ನವದೆಹಲಿ:ಜವಾಹರ್​ ಲಾಲ್​ ನೆಹರು ವಿಶ್ವವಿದ್ಯಾಲಯದಲ್ಲಿ ನಡೆದ ಹಿಂಸಾಚಾರ ಪ್ರಕರಣವನ್ನು ಪೊಲೀಸರು ತನಿಖೆ ನಡೆಸುತ್ತಿರುವ ರೀತಿ ಸರಿಯಾಗಿಲ್ಲ. ಇದೊಂದು ಮೋಸದಿಂದ ಕೂಡಿದ ಹಾಗೂ ವಂಚನಾತ್ಮಕ ತನಿಖೆ ಎಂದು ಜೆಎನ್​ಯು ವಿದ್ಯಾರ್ಥಿ ಸಂಘಟನೆ ಶನಿವಾರ ಆರೋಪಿಸಿದೆ.
ದೆಹಲಿ ಪೊಲೀಸರು ನಡೆಸಿದ ಸುದ್ದಿಗೋಷ್ಠಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್​ (ಎಬಿವಿಪಿ) ನ ಸುದ್ದಿಗೋಷ್ಠಿಯಂತೆ ಭಾಸವಾಗುತ್ತಿತ್ತು. ಎಬಿವಿಪಿ ಪದಾಧಿಕಾರಿಗಳು ಬರೆದುಕೊಟ್ಟಿದ್ದನ್ನು ಪೊಲೀಸರು ಓದುತ್ತಿದ್ದಾರೇನೋ ಎಂದು ಅನ್ನಿಸುತ್ತಿತ್ತು. ದೆಹಲಿ ಪೊಲೀಸರು ಹಿಂಸಾಚಾರಕ್ಕೆ ಸಂಬಂಧಪಟ್ಟಂತೆ ನಕಲಿ ತನಿಖೆ ನಡೆಸುತ್ತಿದ್ದಾರೆ. ವಂಚನೆ ಮಾಡುತ್ತಿದ್ದಾರೆ ಎಂದು ಜೆಎನ್​ಯುಎಸ್​ಯು ಸದಸ್ಯರು ಇಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ.
ಹಿಂಸಾಚಾರದಲ್ಲಿ ಎಬಿವಿಪಿ ಪಾತ್ರ ಇದೆ ಎಂಬುದು ಈಗಾಗಲೇ ಹಲವು ವಿಡಿಯೋಗಳ ಮೂಲಕ ಸಾಬೀತಾಗಿದೆ. ಹಲವು ಮಾಧ್ಯಮಸಂಸ್ಥೆಗಳೂ ಇದನ್ನೂ ವರದಿ ಮಾಡಿವೆ. ಈ ಹಿಂಸಾಚಾರಕ್ಕೆ ಪೊಲೀಸ್​ ಹಾಗೂ ಇಲ್ಲಿನ ಆಡಳಿತದ ಬೆಂಬಲವಿದೆ. ಕೆಲವು ಸುಳ್ಳು ಹಾಗೂ ಫೇಕ್​ ಫೋಟೋ, ವಿಡಿಯೋಗಳನ್ನು ವೈರಲ್​ ಮಾಡಿ ಜೆಎನ್​ಯುಗೆ ಬೆದರಿಕೆ ಒಡ್ಡುವ ಪಿತೂರಿ ನಡೆಯುತ್ತಿದೆ ಎಂದು ಹೇಳಿದ್ದಾರೆ.
ಜ.5ರಂದು ನಡೆದ ಹಿಂಸಾಚಾರದ ತನಿಖೆ ನಡೆಸುತ್ತಿರುವ ದೆಹಲಿ ಕ್ರೈಂ ಬ್ರಾಂಚ್​ನ ಪೊಲೀಸರು ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ್ದರು. ಅಲ್ಲದೆ, 9 ಜನ ಶಂಕಿತರ ಫೋಟೋಗಳನ್ನು ಬಿಡುಗಡೆ ಮಾಡಿದ್ದರು. ಅಷ್ಟೇ ಅಲ್ಲದೆ, ಶಂಕಿತರ ವಿಚಾರಣೆಯನ್ನು ಆದಷ್ಟು ಬೇಗ ಶುರು ಮಾಡುವುದಾಗಿ ತಿಳಿಸಿದ್ದಾರೆ. ಪೊಲೀಸರು ಹೆಸರಿಸಿದ ಶಂಕಿತರಲ್ಲಿ ಜೆಎನ್​ಯು ವಿದ್ಯಾರ್ಥಿ ಸಂಘಟನೆ ಅಧ್ಯಕ್ಷೆ ಐಷೆ ಘೋಷ್​ ಸೇರಿ ಮತ್ತೂ ಕೆಲವರಿದ್ದಾರೆ. ಈಗ ಇದೇ ವಿಚಾರಕ್ಕೆ ಪ್ರತಿ ಸುದ್ದಿಗೋಷ್ಠಿ ನಡೆಸಿದ ಜೆಎನ್​ಯು ಸ್ಟುಡೆಂಟ್ ಯೂನಿಯನ್​ ಸದಸ್ಯರು ಪೊಲೀಸರ ವಿರುದ್ಧವೇ ಗಂಭೀರ ಆರೋಪ ಮಾಡಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − fifteen =
Remember me
