಾಲ್, ಮೆಸೇಜ್, ಟೆಕ್ಸ್ಟ್ ಮತ್ತು ಇಮೇಜ್​ಗಳನ್ನು ಟ್ರಾನ್ಸ್​ಲೇಟ್ ಮಾಡುತ್ತದೆ. ಜಿಯೋ ಬಳಕೆದಾರರಿಗೆ ಒಂದು ವರ್ಷದವರೆಗೆ ಈ ಎರಡೂ ಆಪ್​ಗಳು ಉಚಿತವಾಗಿರಲಿವೆ.
ಗರಿಷ್ಠ ಗುಣಮಟ್ಟದ, ಕೈಗೆಟಕುವ ಇಂಟರ್ನೆಟ್ ಸೌಲಭ್ಯವು ಡಿಜಿಟಲ್ ಇಂಡಿಯಾದ ಬೆನ್ನೆಲುಬು. ಇದಕ್ಕೆ ಹೆಚ್ಚಿನ ಕೊಡುಗೆ ನೀಡುತ್ತಿರುವುದಕ್ಕೆ ಜಿಯೋಗೆ ಹೆಮ್ಮೆ ಇದೆ- ಆಕಾಶ್ ಎಂ. ಅಂಬಾನಿ, ರಿಲಯನ್ಸ್ ಜಿಯೋ ಅಧ್ಯಕ್ಷ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + three =
Remember me
