ಮುಂಬೈ: ಕಳೆದ ಮೂರು ತಿಂಗಳ ಅವಧಿಯಲ್ಲಿ ಉದ್ಯೋಗವಿಲ್ಲದೆ ನಿರುದ್ಯೋಗಿಯಾಗಿದ್ದ ಬಾರ್​ ಡ್ಯಾನ್ಸರ್​ ಬಳಿ 3.3 ಲಕ್ಷ ರೂಪಾಯಿ ಮೌಲ್ಯದ ಡ್ರಗ್ಸ್​ ಪತ್ತೆಯಾಗಿದೆ. ಆ್ಯಂಟಿ ನಾರ್ಕೋಟಿಕ್ಸ್ ಸ್ಕ್ವಾಡ್ ಮೂವತ್ತು ವರ್ಷದ ಆ ಡ್ಯಾನ್ಸರ್​ಅನ್ನು ಪುಣೆಯಲ್ಲಿ ಬಂಧಿಸಿತ್ತು.
ತನಿಖೆಯಲ್ಲಿ ಬಹಿರಂಗಗೊಂಡಿರುವ ಪ್ರಾಥಮಿಕ ಮಾಹಿತಿ ಪ್ರಕಾರ, ಡ್ಯಾನ್ಸರ್ ಬಳಿ ಇದ್ದದ್ದು ಮೆಫೆಡ್ರೋನ್​ ಎಂಬ ಮಾದಕ ವಸ್ತು. ನಿರುದ್ಯೋಗಿಯಾಗಿದ್ದ ಕಾರಣ ತಾನು ಡ್ರಗ್ಸ್ ಪೂರೈಸುವ ಕೆಲಸಕ್ಕೆ ಇಳಿದುದಾಗಿ ಡ್ಯಾನ್ಸರ್ ತಪ್ಪೊಪ್ಪಿಕೊಂಡಿದ್ದಾಳೆ.
ಇದನ್ನೂ ಓದಿ:ಒಂದೇ ದಿನ 45 ಸಾವು!
ಪೊಲೀಸ್ ಮೂಲಗಳ ಪ್ರಕಾರ, ಬಂಧಿತ ಮಹಿಳೆಯ ಹೆಸರು ಹೇಮಾ ಕಿಸನ್​ಲಾಲ್ ಸಿಂಗ್​. ಆಕೆಯ ಜತೆಗಿದ್ದ ವ್ಯಕ್ತಿ ವಿವೇಕ್​ ತುಲಸೀರಾಮ್ ಲುಲ್ಲಾ(43). ಇಬ್ಬರೂ ಶನಿವಾರ ಮುಂಬೈನಿಂದ ಪುಣೆಗೆ ಓಲಾ ಕ್ಯಾಬ್​ ಮೂಲಕ ಪ್ರಯಾಣಿಸಿದ್ದರು. ಕ್ಯಾಬ್​ ಚಾಲಕ ಅವರನ್ನು ನ್ಯಾಷನಲ್​ ಇನ್ಶೂರೆನ್ಸ್ ಅಕಾಡೆಮಿ ಎದುರು ಇಳಿಸಿ ಹೋಗಿದ್ದ. ಅಲ್ಲಿ ಅವರು ಸಂದೇಹಾಸ್ಪದವಾಗಿ ನಿಂತಿರುವುದು ಗಸ್ತಿನಲ್ಲಿದ್ದ ಪೊಲೀಸರ ಗಮನಸೆಳೆದಿತ್ತು. ಅವರು ಅಲ್ಲಿಂದ ಸದಾನಂದ ಹೋಟೆಲ್​ನತ್ತ ಹೆಜ್ಜೆ ಹಾಕುತ್ತಿದ್ದಾಗ ಅವರ ಬಳಿ ತೆರಳಿದ ಪೊಲೀಸರು ಗುರುತಿನ ಚೀಟಿ ಕೇಳಿದ್ದಾರೆ.
ಇದನ್ನೂ ಓದಿ:ಡ್ರೋನ್ ಪ್ರತಾಪ ಕ್ವಾರಂಟೈನ್​ನಲ್ಲಿದ್ದಾರಂತೆ..
ತೃಪ್ತಿಕರ ಉತ್ತರ ಸಿಗದ ಕಾರಣ ಠಾಣೆಗೆ ಕರೆದೊಯ್ದು ವಿಚಾರಣೆಗೊಳಪಡಿಸಿದ್ದಾರೆ. ಆಗ ಮಹಿಳೆ ಡ್ರಗ್ಸ್ ವಿಚಾರ ಬಾಯ್ಬಿಟ್ಟಿದ್ದಾಳೆ. ಅಕ್ರಮವಾಗಿ ಮೆಫೆಡ್ರೋನ್ ಎಂಬ ಮಾದಕ ವಸ್ತುವನ್ನು ಅವರು ಸಾಗಿಸುತ್ತಿರುವುದಾಗಿ ಹೇಳಿದ್ದಾಳೆ. ಅವರಿಂದ ಡ್ರಗ್ಸ್ ವಶಪಡಿಸಿಕೊಂಡ ಪೊಲೀಸರು, ಆ್ಯಂಟಿ ನಾರ್ಕೋಟಿಕ್ಸ್ ತಂಡಕ್ಕೆ ಹಸ್ತಾಂತರಿಸಿದ್ದಾರೆ. ಅವರ ವಿರುದ್ಧ ಎನ್​​ಡಿಪಿಎಸ್​ ಸೆಕ್ಷನ್ 8,21, 22, 29ರ ಪ್ರಕಾರ ಕೇಸ್ ದಾಖಲಾಗಿದೆ. ಓಲಾ ಕ್ಯಾಬ್​ ಚಾಲಕನನ್ನೂ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. (ಏಜೆನ್ಸೀಸ್)
ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದಲ್ಲಿ ಅಕ್ರಮ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + eleven =
Remember me
