ನವದೆಹಲಿ:ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್​ ಅವರ ಜಪಾನ್​ ಭೇಟಿ ರದ್ದುಗೊಳ್ಳುವ ಸಂಭವ ಹೆಚ್ಚಾಗಿದೆ. ಇವರ ಭೇಟಿಗೆ ಜಪಾನ್​ನಲ್ಲಿ ಭಾರಿ ವಿರೋಧ ವ್ಯಕ್ತವಾಗುತ್ತಿರುವುದು ಇದಕ್ಕೆ ಕಾರಣ ಎನ್ನಲಾಗಿದೆ.
ಲಡಾಖ್​ ಬಿಕ್ಕಟ್ಟಿನ ವಿಷಯದಲ್ಲಿ ಜಪಾನ್​ ಭಾರತದ ಬೆನ್ನಿಗೆ ನಿಂತಿದೆ. ಆದರೆ, ಚೀನಾ ಅಧ್ಯಕ್ಷರ ಪ್ರವಾಸ ರದ್ದಾಗಲು ಇದು ಕಾರಣವಲ್ಲ. ಬದಲಿಗೆ ಹಾಂಕಾಂಗ್​ನಲ್ಲಿ ಚೀನಾ ಜಾರಿಗೊಳಿಸಿರುವ ರಾಷ್ಟ್ರೀಯ ಭದ್ರತಾ ಕಾಯ್ದೆಯನ್ನು ಜಾರಿಗೊಳಿಸಿರುವುದ ಇದಕ್ಕೆ ಕಾರಣವಾಗಿದೆ.
ಇದನ್ನೂ ಓದಿ:ಕೋಟಿ ರೂ. ಮೌಲ್ಯದ ವಿದೇಶಿ ಸಿಗರೇಟ್ ವಶ; ಐವರ ಬಂಧನ
ಕರೋನಾ ಪಿಡುಗು ಜಾಗತಿಕವಾಗಿ ವ್ಯಾಪಿಸದಿದ್ದರೆ ಕ್ಸಿ ಜಿನ್​ಪಿಂಗ್​ ಏಪ್ರಿಲ್​ನಲ್ಲೇ ಜಪಾನ್​ ಪ್ರವಾಸ ಕೈಗೊಳ್ಳಬೇಕಾಗಿತ್ತು. ಆದರೆ, ಸರಿಯಾಗಿ ಅದೇ ವೇಳೆಗೆ ಪಿಡುಗು ಹೆಚ್ಚಾಗಿದ್ದರಿಂದ, ಅವರ ಪ್ರವಾಸ ರದ್ದಾಗಿತ್ತು. ಇದೀಗ ಅದು ಆಗಸ್ಟ್​ಗೆ ಮರುನಿಗದಿಯಾಗಲಿತ್ತು. ಆದರೆ, ಜಪಾನ್​ನ ಆಡಳಿತಾರೂಢ ಲಿಬರಲ್​ ಡೆಮಾಕ್ರಟಿಕ್​ ಪಾರ್ಟಿ ಸದಸ್ಯರೇ ಜಿನ್​ಪಿಂಗ್​ ಭೇಟಿಗೆ ಭಾರಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಹಾಂಕಾಂಗ್​ನಲ್ಲಿ ಚೀನಾದ ರಾಷ್ಟ್ರೀಯ ಭದ್ರತಾ ಕಾಯ್ದೆಯನ್ನು ಜಾರಿಗೊಳಿಸಿರುವುದರಿಂದ ಹಾಂಕಾಂಗ್​ನಲ್ಲಿರು ಜಪಾನ್​ನ ಕೈಗಾರಿಕೆಗಳು, ವಾಣಿಜ್ಯೋದ್ಯಮಿಗಳ ಸುಗಮ ಕಾರ್ಯಾಚರಣೆಗೆ ಚೀನಾದ ಈ ಕಾನೂನು ಅಡ್ಡಿಯಾಗುತ್ತದೆ ಎಂಬುದು ಇವರೆಲ್ಲರ ಆತಂಕವಾಗಿದೆ. ಈ ಹಿನ್ನೆಲೆಯಲ್ಲಿ ಅವರು ಜಿನ್​ಪಿಂಗ್​ ಅವರ ಭೇಟಿಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ಕಾರಣಕ್ಕಾಗಿ ಜಪಾನ್​ನ ಪ್ರಧಾನಿ ಶಿನ್ಜೋ ಅಬೆ, ಜಿನ್​ಪಿಂಗ್​ ಅವರ ಪ್ರವಾಸವನ್ನೇ ರದ್ದುಗೊಳಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಕರೊನಾಗೂ ಬಂತು ಚಿನ್ನದ ಮಾಸ್ಕ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × five =
Remember me
