ಉತ್ತರಪ್ರದೇಶ:ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಹೆಸರನ್ನು ನೆನಪಿಸುವಂಥ ಹೊಸ ತಳಿಯ ತಾವರೆಯೊಂದನ್ನು ಅಭಿವೃದ್ಧಿ ಪಡಿಸಲಾಗಿದೆ. ವಿಶೇಷವಾದ ಈ ತಾವರೆಯನ್ನು ಇಂದು ಅಧಿಕೃತವಾಗಿ ಅನಾವರಣಗೊಳಿಸಲಾಗಿದೆ.
ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆಯ ರಾಜ್ಯ ಸಚಿವ ಡಾ.ಜಿತೇಂದ್ರ ಸಿಂಗ್ ಇಂದು ಉತ್ತರಪ್ರದೇಶದ ಲಕ್ನೋದಲ್ಲಿ ಈ ವಿನೂತನ ತಾವರೆಯ ತಳಿಯನ್ನು ಅನಾವರಣಗೊಳಿಸಿದರು. ಲಕ್ನೋದ ನ್ಯಾಷನಲ್ ಬೊಟಾನಿಕಲ್ ರಿಸರ್ಚ್ ಇನ್​ಸ್ಟಿಟ್ಯೂಟ್ ಈ ತಳಿಯನ್ನು ಅಭಿವೃದ್ಧಿಪಡಿಸಿದೆ.
ಈ ವಿಶಿಷ್ಟ ಕಮಲದ ಪ್ರಭೇದವನ್ನು “ನಮೋಃ 108” ಎಂದು ಹೆಸರಿಸಿದ್ದಕ್ಕಾಗಿ ಜಿತೇಂದ್ರ ಸಿಂಗ್ ಎನ್​ಬಿಆರ್​ಐಯನ್ನು ಶ್ಲಾಘಿಸಿದರು. ಇದು ನರೇಂದ್ರ ಮೋದಿಯವರು ಪ್ರಧಾನಿಯಾಗಿ ಅವರ ಅಧಿಕಾರಾವಧಿಯ ಹತ್ತನೇ ವರ್ಷದಲ್ಲಿ ಬಂದಿದೆ. ಇದು ನರೇಂದ್ರ ಮೋದಿಯವರ ಅವಿರತ ಉತ್ಸಾಹಕ್ಕೆ ದೊಡ್ಡ ಉಡುಗೊರೆ ಎಂದು ಅವರು ಹೇಳಿದರು.
ಇದನ್ನೂ ಓದಿ:ಮನೆ ಬಳಿ ಬಂದವರಿಗೆ ಸಾಕುನಾಯಿ ಕಚ್ಚಿದರೆ ಮಾಲೀಕರಿಗೆ 6 ತಿಂಗಳು ಜೈಲು, ದಂಡ: ಪೊಲೀಸರ ಎಚ್ಚರಿಕೆ
ನೆಲಂಬೊ ನ್ಯೂಸಿಫೆರ ಎಂಬ ವೈಜ್ಞಾನಿಕ ಹೆಸರು ಹೊಂದಿರುವ ಈ ಕಮಲದ ಹೂವು 108 ದಳಗಳನ್ನು ಹೊಂದಿದೆ. ಗರಿಷ್ಠ ಹತ್ತು ಇಂಚು ವ್ಯಾಸ ಗಾತ್ರದ ಈ ಹೂವು ಮಾರ್ಚ್​-ಡಿಸೆಂಬರ್​ನಲ್ಲಿ ಅರಳುತ್ತದೆ. ಇದನ್ನು ಸರೋವರ, ತೊಟ್ಟಿ, ಕುಂಡದಲ್ಲೂ ಬೆಳೆಯಬಹುದಾಗಿದೆ.
#Lotusis the national flower of India and a symbol of faith for us. Proud to launch new variety#Lotusflower ‘Namoh 108’, first of its kind whose genome is completely sequenced for its characteristics. Developed by National Botanical Research Institute#Lucknow.pic.twitter.com/cgEdXbjFN3
— Dr Jitendra Singh (@DrJitendraSingh)August 19, 2023

ವಿವಿ ಕ್ಯಾಂಪಸ್​ನಲ್ಲಿ ಮದ್ಯಪಾನ-ಧೂಮಪಾನ ನಮ್ಮ ಹಕ್ಕು ಎಂದ ವಿದ್ಯಾರ್ಥಿನಿ!

‘ಅಯ್ಯೋ ಪಾಪ..’ ಎಂದು ಹಣ ಹಾಕುವ ಮುನ್ನ ಹುಷಾರು: ಹೀಗೂ ವಂಚಿಸುತ್ತಾರೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + ten =
Remember me
