ನವದೆಹಲಿ:ಸೆಪ್ಟೆಂಬರ್​ 10ರ ಗಣೇಶ ಚತುರ್ಥಿಗೆ ರಿಲಯನ್ಸ್ ಸಂಸ್ಥೆಯ ಟೆಲಿಕಾಂ ಯುನಿಟ್ ಆಗಿರುವ ಜಿಯೋ ಇನ್ಫೋಕಾಮ್ ಹೊಸದೊಂದು ಗಿಫ್ಟ್​ ನೀಡಲು ಸಿದ್ಧವಾಗಿದೆ. ವಿಶ್ವದ ಅತ್ಯಂತ ಕಡಿಮೆ ಬೆಲೆಯ ಸ್ಮಾರ್ಟ್​ ಫೋನ್​ ಜಿಯೋಫೋನ್ ನೆಕ್ಸ್ಟ್​ ಅನ್ನು ಬಿಡುಗಡೆ ಮಾಡುವುದಾಗಿ ಸಂಸ್ಥೆಯ ಮುಖ್ಯಸ್ಥ ಮುಕೇಶ್ ಅಂಬಾನಿ ತಿಳಿಸಿದ್ದಾರೆ.
ಗೂಗಲ್​ ಸಂಸ್ಥೆಯೊಂದಿಗೆ ಸೇರಿಕೊಂಡು ಜಿಯೋ ಸಂಸ್ಥೆ ಈ ಫೋನ್​ ಅನ್ನು ತಯಾರಿಸಿದೆ. ಈ ಫೋನ್ ಆಂಡ್ರಾಯ್ಡ್​​ ಒಎಸ್​​​ ಅಪ್ಟಿಮೈಸ್ಡ್​​ ಆವೃತ್ತಿಯಾಗಿದ್ದು ಅತ್ಯಾಧುನಿಕ ಫೀಚರ್ಸ್​​​ ಒಳಗೊಂಡಿದೆ. 5 ಜಿ ನೆಟ್​ವರ್ಕ್​ನಲ್ಲಿ 4 ಜಿ ಫೋನ್​ ಬಳಕೆ ಮಾಡಬಹುದಾದ ಹೊಸ ಆವಿಷ್ಕಾರ ಫೋನ್​ನಲ್ಲಿರಲಿದೆ. ಅದರ ಜತೆ ಕಟಿಂಗ್ ಎಡ್ಜ್ ಫೀಚರ್​ಗಳನ್ನೂ ಫೋನ್​ ಒಳಗೊಂಡಿರಲಿದೆ ಎಂದು ತಿಳಿಸಲಾಗಿದೆ. ಗಣೇಶ ಚತುರ್ಥಿ ಹಬ್ಬದ ದಿನದಂದೇ ಈ ಫೋನ್​ ಮಾರುಕಟ್ಟೆಗೆ ಬರಲಿದೆ ಎಂದು ತಿಳಿಸಲಾಗಿದೆ.
ಸಂಸ್ಥೆಯ 44ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಮುಕೇಶ್ ಅಂಬಾನಿ ಸಂಸ್ಥೆಯ ಹೊಸ ಫೋನ್ ಬಗ್ಗೆ ಮಾಹಿತಿ ನೀಡಿದ್ದಾರೆ. ಸಭೆಯಲ್ಲಿ ಮಾತನಾಡಿ ಅವರು, “ಇದು ಜಾಗತಿಕ ತಂತ್ರಜ್ಞಾನದಲ್ಲಿ ಮಹತ್ವದ ಉತ್ಪನ್ನವಾಗಿದೆ. ಜಿಯೋಫೋನ್ ನೆಕ್ಸ್ಟ್ ಅನ್ನು ಮೊದಲು ಭಾರತದಲ್ಲಿ ಪರಿಚಯಿಸಲಾಗುವುದು ಮತ್ತು ನಂತರ ವಿಶ್ವದ ಇತರ ಭಾಗಗಳಿಗೆ ಕೊಂಡೊಯ್ಯಲಾಗುವುದು” ಎಂದು ತಿಳಿಸಿದ್ದಾರೆ. (ಏಜೆನ್ಸೀಸ್)
ಮಗ ಎಂದುಕೊಂಡಿದ್ದವ ನನ್ನ ಚಿಕ್ಕಪ್ಪನಾದ! ಅಜ್ಜನ ಜತೆ ತನ್ನ ಗರ್ಲ್​ಫ್ರೆಂಡ್​ ಆಡುತ್ತಿದ್ದ ಆಟವನ್ನು ಬಿಚ್ಚಿಟ್ಟ ಯುವಕ!

ಕನ್ನಡಕವಿಲ್ಲದೆ ನ್ಯೂಸ್​ ಪೇಪರ್ ಓದಲು ವಿಫಲನಾದ ವರ; ಮದುವೆ ಕ್ಯಾನ್ಸಲ್ ಮಾಡಿದ ವಧು!

ವರ್ಜಿನಿಟಿ ಕಳೆದುಕೊಳ್ಳಲು ಸರಿಯಾದ ವಯಸ್ಸು ಯಾವುದು? ಅಮ್ಮನಿಗೇ ಪ್ರಶ್ನಿಸಿದ ಆಲಿಯಾ ಕಶ್ಯಪ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + 8 =
Remember me
