ನವದೆಹಲಿ:ಜಾನ್ಸನ್ ಆಂಡ್ ಜಾನ್ಸನ್ ಕಂಪನಿಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಮಕ್ಕಳಿಗೆಂದೇ ಇರುವ ಈ ಪೌಡರ್​ ತುಂಬಾ ಜನಪ್ರಿಯವಾಗಿದೆ. ಆದರೆ ಈ ಕಂಪನಿ ಪೌಡರ್​ ಬಳಕೆ ಇಂದ ಕ್ಯಾನ್ಸರ್​​ ಬರುತ್ತದೆ ಎನ್ನುವ ಆರೋಪ ಕೇಳಿ ಬಂದಿತ್ತು. ಯುಎಸ್ ಕಂಪನಿ ಜಾನ್ಸನ್ ಆಂಡ್ ಜಾನ್ಸನ್ ಕಂಪನಿಯ ಟಾಲ್ಕಮ್ ಪೌಡರ್ ಕ್ಯಾನ್ಸರ್​ಗೆ ಕಾರಣವೆಂದು ಆರೋಪಿಸಿರುವ ಸಾವಿರಾರು ಸಂತ್ರಸ್ತರಿಗೆ 8.9 ಬಿಲಿಯನ್ ಡಾಲರ್ ಪರಿಹಾರ ಪಾವತಿಸಲು ಕಂಪನಿ ಒಪ್ಪಿಕೊಂಡಿದೆ.
ಜಾನ್ಸನ್ ಆ್ಯಂಡ್ ಜಾನ್ಸನ್ ಕಂಪನಿಯ ಟಾಲ್ಕ್ ಉತ್ಪನ್ನಗಳನ್ನು ಬಳಸುವುದರಿಂದ ತಾವು ಅಂಡಾಶಯದ ಕ್ಯಾನ್ಸರ್ ಪೀಡಿತರಾಗಿದ್ದೇವೆ ಎಂದು ಮಹಿಳೆಯೊಬ್ಬರು ಆರೋಪಿಸಿದ್ದು, ಈ ಮಹಿಳೆಯ ಪರವಾಗಿ ಅಮೆರಿಕದ ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಈ ತೀರ್ಪನ್ನು ಪರಿಶೀಲಿಸಬೇಕು ಅಥವಾ ರದ್ದು ಪಡಿಸಬೇಕು ಎಂದು ಜಾನ್ಸನ್ ಮತ್ತು ಜಾನ್ಸನ್ ಕಂಪನಿಯು ಅಮೆರಿಕ ಸುಪ್ರೀಂ ಕೋರ್ಟ್‌ಗೆ ಪರಿಶೀಲನಾ ಅರ್ಜಿ ಸಲ್ಲಿಸಿದ್ದರು.
ಇದನ್ನೂ ಓದಿ:ನಾನೇ ಮದ್ಯದ ಗುತ್ತಿಗೆದಾರ, ಅದನ್ನು ನಿಲ್ಲಿಸುವುದು ಹೇಗೆ?: ಬಿಜೆಪಿ ಶಾಸಕಪ್ರಾರಂಭದಲ್ಲಿ ಈ ಪ್ರಕರಣವನ್ನು ಮಿಸ್ಸೌರಿಯ ರಾಜ್ಯ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲಾಯಿತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಿಸ್ಸೌರಿ ನ್ಯಾಯಾಲಯವು ಅಂಡಾಶಯ ಕ್ಯಾನ್ಸರ್ಗೆ ತುತ್ತಾದ 22 ಮಹಿಳೆಯರಿಗೆ ಕಂಪನಿ 74.7 ಬಿಲಿಯನ್ ಡಾಲರ್ ಮೊತ್ತದ ಪರಿಹಾರವನ್ನು ನೀಡಬೇಕು ಎಂದು ತೀರ್ಪು ನೀಡಿತ್ತು. ಈ ವಿಚಾರಣೆಯು ನ್ಯಾಯಯುತವಾಗಿ ನಡೆಯಲಿಲ್ಲ, ತೀರ್ಪು ಸರಿ ಇಲ್ಲ ಎಂದು ಕಂಪನಿಯು ವಾದಿಸಿತ್ತು. ಈ ಟಾಲ್ಕ್ ಬಳಕೆಯಿಂದ ಆಗುವ ಹಾನಿಯ ಕುರಿತು ಕಂಪನಿಗೆ ತಿಳಿದಿದ್ದರೂ ಕೂಡ ಕಂಪನಿ ಈ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ. ಈ ಉತ್ಪನ್ನಗಳ ಸುರಕ್ಷತೆಯನ್ನು ದಶಕಗಳಿಂದ ತಪ್ಪಾಗಿ ನಿರೂಪಿಸಲಾಗಿದೆ ಎಂದು ಬರ್ಲಿಸನ್ ತಮ್ಮ ತೀರ್ಪಿನಲ್ಲಿ ಬರೆದಿದ್ದರು.
ಸಂಸ್ಥೆ ತಪ್ಪನ್ನು ಒಪ್ಪಿಕೊಂಡಿಲ್ಲ. ಆದರೆ ಮೇ 2020 ರಲ್ಲಿ ಯುನೈಟೆಡ್ ಸ್ಟೇಟ್ಸ್ ಮತ್ತು ಕೆನಡಾದಲ್ಲಿ ಅದರ ಟಾಲ್ಕ್ ಆಧಾರಿತ ಬೇಬಿ ಪೌಡರ್ ಮಾರಾಟವನ್ನು ನಿಲ್ಲಿಸಿದೆ. ಸಂತ್ರಸ್ತರಿಗೆ 8.9 ಬಿಲಿಯನ್ ಡಾಲರ್ ಪರಿಹಾರ ನೀಡುವುದಾಗಿ ಘೋಷಿಸಿದೆ.
ಭಾರತೀಯ ಕಂಪನಿಯಿಂದ ತಯಾರಿಸಲ್ಪಟ್ಟ ಐಡ್ರಾಪ್‌ನಿಂದ ಸೋಂಕು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − 6 =
Remember me
