ನವದೆಹಲಿ:ಸುಂದರ ತ್ವಚೆ ಬೇಕೇ- ಇದನ್ನು ಬಳಸಿ, ಗೌರ ವರ್ಣ ಬೇಕೇ- ಈ ಕ್ರೀಮ್​ ಹಚ್ಚಿ, ಹುಡುಗರು ನಿಮ್ಮತ್ತ ಆಕರ್ಷಿತರಾಗಬೇಕೆ- ಹಾಗಿದ್ದರೆ ಇದನ್ನು ಬಳಸಿ ಎಂದೆಲ್ಲಾ ಟೊಳ್ಳು ಭರವಸೆ ನೀಡುವ ಮೂಲಕ ಜನರನ್ನು ಮರಳು ಮಾಡುವ ಫೇರ್​ನೆಸ್​ ಕ್ರೀಂಗಳ ವಿರುದ್ಧ ಇದೀಗ ದೊಡ್ಡ ಅಭಿಯಾನವೇ ಶುರುವಾಗಿದೆ. ಫೇರ್​ನೆಸ್​ ಕ್ರೀಂಗಳ ಜಾಹೀರಾತಿಗೆ ಸರ್ಕಾರ ನಿರ್ಬಂಧ ವಿಧಿಸಿದೆ.
ಈಗ ಅದರ ಬೆನ್ನಲ್ಲೇ ಜಾನ್ಸನ್​ ಆ್ಯಂಡ್​ ಜಾನ್ಸನ್​ ಕಂಪನಿ ತಾನು ಇಂಥ ಬರಹಗಳುಳ್ಳ ಉತ್ಪನ್ನಗಳನ್ನು ಇನ್ನು ಮುಂದೆ ಮಾರಾಟ ಮಾಡುವುದಿಲ್ಲ ಎಂದು ಹೇಳಿಕೆ ನೀಡಿದೆ.
ಇಂಥ ಕ್ರೀಂಗಳು ವರ್ಣಭೇದ ನೀತಿಯನ್ನು ಬಿಂಬಿಸುತ್ತಿರುವುದಾಗಿ ಟೀಕೆಗೆ ಒಳಗಾಗಿರುವ ಹಿನ್ನೆಲೆಯಲ್ಲಿ, ಈಗ ತನ್ನ ತಪ್ಪನ್ನು ಒಪ್ಪಿಕೊಂಡಿರುವ ಕಂಪನಿ, ಈ ಹೇಳಿಕೆ ನೀಡಿದೆ.
ಈ ಬರಹಗಳುಳ್ಳ ಕ್ರೀಮ್​ಗಳನ್ನು ಅಮೆರಿಕ ಯಾವಾಗಲೋ ನಿಷೇಧಿಸಿದ್ದು, ಭಾರತ ಸೇರಿದಂತೆ ಕೆಲವು ದೇಶಗಳಲ್ಲಿ ಇವುಗಳ ಮಾರಾಟ ನಡೆಯುತ್ತಿತ್ತು. ಆದರೆ ಈಗ ಭಾರತ ಸರ್ಕಾರ ಕೂಡ ಕಠಿಣ ನಿಯಮ ರೂಪಿಸಿರುವ ಹಿನ್ನೆಲೆಯಲ್ಲಿ ಇಂಥದ್ದೊಂದು ಹೇಳಿಕೆಯನ್ನು ಕಂಪನಿ ನೀಡಿದೆ.
ಇದನ್ನೂ ಓದಿ:ಶತಮಾನಗಳ ಇತಿಹಾಸದಲ್ಲಿ ಒಡಿಶಾದ ಪುರಿಯಲ್ಲಿ ಇದೇ ಮೊದಲ ಬಾರಿಗೆ ನಡೆಯುತ್ತಿದೆ ಇಂಥದ್ದೊಂದು ರಥಯಾತ್ರೆ
ತನ್ನ ಅನೇಕ ಪ್ರಾಡಕ್ಟ್​ಗಳಲ್ಲಿ ಇದೇ ಲೈನ್​ಗಳು ಇವೆ. ವೆಬ್​ಸೈಟ್​ನಲ್ಲಿ ಕೂಡ ಈ ಬಗ್ಗೆ ಉಲ್ಲೇಖವಿದೆ. ಆದ್ದರಿಂದ ವೆಬ್​ಸೈಟ್​ ಕೂಡ ಅಪ್​ಡೇಟ್​ ಮಾಡಲಾಗುವುದು ಎಂದು ಕಂಪನಿ ಹೇಳಿದೆ.
ಈ ನಡುವೆ, ಫೇರ್​ ಆ್ಯಂಡ್​ ಲವ್ಲಿ ಮಾರಾಟವನ್ನುನಿಲ್ಲಿಸುವಂತೆ ಕೆಲವು ಕಡೆಗಳಲ್ಲಿ ಲಕ್ಷಾಂತರ ಮಂದಿ ಸಹಿ ಹಾಕಿದ್ದಾರೆ. ಕಪ್ಪು ಚರ್ಮದ ಮಹಿಳೆಯರಿಗೆ ಭೇದಭಾವ ಮಾಡಲಾಗುತ್ತಿದೆ. ಆದ್ದರಿಂದ ಇದನ್ನು ನಿಷೇಧಿಸಬೇಕು ಎಂದು ಕೋರಲಾಗಿದೆ.
ಅಮೆರಿಕದಲ್ಲಿ ಕಪ್ಪುವರ್ಣೀಯ ಜಾರ್ಜ್​ ಫ್ಲ್ಯಾಡ್​ ಹತ್ಯೆಯ ನಂತರ ಕಪ್ಪು ವರ್ಣದ ಬಗ್ಗೆ ಈಗಾಗಲೇ ದೊಡ್ಡ ಆಂದೋಲನ ನಡೆದಿದೆ. ಅದರ ಆಧಾರದ ಮೇಲೆಯೇ ಈ ಲೋಷನ್​ ಹಾಗೂ ಕ್ರೀಂಗಳನ್ನೂ ಬಂದ್​ ಮಾಡಬೇಕು ಎಂಬ ಕೂಗು ಕೇಳಿಬಂದಿದೆ.(ಏಜೆನ್ಸೀಸ್​)
‘ಪತಿಯ ಕೊಂದ ಅಪ್ಪ-ಅಮ್ಮನಿಗೆ ಘೋರ ಶಿಕ್ಷೆಯಾಗುವವರೆಗೂ ವಿರಮಿಸಲಾರೆ’

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:one + nineteen =
Remember me
