ಶ್ರೀನಗರ:ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದು, ಮಹಿಳೆ ಸೇರಿದಂತೆ ಶಾಲೆಯ ಇಬ್ಬರು ಶಿಕ್ಷಕರ ಮೇಲೆ ಗುಂಡಿನ ದಾಳಿ ನಡೆಸಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ.
ಗುರುವಾರ ಬೆಳಗ್ಗೆ ಈ ಘಟನೆ ನಡೆದಿದ್ದು, ಮೃತರನ್ನು ಪ್ರಾಂಶುಪಾಲೆ ಸುಪಿಂದರ್​ ಕೌರ್​ (44) ಮತ್ತು ಶಿಕ್ಷಕ ದೀಪಕ್​ ಚಂದ್​ ಎಂದು ಗುರುತಿಸಲಾಗಿದೆ. ಸಂಗಮ್​ನಲ್ಲಿರುವ ಸರ್ಕಾರಿ ಬಾಲಕರ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು.
ಗುಂಡಿನ ದಾಳಿ ಬೆನ್ನಲ್ಲೇ ರಕ್ತದ ಮಡುವಿನಲ್ಲಿ ಬಿದ್ದಿದ್ದ ಇಬ್ಬರು ಆಸ್ಪತ್ರೆಗೆ ದಾಖಲಿಸಿದಾದರೂ ಅಷ್ಟರಲ್ಲಾಗಲೇ ಇಬ್ಬರು ಮೃತಪಟ್ಟಿದ್ದರು. ಘಟನೆಯ ಬೆನ್ನಲ್ಲೇ ಭದ್ರತಾ ಪಡೆಗಳು ಪ್ರದೇಶವನ್ನು ಸುತ್ತುವರಿದಿದ್ದು, ಉಗ್ರರಿಗಾಗಿ ಶೋಧ ಕಾರ್ಯಾಚರಣೆಯನ್ನು ಆರಂಭಿಸಿವೆ.
ಶ್ರೀನಗರದ ಜನಪ್ರಿಯ ಔಷಧಾಲಯದ ಮಾಲೀಕರಾದ ಮಖನ್ ಲಾಲ್ ಬಿಂದ್ರೂ ಅವರನ್ನು ಶ್ರೀನಗರದ ಇಕ್ಬಾಲ್ ಪಾರ್ಕ್ ಪ್ರದೇಶದಲ್ಲಿರುವ ಆತನ ಅಂಗಡಿಯ ಬಳಿ ಉಗ್ರರು ಹೊಡೆದುರುಳಿಸಿದ ಎರಡು ದಿನಗಳ ನಂತರ ಈ ಘಟನೆ ಸಂಭವಿಸಿದೆ.(ಏಜೆನ್ಸೀಸ್​)
ಮಾಯಾಂಗನೆಯ ಒಂದೇ ಒಂದು ಮಾತಿಗೆ ಮರುಳಾಗಿ 1.20 ಕೋಟಿ ರೂ. ಕಳ್ಕೊಂಡವನ ವ್ಯಥೆ ಇದು..!

ಬಿಎಸ್​ವೈ ಆಪ್ತನ ಮನೆ ಮೇಲೆ ಐಟಿ ದಾಳಿ! ವಿಜಯೇಂದ್ರ, ರಾಘವೇಂದ್ರರ ವ್ಯವಹಾರದಲ್ಲೂ ಉಮೇಶನ ಕೈಚಳಕ…

ಶೂಟಿಂಗ್​ ಸೆಟ್​ನಲ್ಲಿ ಗಳಗಳನೇ ಅತ್ತ ಸಮಂತಾ! ಸ್ಯಾಮ್​ ಕಣ್ಣೀರು ನೋಡಿ ಚಿತ್ರತಂಡ ಹೇಳಿದ್ದು ಹೀಗೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − four =
Remember me
