ತಿರುವನಂತಪುರಂ:ಈ ಮೇಲಿನ ಫೋಟೋದಲ್ಲಿ ಮಂದಹಾಸ ಬೀರುತ್ತಿರುವ ಹುಡುಗಿ ತನಗೆ ಗೊತ್ತಿಲ್ಲದೆ ಮಾಡಿದ ಒಂದು ಸಣ್ಣ ತಪ್ಪಿನಿಂದ ತನ್ನ ಅಮೂಲ್ಯ ಪ್ರಾಣವನ್ನೇ ಕಳೆದುಕೊಂಡಿದ್ದಾಳೆ. ವಿದೇಶದಲ್ಲಿ ಕೆಲಸ ಮಾಡಿ ತಂದೆ ತಾಯಿಗೆ ಆಸರೆಯಾಗಬೇಕೆಂದು ಬಯಸಿದ್ದ ಹುಡುಗಿ, ಅನಿರೀಕ್ಷಿತ ರೀತಿಯಲ್ಲಿ ತನ್ನ ಜೀವನವನ್ನು ಅಂತ್ಯಗೊಳಿಸಿದ್ದಾಳೆ. ಒಂದೇ ಒಂದು ಹೂವು ಮತ್ತು ಎಲೆ ಆಕೆಯ ಪ್ರಾಣವನ್ನೇ ಕಸಿದುಕೊಂಡಿದೆ.
ಹೌದು, ಒಲಿಯಾಂಡರ್ ಗಿಡದ ಹೂವು ಮತ್ತು ಎಲೆಯನ್ನು ಜಗಿದು ಯುವತಿಯೊಬ್ಬಳು ಸಾವಿಗೀಡಾಗಿರುವ ದುರಂತ ಘಟನೆ ಕೇರಳದಲ್ಲಿ ನಡೆದಿದೆ. ಕೇರಳದ ಅಲಪ್ಪುಳದ ಹರಿಪತ್ ಪ್ರದೇಶದ ಸೂರ್ಯ ಸುರೇಂದ್ರನ್ (24) ಮೃತ ಯುವತಿ. ಈಕೆಗೆ ಯುನೈಟೆಡ್​ ಕಿಂಗ್​ಡಮ್​ನಲ್ಲಿ ನರ್ಸ್ ಆಗಿ ಕೆಲಸ ಸಿಕ್ಕಿತು. ಲಕ್ಷಾಂತರ ರೂಪಾಯಿ ಸಂಬಳ ಇತ್ತು. ಸೂರ್ಯ ಕೆಲವೇ ಗಂಟೆಗಳಲ್ಲಿ ಯುಕೆಗೆ ತೆರಳಬೇಕಿತ್ತು. ವಿದೇಶಕ್ಕೆ ಹೋಗುವ ಖುಷಿಯಲ್ಲಿ ನೆರೆಮನೆಯವರನ್ನು ಮಾತನಾಡಿಸಿಕೊಂಡು ಬರಲು ಹೋಗಿದ್ದಳು. ಆದರೆ, ಅದೇ ತನ್ನ ಅಂತಿಮ ವಿದಾಯ ಎಂದು ಆಕೆ ನಿರೀಕ್ಷೆ ಮಾಡಿರಲಿಲ್ಲ.
ನೆರೆಮನೆಯವರನ್ನು ಭೇಟಿ ಮಾಡಿ ಹಿಂದಿರುಗುವಾಗ, ಫೋನ್​ನಲ್ಲಿ ಮಾತನಾಡುತ್ತಾ ತನಗೆ ಅರಿವಿಲ್ಲದೆ ಓಲಿಯಂಡರ್ (ಕನ್ನಡದಲ್ಲಿ ಕಣಗಿಲೆ ಗಿಡ) ಎಲೆಯ ಒಂದು ಭಾಗವನ್ನು ಮತ್ತು ಹೂವನ್ನು ಸೇವಿಸಿದಳು. ಇದಾದ ಬಳಿಕ ಸೂರ್ಯ ಸುರೇಂದ್ರನ್ ವಿದೇಶ ಪ್ರಯಾಣ ಬೆಳೆಸಲು ನೆಡುಂಬಸ್ಸೆರಿಯ ವಿಮಾನ ನಿಲ್ದಾಣಕ್ಕೆ ಹೋಗುವಾಗ ಆಲಪ್ಪುಳವನ್ನು ತಲುಪುತ್ತಿದ್ದಂತೆ ವಾಂತಿ ಮಾಡಲು ಆರಂಭಿಸಿದಳು. ತಕ್ಷಣ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಒಲಿಯಾಂಡರ್​ ಎಲೆಗಳು ಮತ್ತು ಹೂವುಗಳನ್ನು