ಕೋಳಿಕೋಡ್​​:ಕುಟುಂಬದ ಆರು ಜನರನ್ನು ಕೊಂದ ಆರೋಪದಡಿ ನ್ಯಾಯಾಂಗ ಬಂಧನದಲ್ಲಿರುವ ಜಾಲಿ ಥಾಮಸ್​ ಜೈಲಿನಲ್ಲಿ ಆತ್ಮಹತ್ಯೆಗೆ ಪ್ರಯತ್ನ ಮಾಡಿದ್ದಾಳೆ.
14 ವರ್ಷಗಳ ಅವಧಿಯಲ್ಲಿ ಜಾಲಿ ಥಾಮಸ್​ ತನ್ನ ಕುಟುಂಬದ ಆರು ಜನರನ್ನು ಉಪಾಯ ಮಾಡಿ ಕೊಲೆ ಮಾಡಿದ್ದಳು. ಸೈನೆಡ್​ ಬಳಸಿಕೊಂಡು ಎಲ್ಲರನ್ನು ಕೊಂದಿದ್ದ ಜಾಲಿಯನ್ನು 2019ರಲ್ಲಿ ಪೊಲೀಸರು ಬಂಧಿಸಿದ್ದರು. ಜಾಲಿ ಸೇರಿದಂತೆ ಒಟ್ಟು ಮೂರು ಜನರು ಆ ಕೊಲೆಗಳಲ್ಲಿ ಭಾಗಿಯಾಗಿದ್ದನ್ನು ಪತ್ತೆ ಹಚ್ಚಿ ಅವರನ್ನೆಲ್ಲ ಜೈಲಿಗೆ ಕಳುಹಿಸಲಾಗಿತ್ತು. ವರದಿಯ ಪ್ರಕಾರ ಆಕೆ ಜೈಲಿಗೆ ಬಂದಾಗಿನಿಂದಲೂ ಆಕೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಮನಸ್ಥಿತಿ ಹೆಚ್ಚಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ವೈದ್ಯಕೀಯ ಕಾಲೇಜಿನಲ್ಲಿ ಆಕೆಗೆ ಕೌನ್ಸೆಲಿಂಗ್​ ನಡೆಸಲಾಗುತ್ತಿತ್ತು.
ಇಂದು ಮುಂಜಾನೆ ಜಾಲಿ ಆತ್ಮಹತ್ಯೆಗೆ ಪ್ರಯತ್ನ ಮಾಡಿದ್ದಾಳೆ ಎನ್ನಲಾಗಿದೆ.(ಏಜೆನ್ಸೀಸ್​)
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:ten + seven =
Remember me
