ಶ್ರೀನಗರ:ಕಾಶ್ಮೀರದಲ್ಲಿ ನಾಗರಿಕರನ್ನು ಉಗ್ರರು ಟಾರ್ಗೆಟ್ ಮಾಡಿ ಹತ್ಯೆ ಮಾಡಲು ಆರಂಭಿಸಿದ ಬೆನ್ನಿಗೆ ಅಲ್ಲಿ ಕಟ್ಟೆಚ್ಚರ ಘೋಷಣೆಯಾಗಿದೆ. ಉಗ್ರ ನಿಗ್ರಹ ಕಾರ್ಯಾಚರಣೆಯೂ ಚುರುಕುಗೊಂಡಿದೆ. ಕಳೆದ 10 ದಿನಗಳ ಅವಧಿಯಲ್ಲಿ 9 ಎನ್​ಕೌಂಟರ್​ಗಳಾಗಿದ್ದು 13 ಉಗ್ರರನ್ನು ಭದ್ರತಾ ಪಡೆ ಹೊಡೆದುರುಳಿಸಿದೆ. ಉಗ್ರರ ಟಾರ್ಗೆಟ್​ಗೆ ಇದುವರೆಗೆ 8 ನಾಗರಿಕರು ಬಲಿಯಾಗಿದ್ದಾರೆ.
ಕಳೆದ 24 ಗಂಟೆ ಅವಧಿಯಲ್ಲಿ ಶ್ರೀನಗರ ಪಟ್ಟಣದಲ್ಲೇ ಮೂವರು ಉಗ್ರರನ್ನು ಹತ್ಯೆ ಮಾಡಲಾಗಿದೆ. ಇದಕ್ಕೂ ಮುನ್ನ ಅವಂತಿಪೋರಾದ ಪ್ಯಾಂಪೋರಾ ಪ್ರದೇಶದಲ್ಲಿ ಒಬ್ಬ ಎಲ್​ಇಟಿ ಕಮಾಂಡರ್ ಸೇರಿ ಇಬ್ಬರು ಉಗ್ರರನ್ನು ಹತ್ಯೆ ಮಾಡಲಾಗಿತ್ತು. ಅವಂತಿಪೋರಾದಲ್ಲಿ ಉಗ್ರರ ಶರಣಾಗತಿಗೆ ಅವಕಾಶ ನೀಡಿದರೂ ನಿರಾಕರಿಸಿ ದಾಳಿ ನಡೆಸಿದ್ದರಿಂದ ಪ್ರತಿದಾಳಿಯಲ್ಲಿ ಅವರನ್ನು ಹತ್ಯೆ ಮಾಡಲಾಗಿದೆ ಎಂದು ಕಾಶ್ಮೀರದ ಐಜಿ ವಿಜಯಕುಮಾರ್ ಹೇಳಿದ್ದಾರೆ.
ಮೃತ ಎಲ್​ಇಟಿ ಕಮಾಂಡರ್​ನನ್ನು ಉಮರ್ ಖಾಂಡೇ ಎಂದು ಗುರುತಿಸಲಾಗಿದೆ. ಇನ್ನೊಬ್ಬ ಮುಹಮ್ಮದ್ ಸುಲ್ತಾನ್. ಆತ ಕೂಡ ಎಲ್​ಇಟಿ ಕಮಾಂಡರ್ ಆಗಿದ್ದಾತ ಎಂದು ಗುರುತಿಸಲಾಗಿದೆ. ಉಮರ್ ಖಾಂಡೇ ಶ್ರೀನಗರದ ಭಾಘಟ್ ಪ್ರದೇಶದಲ್ಲಿ ನಡೆದ ಇಬ್ಬರು ಪೊಲೀಸರ ಹತ್ಯೆ ಪ್ರಕರಣದ ಆರೋಪಿಯಾಗಿದ್ದ.
ಡ್ರೋನ್ ನಿರೋಧಕ ರಕ್ಷಣೆ:ಜಮ್ಮು ವಾಯುನೆಲೆಯ ಮೇಲೆ ಜೂನ್ 27ರಂದು ಅವಳಿ ಡ್ರೋನ್ ದಾಳಿ ನಡೆದ ಕಾರಣ ಈ ವಾಯುನೆಲೆ ಮತ್ತು ಶ್ರೀನಗರ ವಾಯುನೆಲೆಗಳಿಗೆ ಡ್ರೋನ್ ನಿರೋಧಕ ರಕ್ಷಣೆಯನ್ನು ನ್ಯಾಷನಲ್ ಸೆಕ್ಯೂರಿಟಿ ಗಾರ್ಡ್ (ಎನ್​ಎಸ್​ಜಿ) ನಿಯೋಜಿಸಿದೆ. ಡ್ರೋನ್ ನಿರೋಧಕ ವ್ಯವಸ್ಥೆಯಲ್ಲಿ ರಾಡಾರ್​ಗಳು, ಜಾಮರ್​ಗಳು ಮತ್ತು ಡ್ರೋನ್ ಕಿಲ್ಲರ್ ಗನ್​ಗಳಿರುತ್ತವೆ.
