ವಾಷಿಂಗ್ಟನ್:ಕರೊನಾ ಬಿಕ್ಕಟ್ಟು ದಿನದಿಂದ ದಿನಕ್ಕೆ, ಕ್ಷಣದಿಂದ ಕ್ಷಣಕ್ಕೆ ಹೆಚ್ಚುತ್ತಲೇ ಇರುವಂತೆ, ಇನ್ನೊಂದೆಡೆ, ಹಲವಾರು ಕಂಪೆನಿಗಳು ತನ್ನ ಉದ್ಯೋಗಿಗಳನ್ನು ಮನೆಗೆ ಕಳುಹಿಸುವ ಕೆಲಸಕ್ಕೆ ಕೈಹಾಕಿವೆ.
ಕರೊನಾ ವೈರಸ್‌ ದಾಳಿ ಇಡುವ ಮೊದಲೇ ಅಮೆರಿಕವು ನಾನಾ ನೀತಿ-ನಿಯಮಗಳನ್ನು ರೂಪಿಸಿ ವಿದೇಶದಲ್ಲಿ ಇರುವ ಅಮೆರಿಕನ್‌ ಕಂಪನಿಗಳ ಉದ್ಯೋಗಿಗಳನ್ನು ವಜಾಗೊಳಿಸುವ ಪ್ರಕ್ರಿಯೆಗೆ ಚಾಲನೆ ನೀಡಿತ್ತು. ಅದರ ಬೆನ್ನಲ್ಲೇ ಕರೊನಾ ಒಕ್ಕರಿಸಿತು.
ಇದಾಗಲೇ ಹಲವಾರು ದೈತ್ಯ ಸಾಫ್ಟ್‌ವೇರ್‌ ಕಂಪೆನಿಗಳು ತಮ್ಮ ಸಿಬ್ಬಂದಿಯನ್ನು ಕೆಲಸದಿಂದ ವಜಾಗೊಳಿಸಿರುವ ಬೆನ್ನಲ್ಲೇ ಮೈಕ್ರೋಸಾಫ್ಟ್ ಕಾರ್ಪೋರೇಟ್ ನೆಟ್ ವರ್ಕಿಂಗ್ ಸೈಟ್ ಆಗಿರುವ ಲಿಂಕ್ಡ್ ಇನ್ ವಿಶ್ವಾದ್ಯಂತ ತನ್ನ ಶೇ.6ರಷ್ಟು ಉದ್ಯೋಗಿಗಳನ್ನು ವಜಾಗೊಳಿಸಿದೆ. ಇದರಿಂದಾಗಿ 960 ಮಂದಿ ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ. ಇದು ಕ್ಯಾಲಿಪೋರ್ನಿಯಾ ಮೂಲದ ಕಂಪೆನಿಯಾಗಿದೆ.
ಇದನ್ನೂ ಓದಿ:ಉದ್ಯೋಗವಿಲ್ಲದೇ ಅಂಡಾಣು ದಾನಕ್ಕೆ ಮುಂದಾದ ಯುವತಿಯರು!
ಜಾಗತಿಕ ಮಟ್ಟದಲ್ಲಿ ನೇಮಕಾತಿ ಮತ್ತು ಮಾರಾಟ ವಿಭಾಗದಲ್ಲಿ ಉದ್ಯೋಗ ಕಡಿತಗೊಳಿಸಲಾಗಿದೆ. ಕಂಪೆನಿಯಿಂದ ವಜಾಗೊಂಡಿರುವ ಉದ್ಯೋಗಿಗಳಿಗೆ 10 ವಾರಗಳ ವೇತನ ಮತ್ತು ಆರೋಗ್ಯ ವಿಮೆಯನ್ನು ನೀಡಲಾಗುತ್ತದೆ ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಯಾನ್ ರೊಸ್ಲಂಸ್ಕಿ ತಿಳಿಸಿದ್ದಾರೆ.
ಉದ್ಯೋಗ ಕಳೆದುಕೊಂಡಿರುವವರು ಸದ್ಯ ಮನೆಯಿಂದಲೇ ಕೆಲಸ ನಿರ್ವಹಿಸುತ್ತಿದ್ದು, ಅವರಿಗೆ ಅಧಿಕೃತವಾಗಿ ಇನ್ನೂ ತಿಳಿಸಿಲ್ಲ. ಶೀಘ್ರದಲ್ಲಿಯೇ ಅವರಿಗೆ ನೋಟಿಸ್‌ ಜಾರಿಯಾಗಲಿದೆ ಎಂದಿದ್ದಾರೆ.
ಚೀನಾದ ಇಂಚಿಂಚು ಅರಿಯಲು ಗಡಿಯಲ್ಲಿ ‘ವಿಶ್ವದ ಬುದ್ಧಿವಂತ’ನ ಕಾವಲು!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:13 + fourteen =
Remember me
