ಜೈಪುರ:ಪತ್ನಿಯನ್ನು ಕೊಲೆ ಮಾಡಿದ ಬಳಿಕ ಅತ್ತೆ ಮನೆಗೆ ಮತ್ತು ಪೊಲೀಸರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿ ಅವರು ಬರುವವರೆಗೂ ಮೃತದೇಹದ ಮುಂದೆ ಪತಿ ಮಹಾಶಯನೊಬ್ಬ ವಿಡಿಯೋ ಗೇಮ್​ ಆಡುತ್ತಾ ಕುಳಿತಿದ್ದ ಆತಂಕಕಾರಿ ಘಟನೆ ರಾಜಸ್ಥಾನದ ಜೋಧ್​ಪುರ ಬಿಜಿಎಸ್​ ಕಾಲನಿಯಲ್ಲಿ ನಡೆದಿದೆ.
ಆರೋಪಿ ವಿಕ್ರಮ್​ ಸಿಂಗ್ ಭಾನುವಾರ ರಾತ್ರಿ ಪತ್ನಿ ಶಿವ ಕನ್ವಾರ್​ಳನ್ನು ಹತ್ಯೆ ಮಾಡಿದ ಬಳಿಕ ಅತ್ತೆ ಮನೆಗೆ ಕರೆ ಮಾಡಿ ನಿಮ್ಮ ಮಗಳನ್ನು ಕೊಂದಿದ್ದೇನೆಂದು ಹೇಳಿದ್ದಾನೆ. ಅಲ್ಲದೆ, ಪೊಲೀಸರಿಗೂ ಸಹ ಕರೆ ಮಾಡಿ ಪತ್ನಿಯನ್ನು ಹತ್ಯೆ ಮಾಡಿರುವ ಮಾಹಿತಿ ತಿಳಿಸಿದ್ದಾನೆ. ತಕ್ಷಣ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿದಾಗ ಆರೋಪಿ ಸಿಂಗ್​ ಏನೂ ನಡೆದಿಲ್ಲವೆಂಬಂತೆ ಪತ್ನಿಯ ಮೃತದೇಹದ ಮುಂದೆ ಕುಳಿತು ವಿಡಿಯೋ ಗೇಮ್​ ಆಡುತ್ತಿದ್ದ ಎಂದು ವರದಿಯಾಗಿದೆ.
ಸಿಂಗ್​ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕತ್ತರಿಯಿಂದ ಕೊಲೆ ಮಾಡಿರುವುದಾಗಿ ಸಿಂಗ್​ ತಪ್ಪೊಪ್ಪಿಕೊಂಡಿದ್ದಾನೆ. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಪತ್ನಿಯನ್ನು ಏಕೆ ಕೊಲೆ ಮಾಡಿದೆ ಎಂಬುದು ಸಿಂಗ್​ಗೂ ಕೂಡ ಅರಿವಿಲ್ಲವಂತೆ. ಇದ್ದಕ್ಕಿದ್ದಂತೆ ಯಾರೋ ದಾಳಿ ಮಾಡುವ ಭಯದಿಂದ ಅಥವಾ ಫಿಟ್ಸ್​ ಬಂದಾಂತಾಗಿ ಹೆಂಡತಿಯನ್ನು ಕೊಲೆ ಮಾಡಿದ್ದಾಗಿ ಸಿಂಗ್​ ಹೇಳಿದ್ದಾನೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಶೌಚಕ್ಕೆಂದು ಕಚೇರಿಯಿಂದ ಹೊರಹೋದ ಸರ್ಕಾರಿ ಮಹಿಳಾ ಉದ್ಯೋಗಿಯ ದುರಂತ ಸಾವು..!
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದು, ನಿರುದ್ಯೋಗದಿಂದ ಸಿಂಗ್​ ತುಂಬಾ ಹತಾಶನಾಗಿದ್ದ ಎಂದು ತಿಳಿದುಬಂದಿದೆ. ಸಿಂಗ್​ ಪತ್ನಿ ಮನೆಯಲ್ಲಿ ಟೈಲರ್​ ಆಗಿದ್ದಳು ಮತ್ತು ನಂತರದ ದಿನಗಳಲ್ಲಿ ಕೋಆಪರೇಟಿವ್​ ಸ್ಟೋರ್​ನಲ್ಲಿ ಕೆಲಸ ಮಾಡಲು ಆರಂಭಿಸಿದ್ದಳು. ಇತ್ತ ಸಿಂಗ್​ ಬಹುದಿನಗಳವರೆಗೆ ನಿರುದ್ಯೋಗಿ ಆಗಿಯೇ ಉಳಿದಿದ್ದ. ಅಲ್ಲದೆ, ಪತ್ನಿಯ ಕೆಲಸದಿಂದ ಅಸಂತೋಷಗೊಂಡಿದ್ದ ಎಂದು ಡಿಸಿಪಿ ಧರ್ಮೇಂಧ್ರ ಸಿಂಗ್​ ಯಾದವ್​ ಹೇಳಿದ್ದಾರೆ.
ಶಿವ ಕನ್ವಾರ್​ ಮೃತದೇಹವನ್ನು ಶವಪರೀಕ್ಷೆಯ ಬಳಿಕ ಕುಟುಂಬಕ್ಕೆ ಹಸ್ತಾಂತರಿಸಲಾಗಿದ್ದು, ಕನ್ವಾರ್​ ತಂದೆ ಮನೋಹರ್​ ಸಿಂಗ್​ ಆರೋಪಿ ವಿಕ್ರಮ್​ ಸಿಂಗ್​ ವಿರುದ್ಧ ಕೊಲೆ ಪ್ರಕರಣವನ್ನು ದಾಖಲಿಸಿದ್ದಾರೆ.(ಏಜೆನ್ಸೀಸ್​)
ವಾಹನ ಸವಾರರೇ ಎಚ್ಚರ! ಬಾಕಿ ವಸೂಲಿಗೆ ಮಾಸ್ಟರ್ ಪ್ಲಾನ್ ಮೂಲಕ ಬರ್ತಾರೆ ಪೊಲೀಸರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + seven =
Remember me
