ಶ್ರೀನಗರ:ಉಗ್ರಗಾಮಿಗಳೊಂದಿಗೆ ನಂಟು ಹೊಂದಿದ ಇಬ್ಬರು ಪೊಲೀಸ್ ಕಾನ್​ಸ್ಟೆಬಲ್​ಗಳು ಸೇರಿ ಜಮ್ಮು-ಕಾಶ್ಮೀರದ ಆರು ಸರ್ಕಾರಿ ಉದ್ಯೋಗಿಗಳನ್ನು ವಜಾಗೊಳಿಸಲಾಗಿದೆ. ಜಮ್ಮು-ಕಾಶ್ಮೀರ ಆಡಳಿತದ ನೌಕರರ ವಜಾ ಸಮಿತಿ ಸಂವಿಧಾನದ ಅನುಚ್ಛೇದ 311(2)(ಸಿ) ಪ್ರಕಾರ ಈ ಕ್ರಮಕ್ಕೆ ಶಿಫಾರಸು ಮಾಡಿತ್ತು. ಈ ಮೂಲಕ ಕಳೆದ ಆರು ತಿಂಗಳಿಂದ ಇದೇ ಕಾರಣಕ್ಕೆ ಉದ್ಯೋಗದಿಂದ ತೆಗೆದು ಹಾಕಲಾದವರ ಸಂಖ್ಯೆ 25ಕ್ಕೆ ಏರಿದೆ.
ಅನಂತನಾಗ್ ಬಿಜೆಬೆಹರಾ ನಿವಾಸಿಯಾದ ಶಿಕ್ಷಕ ಅಬ್ದುಲ್ ಹಮೀದ್ ವಾನಿ, ಅಲ್ಲಾಹ್ ಟೈಗರ್ಸ್ ಎಂಬ ಉಗ್ರ ಸಂಘಟನೆಯ ಜಿಲ್ಲಾ ಕಮಾಂಡರ್ ಆಗಿದ್ದ. ಕಿಶ್ತವಾರಾ ನಿವಾಸಿ ಕಾನ್​ಸ್ಟೆಬಲ್ ಜಾಫರ್ ಹುಸೈನ್ ಬಟ್, ತನ್ನ ಕಾರನ್ನು ಹಿಜ್ಬುಲ್ ಉಗ್ರರ ಬಳಕೆ ನೀಡಿದ ಆರೋಪದ ಮೇಲೆ ಬಂಧಿಸಲ್ಪಟ್ಟಿದ್ದ. ಬದ್ಗಾಂ ನಿವಾಸಿ ಕಾನ್​ಸ್ಟೆಬಲ್ ಶೌಕತ್ ಅಹ್ಮದ್ ಖಾನ್, ಎಂಎಲ್​ಸಿ ಮನೆಯಿಂದ ಶಸ್ತ್ರಾಸ್ತ್ರ ಕೊಳ್ಳೆ ಹೊಡೆದ ಪ್ರಕರಣದ ಆರೋಪಿ. ಕಿಶ್ತವಾರಾ ನಿವಾಸಿಯಾದ ಮೊಹಮ್ಮದ್ ರಫಿ ಬಟ್ ರೋಡ್ ಆಂಡ್ ಬಿಲ್ಡಿಂಗ್ ಡಿಪಾರ್ಟ್​ವೆುಂಟ್​ನಲ್ಲಿ ಕಿರಿಯ ದರ್ಜೆ ಗುಮಾಸ್ತಯಾಗಿದ್ದ. ಹಿಜ್ಬುಲ್ ಚಟುವಟಿಕೆಗೆ ಲಾಜಿಸ್ಟಿಕ್ಸ್ ನೆರವು ಒದಗಿಸಿದ ಆರೋಪ ಈತನ ಮೇಲಿದೆ. ಬಾರಾಮುಲ್ಲಾದ ನಿವಾಸಿ ಲಿಯಾಖತ್ ಅಲಿ ಕಕ್ರೂ ಶಿಕ್ಷಕ. 2001ರಲ್ಲಿ ಉಗ್ರ ಚಟುವಟಿಕೆ ಸಂಬಂಧ ಬಂಧಿತನಾಗಿದ್ದ. ಪೂಂಛ್ ನಿವಾಸಿ ಫಾರೆಸ್ಟ್ ರೇಂಜ್ ಆಫೀಸರ್ ತಾರಿಖ್ ಮೆಹಮೂದ್ ಕೊಹ್ಲಿ ವಜಾಗೊಂಡ ಮತ್ತೊಬ್ಬ ಉದ್ಯೋಗಿ. ಅಕ್ರಮ ಶಸ್ತ್ರಾಸ್ತ್ರ ಸಾಗಣೆ, ಮಾದಕ ವಸ್ತು, ನಕಲಿ ಕರೆನ್ಸಿ ಪಾಕಿಸ್ತಾನದಿಂದ ಸಾಗಿಸಿದ ಪ್ರಕರಣದಲ್ಲಿ ಆರೋಪಿ.
