ಬೆಂಗಳೂರು:ಹೆಸರನ್ನು ಮನೆಯ ಹಿರಿಯರು ಇಟ್ಟರೆ, ಅಡ್ಡ ಹೆಸರು (ಸರ್‌ ನೇಮ್‌) ಮಾತ್ರ ಕುಟುಂಬದ ತಲೆತಲಾಂತರಗಳಿಂದ ಬಂದಿರುತ್ತದೆ. ಹೆಸರು ಬೇಡ ಎಂದರೆ ಅದನ್ನೇನೋ ಬದಲಾಯಿಸಲು ಮಾರ್ಗಗಳಿವೆ. ಆದರೆ ಸರ್‌ನೇಮ್‌ ಬದಲಾವಣೆ ಮಾತ್ರ ಬಲು ಕಷ್ಟ.
ಅಷ್ಟಕ್ಕೂ ಸರ್‌ ನೇಮ್‌ ಬದಲಾಯಿಸುವುದು ಪ್ರಶ್ನೆ ಏಕೆ ಅಂತೀರಾ? ಇಲ್ಲೇ ಇರುವುದು ಸ್ವಾರಸ್ಯ. ಅಸ್ಸಾಂನ ಗುವಾಹಟಿಯ ಯುವತಿಯೊಬ್ಬಳಿಗೆ ಆಕೆಯ ಸರ್‌ನೇಮ್‌ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಈಕೆಯ ಸರ್‌ನೇಮ್‌ ಆನ್‌ಲೈನ್‌ನಲ್ಲಿ ಫೀಡ್‌ ಮಾಡಲು ಹೋದರೂ ಸಾಫ್ಟ್‌ವೇರ್‌ ಅದನ್ನು ತೆಗೆದುಕೊಳ್ಳುತ್ತಿರಲಿಲ್ಲವಂತೆ. ಆದ್ದರಿಂದ ಇವಳ ಉಸಾಬರಿಯೇ ಬೇಡ ಎಂದು ರಿಜೆಕ್ಟ್‌ ಮಾಡಿ ಕಳಿಸುತ್ತಿದ್ದರು!
ಇಂಥದ್ದೊದು ಸಮಸ್ಯೆ ಎದುರಿಸುತ್ತಿದ್ದವಳು ಪ್ರಿಯಾಂಕಾ. ಈಕೆಯ ಹೆಸರಿನಲ್ಲಿ ಯಾವುದೇ ಸಮಸ್ಯೆ ಇಲ್ಲ. ಆದರೆ ಈಕೆಯ ಸರ‌ ನೇಮ್‌ ಚುಟಿಯಾ (Chutia). ಅಷ್ಟಕ್ಕೂ ಚುಟಿಯಾ ಎಂದರೆ ಮೂರ್ಖಳು, ಈಡಿಯೆಟ್‌ ಎಂದರ್ಥ. ಇದನ್ನು ಅತ್ಯಂಥ ಕೆಟ್ಟ ಪದವಾಗಿಯೂ ಬಳಕೆ ಮಾಡುವುದುಂಟು. ಇದೇ ಕಾರಣಕ್ಕೆ ತನ್ನ ಹೆಸರು ನೋಡಿ ಎಲ್ಲರೂ ನಗುತ್ತಾರೆ, ಎಲ್ಲಿಯೂ ಕೆಲಸ ಕೊಡುವುದಿಲ್ಲ ಎಂದು ನೋವಿನಿಂದ ನುಡಿಯುತ್ತಾಳೆ ಪ್ರಿಯಾಂಕಾ.
ಅಗ್ರಿಕಲ್ಚರಲ್‌ ಎಕಾನಾಮಿಕ್ಸ್‌ ಆ್ಯಂಡ್‌ ಫಾರ್ಮ್‌ ಮ್ಯಾನೇಜ್‌ಮೆಂಟ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಈ ಪ್ರತಿಭಾನ್ವಿತೆಗೆ ಸರ್‌ನೇಮ್‌ ಮುಳುವಾಗಿಬಿಟ್ಟಿದೆ.
ಇದನ್ನೂ ಓದಿ:ಕನ್ನಡತಿ ಎಂಆರ್​ ಪೂವಮ್ಮ ಜಯಿಸಿದ್ದ ಏಷ್ಯಾಡ್​ ರಜತಕ್ಕೆ ಈಗ ಸ್ವರ್ಣ ಪದಕದ ಗೌರವ
ಈಕೆ ಸರ್ಕಾರಿ ಕಂಪನಿ ನ್ಯಾಷನಲ್ ಸೀಡ್ ಕಾರ್ಪೊರೇಶನ್ ಲಿಮಿಟೆಡ್ ಗೆ ಉದ್ಯೋಗಕ್ಕಾಗಿ ಆನ್‌ಲೈನ್ ಅರ್ಜಿಯನ್ನು ಭರ್ತಿ ಮಾಡಲು ಪ್ರಯತ್ನಿಸುತ್ತಿದ್ದರು. ಆದರೆ ಚುಟಿಯಾ (Chutia) ಸರ್ ನೇಮ್ ನಿಂದಾಗಿ ವೆಬ್‌ಸೈಟ್ ಮತ್ತು ಸಾಫ್ಟ್‌ವೇರ್‌ ಆಕೆಯ ಅರ್ಜಿಯನ್ನು ತಿರಸ್ಕರಿಸಿದೆ. ಪದೇ ಪದೇ ಕ್ಲಿಕ್ ಮಾಡಿದ್ರೂ ಅರ್ಜಿಯನ್ನು ಸಾಫ್ಟ್‌ವೇರ್‌ ಸ್ವೀಕರಿಸಲಿಲ್ಲ. ’ದಯವಿಟ್ಟು ಸರಿಯಾದ ಹೆಸರು ಕೊಡಿ. ಸರ್‌ನೇಮ್‌ ಜಾಗದಲ್ಲಿ ಇಂಥ ಹೆಸರುಗಳನ್ನು ಹಾಕಬೇಡಿ’ ಎಂಬ ಮೆಸೇಜ್‌ ಬರುತ್ತಿದೆ.
ನಂತರ ಈ ಬಗ್ಗೆ ಪ್ರಿಯಾಂಕಾ ದೂರು ದಾಖಲು ಮಾಡಿದ ನಂತರ ಸಂಸ್ಥೆ ಈಕೆಯ ಅರ್ಜಿಯನ್ನು ಸ್ವೀಕರಿಸಿದೆ. ಈ ಕುರಿತು ಪ್ರಿಯಾಂಕಾ ಫೇಸ್‌ಬುಕ್‌ನಲ್ಲಿ ಅಳಲು ತೋಡಿಕೊಂಡಿದ್ದಾರೆ. ನನ್ನ ಅರ್ಜಿಯನ್ನೇನೋ ಸಂಸ್ಥೆ ಸ್ವೀಕರಿಸಿದೆ. ಆದರೆ ಈ ರೀತಿ ಬೇರೆ ಯಾರಿಗೂ ಆಗಬಾರದು, ಆದ್ದರಿಂದ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದಿದ್ದಾರೆ.
ಗಣ್ಯರಿಗೆ ಹುಡುಗಿಯರ ಸಪ್ಲೈ, ಆಟೋ ಡ್ರೈವರ್‌ ಮಗಳ ಭಯಾನಕ ಹಿಸ್ಟರಿ…

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:14 − 10 =
Remember me
