ವಡೋದರಾ:ಅನ್​ಲಾಕ್​-4 ಹಂತದಲ್ಲಿ ಸಾರ್ವಜನಿಕ ಉದ್ಯಾನವನಗಳು ನಿಧಾನಕ್ಕೆ ಓಪನ್​ ಆಗುತ್ತಿವೆ. ಅದಕ್ಕೆ ಸಂಬಂಧಪಟ್ಟಂತೆ ಆಯಾ ರಾಜ್ಯ ಸರ್ಕಾರಗಳು ಮಾರ್ಗಸೂಚಿಗಳನ್ನು ಹೊರಡಿಸುತ್ತಿವೆ.
ಹಾಗೇ ಗುಜರಾತ್​​ನಲ್ಲೂ ಕಂಟೇನ್​​ಮೆಂಟ್​ ಝೋನ್​​ಗಳನ್ನು ಹೊರತುಪಡಿಸಿದ ಪ್ರದೇಶಗಳಲ್ಲಿ ಪಾರ್ಕ್​ಗಳು, ಸಾರ್ವಜನಿಕರ ಪ್ರವೇಶಕ್ಕೆ ಮುಕ್ತವಾಗಿವೆ.
ಆದರೆ ವಡೋದರಾದಲ್ಲಿ ಬೆಳ್ಳಂಬೆಳಗ್ಗೆ ಕೆಲವರು ತಮ್ಮ ಮೂರ್ಖತನವನ್ನು ಪ್ರದರ್ಶನ ಮಾಡಿದ್ದಾರೆ. ಗಾರ್ಡನ್ಸ್​, ಪಾರ್ಕ್​​ಗಳು ಮತ್ತೆ ಬಳಕೆಗೆ ಮುಕ್ತವಾಗಿದ್ದಕ್ಕೆ ಭರ್ಜರಿ ಪಟಾಕಿ ಸಿಡಿಸಿ, ಸಂಭ್ರಮ ಆಚರಣೆ ಮಾಡಿದ್ದಾರೆ.ಘಟನೆ ನಡೆದಿದ್ದು ಸಯಾಜಿ ಬಾಗ್​ ಉದ್ಯಾನವನದಲ್ಲಿ. ಕೊವಿಡ್​-19 ಶುರುವಾಗುವುದಕ್ಕೂ ಮೊದಲು ಆ ಪಾರ್ಕ್​ಗೆ ಜಾಗಿಂಗ್​, ವಾಕಿಂಗ್​, ಫಿಟ್ನೆಸ್​ ವ್ಯಾಯಾಮಗಳಿಗಾಗಿ ಹೋಗುತ್ತಿದ್ದವರು ಮಾಡಿದ ಕೆಲಸ ಇದು. ಇಂದು ಮತ್ತೆ ಗಾರ್ಡನ್​ ಓಪನ್​ ಆಗಿದ್ದನ್ನು ಸಿಕ್ಕಾಪಟೆ ಸಂಭ್ರಮಿಸಿದ್ದಾರೆ. ಉದ್ದನೆಯ ಪಟಾಕಿ ಸರವನ್ನು ಸಿಡಿಸಿ, ವಾಯುಮಾಲಿನ್ಯ, ಶಬ್ದಮಾಲಿನ್ಯ ಮಾಡಿದ್ದಾರೆ. ಆರೋಗ್ಯ ಕಾಪಾಡಿಕೊಳ್ಳಲೆಂದೇ ವಾಕಿಂಗ್​, ಜಾಗಿಂಗ್​ ಮೊರೆ ಹೋಗುವ ಇವರಿಗೆ, ಮುಂಜಾನೆ ಪಟಾಕಿ ಹೊಡೆದು ಗಬ್ಬೆಬ್ಬಿಸುವುದು ತಪ್ಪು, ಅದೂ ಆರೋಗ್ಯಕ್ಕೆ ಹಾನಿಕಾರಕ ಎಂಬ ಕನಿಷ್ಠ ಅರಿವೂ ಇಲ್ಲದಾಯಿತು ಎಂದು ಸಾಮಾಜಿಕ ಜಾಲತಾಣಗಳ ಬಳಕೆದಾರರು ಕಿಡಿಕಾರುತ್ತಿದ್ದಾರೆ.ಇದನ್ನೂ ಓದಿ:ರಾಗಿಣಿ ಪರ ವಕಾಲತ್ತು ವಹಿಸಲು ಮುಂಬೈನಿಂದ ಬಂದ ವಕೀಲರು; ಜಾಮೀನು ಅರ್ಜಿ ಸಲ್ಲಿಕೆ
ಅದೂ ಅಲ್ಲದೆ, ಕೊವಿಡ್​-19 ನಿಯಂತ್ರಣಾ ಕ್ರಮವಾದ ಸಾಮಾಜಿಕ ಅಂತರ ನಿಯಮ ಪಾಲನೆಯನ್ನೂ ಮಾಡಿಲ್ಲ. ಕೆಲವರಷ್ಟೇ ಮಾಸ್ಕ್​ ಧರಿಸಿದ್ದರು. ಇನ್ನೂ ಒಂದಷ್ಟು ಜನ ಮಾಸ್ಕ್​ ಹಾಕಿರಲಿಲ್ಲ.ನೆಟ್ಟಿಗರಂತೂ ಇದೊಂದು ಮೂರ್ಖತನದ ಪರಮಾವಧಿ ಎಂದೇ ಹೇಳಿದ್ದಾರೆ. ಅನೇಕರು ವಿಡಿಯೋ ಶೇರ್​ ಮಾಡಿಕೊಂಡು ಟೀಕೆ ಮಾಡಿದ್ದಾರೆ.(ಏಜೆನ್ಸೀಸ್)
#WATCHGujarat: Joggers and morning walkers at Sayaji Baug garden celebrate as gardens and parks reopen in Vadodara following Municipal Corporation's order.#COVID19pic.twitter.com/LqmFHWnV6v
— ANI (@ANI)September 10, 2020

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:four + 4 =
Remember me
