ನವದೆಹಲಿ:ಇಂಟರ್ನೆಟ್ ಕೂಡ ವಾಕ್​ ಮತ್ತು ಅಭಿವ್ಯಕ್ತಿ ಸ್ವಾಂತಂತ್ರ್ಯದ ಒಂದು ಭಾಗವಾಗಿದೆ ಎಂದು ಅಭಿಪ್ರಾಯಪಟ್ಟಿರುವ ಸುಪ್ರೀಂಕೋರ್ಟ್​, ಒಂದು ವಾರದೊಳಗೆ ಇಂಟರ್ನೆಟ್ ಸೇರಿದಂತೆ ನಿರ್ಬಂಧಿಸಲಾಗಿರುವ ಎಲ್ಲವನ್ನು ಮರುಸ್ಥಾಪಿಸಬೇಕೆಂದು ಜಮ್ಮು ಮತ್ತು ಕಾಶ್ಮೀರ ಆಡಳಿತಕ್ಕೆ ಶುಕ್ರವಾರ ಆದೇಶ ಹೊರಡಿಸಿದೆ.
ಆರ್ಟಿಕಲ್​ 370 ಅಡಿಯಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನವನ್ನು ಕಳೆದ ಆಗಸ್ಟ್​ನಲ್ಲಿ ಕೇಂದ್ರ ಸರ್ಕಾರ ರದ್ದುಗೊಳಿದೆ. ಈ ವೇಳೆ ಮುಂಜಾಗ್ರತ ಕ್ರಮವಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ಅನೇಕ ನಿರ್ಬಂಧಗಳನ್ನು ಹೇರಲಾಗಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್​ಗೆ ಅರ್ಜಿ​ ದಾಖಲಾಗಿತ್ತು. ಈ ಸಂಬಂಧ ನಿರ್ಬಂಧ ತೆರವುಗೊಳಿಸುವಂತೆ ಇಂದು ಆದೇಶಿಸಿದೆ.
ಅಂತರ್ಜಾಲ ಅಮಾನತ್ತನ್ನು ತಕ್ಷಣವೇ ಮರು ಪರಿಶೀಲಿಸಬೇಕಾಗಿದೆ. ಇಂತಹ ನಿರ್ಬಂಧಗಳು ಕೆಲವೇ ಸಮಯಗಳವರೆಗೆ ಮಾತ್ರ ಇರಬೇಕು. ಇದು ಕೂಡ ನ್ಯಾಯಾಂಗ ಪರಿಶೀಲನೆಯ ವಿಷಯವಾಗಿದೆ ಎಂದು ಸುಪ್ರೀಂಕೋರ್ಟ್​ ತಿಳಿಸಿದ್ದು, ಮುಕ್ತ ಓಡಾಟ, ಅಂತರ್ಜಾಲ ಹಾಗೂ ಮೂಲಭೂತ ಸ್ವಾತಂತ್ರ್ಯದ ಮೇಲಿನ ನಿರ್ಬಂಧ ಅಧಿಕಾರದ ಅನಿಯಂತ್ರಿತ ವ್ಯಾಯಮ ಆಗಬಾರದು ಎಂದು ಹೇಳಿತು.
ಎಲ್ಲ ನಿರ್ಬಂಧಿತ ಆದೇಶಗಳು ಸಾರ್ವಜನಿಕರಿಗಾಗಿ ಮಾಡಿರುವುದರಿಂದ ಅದನ್ನು ಕಾನೂನಾತ್ಮಕವಾಗಿ ಅವರು ಪ್ರಶ್ನಿಸಬಹುದಾಗಿದೆ. ಇಂಟರ್ನೆಟ್ ಹಕ್ಕು ಸೇರಿ ವಾಕ್​ ಮತ್ತು ಅಭಿವ್ಯಕ್ತಿ ಸ್ವಾಂತಂತ್ರ್ಯ ಆರ್ಟಿಕಲ್​ 19ರಲ್ಲಿ ಅಡಕವಾಗಿದೆ ಎಂದು ನ್ಯಾಯಮೂರ್ತಿ ಎನ್​.ವಿ.ರಮಣ ಅವರು ತೀರ್ಪು ಓದಿದರು.
ಇದೇ ವೇಳೆ ಜಮ್ಮು ಮತ್ತು ಕಾಶ್ಮೀರದಲ್ಲಿ ಹೇರಲಾಗಿದ್ದು 144 ಸೆಕ್ಷನ್​ ಅನ್ನು ಟೀಕಿಸಿದ ನ್ಯಾಯಾಲಯ ಇದು ಜನರ ಭಿನ್ನಾಭಿಪ್ರಾಯಗಳನ್ನು ಹತ್ತಿಕ್ಕುವ ಸಾಧವಾಗಬಾರದು ಎಂದು ಹೇಳಿತು. ಸುರಕ್ಷತೆ ಮತ್ತು ಜನರ ಸ್ವಾತಂತ್ರ್ಯದಲ್ಲಿ ಸಮತೋಲನ ಕಾಪಾಡಿಕೊಳ್ಳಬೇಕು. ಜನರಿಗೆ ಒದಗಿಸಲಾಗಿರುವ ಹಕ್ಕುಗಳನ್ನು ಖಚಿತಪಡಿಸಲು ಮಾತ್ರ ನಾವು ಇಲ್ಲಿ ಕುಳಿತಿದ್ದೇವೆ ಎಂದರು.
ಎನ್​.ವಿ.ರಮಣ, ಆರ್. ಸುಭಾಷ್​ ರೆಡ್ಡಿ ಮತ್ತು ಬಿ.ಆರ್​.ಗವಾಯಿ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ಈ ಮೊದಲೇ ವಿಚಾರಣೆ ಮುಗಿಸಿ ನವೆಂಬರ್​ 27ರಂದು ತೀರ್ಪು ಕಾಯ್ದಿರಿಸಿತ್ತು.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − two =
Remember me
