ನವದೆಹಲಿ:ಮಹಿಳಾ ಮತ್ತು ಒಂಟಿ ಪುರುಷ ಸರ್ಕಾರಿ ನೌಕರರು ತಮ್ಮ ಪೂರ್ಣ ಸೇವೆಯ ಅವಧಿಯಲ್ಲಿ 730 ದಿನಗಳು ಮಕ್ಕಳ ಆರೈಕೆ ರಜೆಯನ್ನು ಪಡೆದುಕೊಳ್ಳಬಹುದು. ಇದಕ್ಕೆ ಅವರು ಅರ್ಹರಾಗಿದ್ದಾರೆ ಎಂದು ಕೇಂದ್ರ ಸಿಬ್ಬಂದಿ ಖಾತೆ ರಾಜ್ಯ ಸಚಿವರಾದ ಜಿತೇಂದ್ರ ಸಿಂಗ್ ಇಂದು ಹೇಳಿದ್ದಾರೆ.
ಇದನ್ನೂ ಓದಿ:ಸುಂಟಿಕೊಪ್ಪ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ ಸಾನಕ್ಕೆ ಚುನಾವಣೆ ಇಂದು
“ಕೇಂದ್ರೀಯ ನಾಗರಿಕ ಸೇವೆಗಳ ನಿಯಮಗಳು, 1972ರ ನಿಯಮ 43-ಸಿ ಅಡಿಯಲ್ಲಿ ಸಿವಿಲ್ ಸೇವೆಗಳು ಮತ್ತು ಹುದ್ದೆಗಳಿಗೆ ನೇಮಕಗೊಂಡ ಮಹಿಳಾ ಸರ್ಕಾರಿ ನೌಕರರು ಮತ್ತು ಒಂಟಿ ಪುರುಷ ಸರ್ಕಾರಿ ನೌಕರರು ಮಕ್ಕಳ ಆರೈಕೆ ರಜೆಗೆ (CCL) ಅರ್ಹರಾಗಿರುತ್ತಾರೆ. ಈ ಸರ್ಕಾರಿ ನೌಕರರು, ತಮ್ಮ ಪೂರ್ಣ ಸೇವೆಯ ಅವಧಿಯಲ್ಲಿ 730 ದಿನಗಳ ಕಾಲ ಮಕ್ಕಳನ್ನು ಆರೈಕೆ ಮಾಡಲು ರಜೆ ತೆಗೆದುಕೊಳ್ಳಬಹುದು” ಎಂದು ಹೇಳಿದರು.
ಸರ್ಕಾರಿ ನೌಕರರು ತಮ್ಮ ಮಕ್ಕಳನ್ನು 18 ವರ್ಷ ವಯಸ್ಸಿನವರೆಗೆ ನೋಡಿಕೊಳ್ಳಲು ರಜೆಯನ್ನು ಪಡೆಯಬಹುದು ಮತ್ತು ಅಂಗವಿಕಲ ಮಕ್ಕಳ ವಿಷಯದಲ್ಲಿ ಯಾವುದೇ ವಯಸ್ಸಿನ ಮಿತಿಯಿಲ್ಲ ಎಂದು ಲಿಖಿತ ರೂಪದಲ್ಲಿ ಜಿತೇಂದ್ರ ಸಿಂಗ್ ಸಂಸತ್ತಿಗೆ ತಿಳಿಸಿದ್ದಾರೆ,(ಏಜೆನ್ಸೀಸ್).
ಸಲಾರ್​ ಬೆನ್ನಲ್ಲೇ ಮತ್ತೊಬ್ಬ ಖ್ಯಾತ ನಟನ ಚಿತ್ರ ಐಮ್ಯಾಕ್ಸ್​ನಲ್ಲಿ ರಿಲೀಸ್​ ಆಗಲು ಸಜ್ಜು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 − 6 =
Remember me