ಕಾಸರಗೋಡಿನಲ್ಲಿ ಹೈ ಅಲರ್ಟ್
ಕಾಸರಗೋಡು: ಲಂಕಾದಿಂದ ಕೇರಳಕ್ಕೆ ಉಗ್ರರ ಆಗಮನ ಬಗ್ಗೆ ಬೇಹುಗಾರಿಕಾ ಇಲಾಖೆ ಮಾಹಿತಿ ಹಿನ್ನೆಲೆಯಲ್ಲಿ ಕಾಸರಗೊಡು ಜಿಲ್ಲೆ ಸಹಿತ ಕೇರಳ ರಾಜ್ಯಾದ್ಯಂತ ಕೇಂದ್ರ ತನಿಖಾ ಏಜನ್ಸಿಗಳು ಹಾಗೂ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಜನವಸತಿ ಇಲ್ಲದ ಕಟ್ಟಡಗಳ ತಪಾಸಣೆ ನಡೆಸಲಾಗುತ್ತಿದೆ. ಕರಾವಳಿಯಲ್ಲಿ ವಾಸಿಸುತ್ತಿರುವ ಅನ್ಯ ರಾಜ್ಯದವರ ಮೇಲೆ ನಿಗಾ ಇರಿಸಲಾಗುತ್ತಿದ್ದು, ವಾಸ್ತವ್ಯ, ಪ್ರಯಾಣದ ಸೂಕ್ತ ದಾಖಲೆ ಇಲ್ಲದವರನ್ನು ಗುರುತಿಸಲಾಗುತ್ತಿದೆ. ಅಪರಿಚಿತರು ಬಂದರೆ ತಕ್ಷಣ ಮಾಹಿತಿ ನೀಡಲು ಹೋಟೆಲ್, ವಸತಿಗೃಹಗಳ ಮಾಲೀಕರಿಗೆ ಸೂಚನೆ ನೀಡಲಾಗಿದೆ. ಅಪರಿಚಿತ ಬೋಟ್​ಗಳು ಕಂಡುಬಂದಲ್ಲಿ ಮಾಹಿತಿ ನೀಡುವಂತೆ ಮೀನುಗಾರರಿಗೆ ನಿರ್ದೇಶನ ನೀಡಲಾಗಿದೆ. ಇತ್ತೀಚೆಗೆ ಪರವಾನಗಿ ಇಲ್ಲದೆ ಕೇರಳಕ್ಕೆ ಬಂದ 35 ದೋಣಿಗಳನ್ನು ಮೀನುಗಾರಿಕಾ ಇಲಾಖೆಗೆ ಪೊಲೀಸರು ಹಸ್ತಾಂತರಿಸಿದ್ದು, ತನಿಖೆ ನಡೆಯುತ್ತಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + 5 =
Remember me