ತಿಂದಿದ್ದಾಳೆ ಎಂದು ಸೂರ್ಯಳ ತಂದೆ ವೈದ್ಯರಿಗೆ ತಿಳಿಸಿದರು. ತಕ್ಷಣವೇ ಕಾರ್ಯ ಪ್ರವೃತ್ತರಾದ ವೈದ್ಯರು ತಮ್ಮ ಪ್ರಯತ್ನದಿಂದ ಕೊಂಚ ಪ್ರಮಾಣದ ಒಲಿಯಾಂಡರ್​ ಎಲೆ ಮತ್ತು ಹೂವನ್ನು ಹೊರಗೆ ಉಗುಳಿದಳು. ಆದರೂ, ಇನ್ನೂ ಸ್ವಲ್ಪ ಪ್ರಮಾಣ ಹೊಟ್ಟೆಯಲ್ಲಿ ಉಳಿದಿತ್ತು. ವೈದ್ಯರು ಚಿಕಿತ್ಸೆ ನೀಡಿ ಮನೆಗೆ ಕಳುಹಿಸಿದ್ದರು.
ಆದರೆ, ಸೂರ್ಯಳ ಸ್ಥಿತಿ ಮತ್ತಷ್ಟು ಹದಗೆಟ್ಟಿತು. ಕೂಡಲೇ ಆಕೆಯನ್ನು ಪರುಮಾಲದಲ್ಲಿರುವ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆಕೆ ಸೋಮವಾರ ಬೆಳಗ್ಗೆ ಮೃತಪಟ್ಟಿದ್ದಾಳೆ. ಮರಣೋತ್ತರ ಪರೀಕ್ಷಾ ವರದಿಯು ಪ್ರಕಾರ ಒಲಿಮಾಂಡರ್​ ಅಥವಾ ಕಣಗಿಲೆ ಗಿಡದ ವಿಷವು ಆಕೆಯ ಹೃದಯದ ಮೇಲೆ ತೀವ್ರ ಪರಿಣಾಮ ಬೀರಿದ್ದು, ಪ್ರಾಣವನ್ನು ತೆಗೆದಿದೆ ಎಂಬುದು ಬಯಲಾಗಿದೆ.
ಅಂದಹಾಗೆ ಕಣಗಿಲೆ ಗಿಡದಲ್ಲಿ ಶಕ್ತಿಯುತವಾದ ವಿಷವಿದ್ದು ಹೃದಯ ಮತ್ತು ನರಮಂಡಲದ ಮೇಲೆ ಪರಿಣಾಮ ಬೀರುತ್ತದೆ ಎಂದು ವೈದ್ಯರು ಎಚ್ಚರಿಸಿದ್ದಾರೆ. ನರ್ಸ್ ಆಗಿ ಕುಟುಂಬಕ್ಕೆ ಆಸರೆಯಾಗಬೇಕೆಂದು ಬಯಸಿದ್ದ ಸೂರ್ಯ ಅನಿರೀಕ್ಷಿತವಾಗಿ ಸಾವಿಗೀಡಾಗಿದ್ದು, ಕುಟುಂಬವನ್ನು ಶೋಕದಲ್ಲಿ ಮುಳುಗಿಸಿದೆ.(ಏಜೆನ್ಸೀಸ್​)
ಪ್ರೇಮಾ ಜತೆಗಿರುವ ಈ ವ್ಯಕ್ತಿ ಯಾರು? ಸ್ಯಾಂಡಲ್​ವುಡ್​ನಲ್ಲಿ ನಡೆಯುತ್ತಿದೆ ಹೀಗೊಂದು ಬಿಸಿ ಬಿಸಿ ಚರ್ಚೆ!

ಮದುವೆ ಆಗುವ ಆಸೆ ಇಲ್ಲ…ರಾಜಕೀಯಕ್ಕೆ ಹೋಗಬೇಕು ಅನ್ನೋ ಪ್ಲ್ಯಾನ್​​ ಇದೆ; ಸೋನು ಶ್ರೀನಿವಾಸ್ ಗೌಡ

ಗಂಡನ ಜತೆಗಿರುವ ಫೋಟೋಗಳನ್ನು ಡಿಲೀಟ್​ ಮಾಡಲು ಹೇಳಿದ ಕತ್ರಿನಾ! ಅಷ್ಟಕ್ಕೂ ನಡೆದಿದ್ದಾದರೂ ಏನು?

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:three × three =
Remember me
