ನವದೆಹಲಿ:ಸಂಸತ್​ನ ಚಳಿಗಾಲದ ಅಧಿವೇಶನದಿಂದ ಪ್ರತಿಪಕ್ಷಗಳ 12 ಸಂಸದರನ್ನು ಅಮಾನತುಗೊಳಿಸಿದ್ದ ವಿಚಾರವಾಗಿ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಹಾಗೂ ಕಾಂಗ್ರೆಸ್ ನಾಯಕ ಶಶಿ ತರೂರ್ ನಡುವೆ ಭಾನುವಾರ ಟ್ವಿಟರ್​ನಲ್ಲಿ ವಾಕ್ಸಮರ ನಡೆದಿದೆ.
ಸಭಾಧ್ಯಕ್ಷರ ಎದುರು ಪ್ರತಿಪಕ್ಷ ಸಂಸದರು ಪ್ರತಿಭಟನೆ ನಡೆಸಿ, ಗದ್ದಲ ಎಬ್ಬಿಸುತ್ತಿರುವ ವಿಡಿಯೋವನ್ನು ಸಚಿವ ಜೋಶಿ ಟ್ವಿಟರ್​ನಲ್ಲಿ ಪ್ರಕಟಿಸಿ, ಇದನ್ನು ತರೂರ್ ಖಾತೆಗೆ ಟ್ಯಾಗ್ ಮಾಡಿದ್ದರು. ಸಭಾಧ್ಯಕ್ಷರಿಗೆ ಗೌರವ ನೀಡುವುದು ಹಾಗೂ ಕಲಾಪದಲ್ಲಿ ಗೌರವಯುತವಾಗಿ ನಡೆದುಕೊಳ್ಳುವುದು ಜನಪ್ರತಿನಿಧಿ ಗಳ ಕರ್ತವ್ಯ. ಆದರೆ ಪ್ರತಿಪಕ್ಷ ಸಂಸದರು ಗದ್ದಲ ನಡೆಸುವುದಕ್ಕೆ ಆದ್ಯತೆ ನೀಡಿದರು. ಅವರ ಈ ದುರ್ವರ್ತನೆಯನ್ನು ಇಡೀ ದೇಶವೇ ನೋಡಿದೆ. ಈ ಸಂಸದರು ಕ್ಷಮೆ ಯಾಚನೆ ಮಾಡಿದರೆ ಅವರ ಅಮಾನತನ್ನು ವಾಪಸ್ ಪಡೆಯಲು ಸಿದ್ಧವಿದ್ದೆವು. ಆದರೆ ಕ್ಷಮೆ ಕೋರಲು ನಿರಾಕರಿಸಿದ ಸಂಸದರು, ತಮ್ಮ ವರ್ತನೆಯನ್ನು ಸಮರ್ಥನೆ ಮಾಡಿಕೊಂಡರು ಎಂದು ಜೋಶಿ ಪೋಸ್ಟ್ ನಲ್ಲಿ ಹೇಳಿದ್ದಾರೆ. ರಾಹುಲ್ ಗಾಂಧಿಯನ್ನು ಮೆಚ್ಚಿಸಲು ನೀವು ದಾರಿತಪ್ಪಬೇಡಿ. ಗೌರವವನ್ನು ನಾವೇ ಗಳಿಸಬೇಕೆ ಹೊರತು ಡಿಮ್ಯಾಂಡ್ ಮಾಡಬಾರದು. ಮನುಷ್ಯನು ತಪು್ಪ ಮಾಡುತ್ತಾನೆ. ಆದರೆ ಪದೇ ಪದೆ ತಪ್ಪನ್ನು ಸಮರ್ಥನೆ ಮಾಡಿಕೊಳ್ಳುವುದು ಮೂರ್ಖತನ ಎಂದಿದ್ದಾರೆ.
ತರೂರ್ ಪ್ರತಿಕ್ರಿಯೆ:ಜೋಶಿ ಟ್ವಿಟ್​ಗೆ ಪ್ರತಿಕ್ರಿಯೆ ನೀಡಿರುವ ತರೂರ್, ಪ್ರಧಾನಿ ಮೋದಿಯನ್ನು ಮೆಚ್ಚಿಸಲು ನೀವೂ ದಾರಿತಪ್ಪಬಾರದು. ಅವರು ಸುಳ್ಳಿನ ಜಗದ್ಗುರು. ಸದನದ ಇಂಥ ದೃಶ್ಯಗಳನ್ನು ಬಹಿರಂಗ ಮಾಡುವುದು ಕಾನೂನುಬದ್ಧವಲ್ಲ. ಗದ್ದಲ ನಡೆದ ದಿನ ರಾಜ್ಯಸಭೆಯ ಲಾಬಿಯಲ್ಲಿ ದೆಹಲಿ ಪೊಲೀಸರನ್ನು ಏಕೆ ನಿಯೋಜನೆ ಮಾಡಲಾಗಿತ್ತು? ರಾಜ್ಯಸಭೆಯ ಭದ್ರತಾ ಸಿಬ್ಬಂದಿ ಬಿಟ್ಟು ಪೊಲೀಸರನ್ನು ಯಾಕೆ ನಿಯೋಜನೆ ಮಾಡಲಾಗಿತ್ತು? ಎಂದು ಅವರು ಪ್ರಶ್ನಿಸಿದ್ದಾರೆ.
ಏನಿದು ಪ್ರಕರಣ?:ಮಳೆಗಾಲದ ಅಧಿವೇಶನದಲ್ಲಿ ಸರ್ಕಾರದ ವಿರುದ್ಧ ಕಲಾಪದಲ್ಲಿ ಭಾರಿ ಗದ್ದಲ ಎಬ್ಬಿಸಿ, ಅನುಚಿತ ವರ್ತನೆ ತೋರಿದ್ದ ಪ್ರತಿಪಕ್ಷದ 12 ರಾಜ್ಯಸಭೆ ಸದಸ್ಯರನ್ನು ಅಮಾನತು ಮಾಡಲಾಗಿತ್ತು. ಇದರ ವಿರುದ್ಧ ಪ್ರತಿಪಕ್ಷಗಳು ವ್ಯಾಪಕ ಪ್ರತಿಭಟನೆ ನಡೆಸಿದ್ದವು. ತನ್ನ ಕ್ರಮವನ್ನು ಕೇಂದ್ರ ಸರ್ಕಾರ ಸಮರ್ಥನೆ ಮಾಡಿಕೊಂಡಿತ್ತು. ಸಂಸದರು ಕ್ಷಮೆ ಯಾಚನೆ ಮಾಡಿದರೆ ಅಮಾನತು ಆದೇಶ ಹಿಂಪಡೆಯುವುದಾಗಿ ಸಭಾಧ್ಯಕ್ಷರು ಹೇಳಿದ್ದರು.
25 ಸಾವಿರಕ್ಕೂ ಅಧಿಕ ಮಾತ್ರೆ ತಿಂದಿದ್ದರೂ ಪ್ರಯೋಜನವಾಗಿಲ್ಲ ಎಂದು ಗುಂಡು ಹೊಡೆದುಕೊಂಡು ಬಿಇಒ ಆತ್ಮಹತ್ಯೆ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 + ten =
Remember me