ಹುತಾತ್ಮರ ಸಂಖ್ಯೆ 9ಕ್ಕೆ ಏರಿಕೆ
ಜಮ್ಮು-ಕಾಶ್ಮೀರದಲ್ಲಿ ತೀವ್ರಗೊಂಡಿರುವ ಉಗ್ರ ನಿಗ್ರಹ ಕಾರ್ಯಾಚರಣೆಯಲ್ಲಿ ಸೇನೆಗೂ ಆಗಿರುವ ಹಾನಿ ಬಹಿರಂಗವಾಗಿದೆ. ನಾಪತ್ತೆಯಾಗಿದ್ದ ಇಬ್ಬರು ಯೋಧರ ಮೃತದೇಹ ಪತ್ತೆಯಾಗಿದ್ದು, ಒಟ್ಟು 9 ಯೋಧರು ಹುತಾತ್ಮರಾಗಿದ್ದಾರೆ. ಅವರ ಪಾರ್ಥಿವ ಶರೀರವನ್ನು ಸೇನಾ ನೆಲೆಗೆ ತರಲಾಗಿದೆ. ಇತ್ತೀಚಿನ ದಿನಗಳಲ್ಲಿ ಉಗ್ರ ನಿಗ್ರಹ ಕಾರ್ಯಾ ಚರಣೆಯಲ್ಲಿ ಸೇನೆ ಈ ಪ್ರಮಾಣದಲ್ಲಿ ಯೋಧರನ್ನು ಕಳೆದುಕೊಂಡಿರುವುದು ಇದೇ ಮೊದಲು.
ಟಿಫಿನ್ ಬಾಂಬ್​ಗೆ ಶೋಧ
ಪಾಕಿಸ್ತಾನದ ಗಡಿ ಗ್ರಾಮಗಳಲ್ಲಿ ಡ್ರೋನ್ ಮೂಲಕ ಟಿಫಿನ್ ಬಾಂಬ್​ಗಳನ್ನು ಎಸೆಯಲಾಗುತ್ತಿದೆ. ಅದನ್ನು ಉಗ್ರರ ಸರಕು ಸಾಗಣೆ ಕೆಲಸಗಾರರು ಕಲೆಹಾಕಿ ವಿಧ್ವಂಸಕ ಕೃತ್ಯಗಳಿಗೆ ಬಳಸುತ್ತಿರುವುದು ಗಮನಕ್ಕೆ ಬಂದಿದೆ. ಹೀಗಾಗಿ ಗಡಿಯಲ್ಲಿ ಟಿಫಿನ್ ಬಾಂಬ್​ಗಳಿಗೆ ಶೋಧ ಮುಂದುವರಿದಿದೆ.
ಮತ್ತೊಬ್ಬ ನಾಗರಿಕನ ಹತ್ಯೆ
ಶ್ರೀನಗರದ ಈದ್ಗಾ ಪ್ರದೇಶದಲ್ಲಿ ಶನಿವಾರ ಸಂಜೆ 6.40ಕ್ಕೆ ಶಂಕಿತ ಉಗ್ರರು ಉತ್ತರ ಪ್ರದೇಶದ ಕಾರ್ವಿುಕ ಅರವಿಂದ ಕುಮಾರ್ (36) ಎಂಬುವವರನ್ನು ಹತ್ಯೆ ಮಾಡಿದ್ದಾರೆ. ಕೆಲವು ದಿನಗಳ ಹಿಂದೆ ಬಿಹಾರದ ಬೀದಿ ಬದಿ ವ್ಯಾಪಾರಿ ವೀರೇಂದ್ರ ಪಾಸ್ವಾನ್ ಅವರನ್ನು ಹತ್ಯೆ ಮಾಡಿದ್ದರು. ಇದರೊಂದಿಗೆ ಉಗ್ರರ ದಾಳಿಗೆ ಬಲಿಯಾದ ನಾಗರಿಕರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ.
ಹೊಸ ಉಗ್ರ ಸಂಘಟನೆ
ಪಾಕ್ ಮೂಲದ ಉಗ್ರ ಸಂಘಟನೆಗಳು ಕಾಶ್ಮೀರದಲ್ಲಿ ಉಗ್ರ ಕೃತ್ಯಗಳನ್ನು ನಡೆಸುವುದಕ್ಕಾಗಿ ಹೊಸ ಉಗ್ರ ಸಂಘಟನೆಯನ್ನು ರಚಿಸಿದ್ದಾರೆ. ದ ರೆಸಿಸ್ಟೆನ್ಸ್ ಫ್ರಂಟ್ ಹೆಸರಿನ ಸಂಘಟನೆ ಕಳೆದ ವರ್ಷ ಚಾಲ್ತಿಗೆ ಬಂದಿದ್ದು, ಈಗ ಕಾಶ್ಮೀರದಲ್ಲಿ ನಡೆಯುತ್ತಿರುವ ನಾಗರಿಕರ ಮೇಲಿನ ದಾಳಿಯ ಸಂಪೂರ್ಣ ಹೊಣೆಗಾರಿಕೆ ಅದರದ್ದೇ ಆಗಿದೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + fifteen =
Remember me
