ಇಡುಕ್ಕಿ:ಪ್ರತಿನಿತ್ಯ ಸಾಮಾಜಿಕ ಜಾಲತಾಣದಲ್ಲಿ ಉದ್ಯೋಗಾವಕಾಶಗಳ ಬಗ್ಗೆ ಸಾಕಷ್ಟು ಜಾಹೀರಾತುಗಳನ್ನು ನೋಡುತ್ತಿರುತ್ತೇವೆ. ಆದರೆ, ಇಂತಹ ಜಾಹೀರಾತುಗಳ ಹಿಂದೆ ಕೆಲವು ಗೋಮುಖ ವ್ಯಾಘ್ರಗಳು ಇರುತ್ತವೆ ಎಂಬುದಕ್ಕೆ ಈ ಒಂದು ಘಟನೆ ತಾಜಾ ಉದಾಹರಣೆಯಾಗಿದೆ.
ಕೇರಳದ ಇಡುಕ್ಕಿ ಮೂಲದ ಯುವಕನೊಬ್ಬ ಆನ್​ಲೈನ್​ ಜಾಬ್​ ಇಂಟರ್ವ್ಯೂವ್​ ಜಾಲಕ್ಕೆ ಸಿಲುಕಿ ನರಕಯಾತನೆ ಅನುಭವಿಸಿದ್ದು, ಇದೀಗ ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದಾನೆ. ಜಾಲತಾಣದಲ್ಲಿ ಉದ್ಯೋಗ ಮಾಹಿತಿಯ ಪೋಸ್ಟರ್​ ನೋಡಿದ ಯುವಕ, ಅದರಲ್ಲಿದ್ದ ಫೋನ್​ ನಂಬರ್​ ಕರೆ ಮಾಡುತ್ತಾನೆ. ದೂರವಾಣಿಯಲ್ಲಿ ಮಾತನಾಡಿದ ಅಪರಿಚಿತ ಅಥವಾ ಅಪರಿಚಿತೆಯ ಮಾತಿಗೆ ಮರುಳಾಗುವ ಯುವಕ, ಅವನು ಅಥವಾ ಅವಳು ಹೇಳಿದಂತೆ ವರ್ಚುವಲ್​ ಇಂಟರ್ವ್ಯೂವ್​ನಲ್ಲಿ ಭಾಗಿಯಾಗುತ್ತಾನೆ.
ಇದನ್ನೂ ಓದಿ:ರಾಜ್ಯ​ ಸರ್ಕಾರದಲ್ಲಿ ರಣದೀಪ್ ಸಿಂಗ್ ಸುರ್ಜೆವಾಲ ಹಸ್ತಕ್ಷೇಪ: ಕಾಂಗ್ರೆಸ್​ ವಿರುದ್ಧ ಬಿಜೆಪಿ ಕಿಡಿ
ಇದರ ನಡುವೆ ಯುವಕನಿಂದ ವಾಟ್ಸ್​ಆ್ಯಪ್​ ನಂಬರ್​, ಈಮೇಲ್​ ಮತ್ತು ಇತರೆ ಮಾಹಿತಿಗಳನ್ನು ಅಪರಿಚಿತ ಗ್ಯಾಂಗ್​ ಪಡೆದುಕೊಂಡಿತ್ತು. ನಿಜವಾಗಿಯು ಕೆಲಸ ಸಿಗುತ್ತದೆ ಎಂದು ನಂಬಿದ್ದ ಯುವಕನಿಗೆ ನಂತರ ದಿನಗಳಲ್ಲಿ ಭಾರೀ ಆಘಾತ ಕಾದಿತ್ತು. ಏಕೆಂದರೆ, ಕೆಲವೇ ದಿನಗಳಲ್ಲಿ ಆತನ ವಾಟ್ಸ್​ಆ್ಯಪ್​ ನಂಬರ್​ಗೆ ಮಾರ್ಫ್​ ಮಾಡಿದ ಫೋಟೋಗಳು ಬರಲು ಆರಂಭವಾದವು. ಇದರಿಂದ ಯುವಕ ಭಯಭೀತನಾದ.
ಯುವಕನಿಗೆ ಕರೆ ಮಾಡಿದ ಗ್ಯಾಂಗ್​ ಹಣಕ್ಕಾಗಿ ಬೇಡಿಕೆ ಇಟ್ಟರು. ಹಣ ಕೊಡದಿದ್ದರೆ ಸಂಬಂಧಿಕರು ಮತ್ತು ಸ್ನೇಹಿತರಿಗೆ ಫೋಟೋಗಳನ್ನು ಶೇರ್​ ಮಾಡುವುದಾಗಿ ಹೆದರಿಸಿದರು. ಆರಂಭದಲ್ಲಿ ಯುವಕ ಬೆದರಿಕೆಯನ್ನು ನಿರ್ಲಕ್ಷಿಸಿದ. ಆದರೆ, ಫೋಟೋಗಳು ಸಂಬಂಧಿಕರು ಮತ್ತು ಸ್ನೇಹಿತರ ವಾಟ್ಸ್​ಆ್ಯಪ್​ ನಂಬರ್​ಗೆ ಶೇರ್​ ಆದವು.
ಇದನ್ನೂ ಓದಿ:ಅಸಹಜ ಲೈಂಗಿಕ ಕ್ರಿಯೆಗೆ ಒತ್ತಾಯ: ಐಎಎಸ್​ ಅಧಿಕಾರಿ ವಿರುದ್ಧ ಕೋರ್ಟ್​ ಮೆಟ್ಟಿಲೇರಿದ ಪತ್ನಿ!
ಇದರಿಂದ ಮತ್ತಷ್ಟು ಚಿಂತಾಕ್ರಾಂತನಾದ ಯುವಕ ಹಣ ನೀಡಲು ಒಪ್ಪಿಕೊಂಡು ಸುಮಾರು 25 ಸಾವಿರ ರೂ. ಹಣವನ್ನು ನೀಡಿದ್ದ. ಇಷ್ಟಕ್ಕೆ ಸುಮ್ಮನಾಗದ ಗ್ಯಾಂಗ್​, ಮತ್ತಷ್ಟು ಹಣಕ್ಕಾಗಿ ಬೇಡಿಕೆ ಇಟ್ಟರು. ಕ್ಷಣ ಕ್ಷಣಕ್ಕೂ ಯುವಕನಿಗೆ ನರಕಯಾತನೆ ನೀಡಲು ಆರಂಭಿಸಿದರು. ಇದರಿಂದ ಬೇಸತ್ತ ಯುವಕ ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದು, ಪ್ರಕರಣ ದಾಖಲಾಗಿದೆ. ಸದ್ಯ ತನಿಖೆ ನಡೆಯುತ್ತಿದೆ.(ಏಜೆನ್ಸೀಸ್​)
ರಾಜ್ಯ​ ಸರ್ಕಾರದಲ್ಲಿ ರಣದೀಪ್ ಸಿಂಗ್ ಸುರ್ಜೆವಾಲ ಹಸ್ತಕ್ಷೇಪ: ಕಾಂಗ್ರೆಸ್​ ವಿರುದ್ಧ ಬಿಜೆಪಿ ಕಿಡಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 1 =
Remember me
