ನವದೆಹಲಿ: ಜವಹಾರ್​ಲಾಲ್​ ನೆಹರು ವಿಶ್ವವಿದ್ಯಾಲಯದ ಆವರಣದಲ್ಲಿ ಹಿಂಸಾಚಾರ ನಡೆದು ತಿಂಗಳು ಕಳೆದರೂ ತನಿಖೆ ಪ್ರಗತಿಯಾಗಿಲ್ಲ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾರಕಾಸ್ತ್ರ ಹೊಂದಿದ ಅಪರಿಚಿತರ ಗುಂಪು ವಿವಿ ಆವರಣಕ್ಕೆ ನುಗ್ಗಿ ವಿದ್ಯಾರ್ಥಿ ಹಾಗೂ ಉಪನ್ಯಾಸಕರ ಮೇಲೆ ಹಲ್ಲೆ ನಡೆಸಿತ್ತು. ಹಲ್ಲೆ ನಡೆಸಿದ ಘಟನೆ ಗಂಭೀರತೆ ಪಡೆದ ನಂತರ ತನಿಖೆಗಾಗಿ ಕೇಂದ್ರ ಸರ್ಕಾರ ವಿಶೇಷ ಪೊಲೀಸರ ತಂಡ ಹಾಗೂ ವಿಶ್ವವಿದ್ಯಾಲಯ ತನಿಖೆ ಸಮಿತಿ ರಚಿಸಿತು. ವಿಶೇಷ ಪೊಲೀಸ್​ ತಂಡ ಹಾಗೂ ವಿವಿ ತನಿಖಾ ಸಮಿತಿ ರಚನೆಯಾಗಿ ಹಲವು ದಿನ ಕಳೆದರೂ ತನಿಖೆ ಪ್ರಗತಿಯಾಗಿಲ್ಲ ಎಂಬುದು ಆಕ್ರೋಶಕ್ಕೆ ಕಾರಣವಾಗಿದೆ.
ವಿವಿ ತನಿಖಾ ಸಮಿತಿ ಇದುವರೆವಿಗೂ ತನಿಖೆ ಆರಂಭಿಸಿಲ್ಲ. ವಿಶೇಷ ಪೊಲೀಸರ ತಂಡ ಮಾತ್ರ ಜೆಎನ್​ಯು ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಆಯಿಷೆ ಘೋಷ್ ಸೇರಿದಂತೆ ಹಲವರನ್ನು ಭೇಟಿ ಮಾಡಿ ಮಾಹಿತಿ ಪಡೆದಿದೆ. ಇದರ ಹೊರತಾಗಿ ಗಂಭೀರ ತನಿಖೆ ನಡೆದಿಲ್ಲ ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − two =
Remember me
