ಗೌರಿ ಹಬ್ಬವನ್ನು ಉತ್ತರ ಭಾರತದ ರಾಜ್ಯಗಳಲ್ಲಿ ಹರಿತಾಲಿಕಾ ತೀಜ್​ ಎಂದು ಕರೆಯುತ್ತಾರೆ. ಅಂದು ಮುತ್ತೈದೆಯರು ತಮ್ಮ ಪತಿಯ ಆರೋಗ್ಯ, ಶ್ರೇಯಸ್ಸಿಗಾಗಿ ಮಾತೆ ಪಾರ್ವತಿಯ ವ್ರತ ಮಾಡುತ್ತಾರೆ. ಶಿವ-ಪಾರ್ವತಿಯ ಪುಣ್ಯ ಕತೆಯನ್ನು ಓದಿ ಪೂಜೆ ಸಲ್ಲಿಸುತ್ತಾರೆ. ಹೀಗೆ ವ್ರತ ಮಾಡುವವರು ಅದು ಮುಗಿಯುವವರೆಗೂ ಅನ್ನಾಹಾರ, ನೀರನ್ನೂ ಸೇವಿಸುವುದಿಲ್ಲ.
ಇದೀಗ ದೆಹಲಿ ಮೂಲದ ಪತ್ರಕರ್ತೆಯೋರ್ವಳು ಈ ವ್ರತಕ್ಕೆ ಅಪಮಾನ ಮಾಡಿದ್ದಾಳೆ. ತೀಜ್​ ವ್ರತ ಕಥಾ ಪುಸ್ತಕವನ್ನು ರದ್ದಿಗೆ ಹಾಕುವುದು ಒಳ್ಳೆಯದು. ನನಗಂತೂ ಇದನ್ನು ಟಾಯ್ಲೆಟ್ ಪೇಪರ್​​ನಂತೆ ಉಪಯೋಗಿಸಬೇಕು ಎನ್ನಿಸುತ್ತದೆ ಎಂದು ಹೇಳುವ ಮೂಲಕ ಅದೆಷ್ಟೋ ಜನರ ಆಕ್ರೋಶಕ್ಕೆ ಕಾರಣಳಾಗಿದ್ದಾಳೆ. ಇದೊಂದು ಮಹಿಳಾ ವಿರೋಧಿ ವ್ರತವಾಗಿದೆ. ಅನ್ನ, ನೀರು ಮುಟ್ಟದೆ ಪತಿಗಾಗಿ ಪ್ರಾರ್ಥಿಸಬೇಕಂತೆ ಎಂದು ವ್ಯಂಗ್ಯವಾಡಿರುವ ಪತ್ರಕರ್ತೆ, ತಮ್ಮ ಮನೆಯ ಟಾಯ್ಲೆಟ್​ ಬಳಿ, ಈ ಪುಸ್ತಕ ಇಟ್ಟಿರುವ ಫೋಟೋವನ್ನೂ ಸೋಷಿಯಲ್​ ಮೀಡಿಯಾದಲ್ಲಿ ಅಪ್ಲೋಡ್​ ಮಾಡಿಕೊಂಡಿದ್ದಾಳೆ.
ಈಕೆಯ ಹೆಸರು ಸುಶ್ಮಿತಾ ಸೇನ್​. ವಿಡಿಯೋವೊಂದರನ್ನು ಕೂಡ ತಮ್ಮ ಟ್ವಿಟರ್​​ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಪುಸ್ತಕವನ್ನು ಟಾಯ್ಲೆಟ್ ಪೇಪರ್​ ಆಗಿ ಬಳಸಬೇಕೋ..ಟಿಶ್ಯೂ ಪೇಪರ್​ನಂತೆ ಉಪಯೋಗಿಸಬೇಕೋ ನೀವೇ ಹೇಳಿ ಎಂದೂ ಪ್ರಶ್ನಿಸಿದ್ದಾಳೆ.ಶಿವ -ಪಾರ್ವತಿ ಫೋಟೋ ಇರುವ ವ್ರತ ಕಥಾ ಪುಸ್ತಕವನ್ನು ಕೈಯಲ್ಲಿ ಹಿಡಿದು ವಿಡಿಯೋ ಮಾಡಿರುವ ಸುಶ್ಮಿತಾ ಸೇನ್​, ನಾನು ಈ ಅನುಪಯುಕ್ತ ಪುಸ್ತಕವನ್ನು 15 ರೂಪಾಯಿ ಕೊಟ್ಟು ತೆಗೆದುಕೊಂಡು ಬಂದಿದ್ದೇನೆ. ನನಗಂತೂ ಇದರಿಂದ ಯಾವುದೇ ಉಪಯೋಗವೂ ಆಗಿಲ್ಲ. ಈಗ ಟಿಶ್ಯೂ ಅಥವಾ ಟಾಯ್ಲೆಟ್​ ಪೇಪರ್​ ಆಗಿ ಬಳಸಬೇಕು ಎಂದು ಇಚ್ಛಿಸುತ್ತಿದ್ದೇನೆ. ನೀವೇನು ಹೇಳುತ್ತೀರಿ ಎಂದು ಕೇಳಿದ್ದನ್ನು ವಿಡಿಯೋದಲ್ಲಿ ನೋಡಬಹುದು.ಇದನ್ನೂ ಓದಿ:ಗೊತ್ತಾಗದೆ ಗಡಿ ದಾಟಿದ ಇವರು ಮರಳಿ ದೇಶಕ್ಕೆ ಕಾಲಿಡಲು 5 ವರ್ಷಗಳೇ ಬೇಕಾದವು…
ಆದರೆ ಈ ಪೋಸ್ಟ್ ಹಾಕುತ್ತಿದ್ದಂತೆ ಸುಶ್ಮಿತಾ ಸೇನ್​ ವಿರುದ್ಧ ಅನೇಕರು ಕಿಡಿ ಕಾರಿದ್ದಾರೆ. ದೊಡ್ಡ ವಿವಾದವೇ ಸೃಷ್ಟಿಯಾಗಿದೆ. ಪತ್ರಕರ್ತೆಗೆ ಅತ್ಯಾಚಾರ ಬೆದರಿಕೆಗಳೂ ಬರುತ್ತಿವೆ ಎನ್ನಲಾಗಿದೆ.
ನಂತರ ಸ್ಪಷ್ಟನೆ ನೀಡಿರುವ ಸುಶ್ಮಿತಾ ಸೇನ್​, ನನ್ನ ವಿಡಿಯೋದ ಸಣ್ಣ ತುಣುಕು ಮಾತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಹಬ್ಬದ ದಿನ ಉಪವಾಸ ಆಚರಣೆ ಮಾಡದ ಮಹಿಳೆಯರು ವಿಧವೆಯರಾಗುತ್ತಾರೆ. ಮಕ್ಕಳಾಗುವುದಿಲ್ಲ ಹಾಗೇ ಮುಂದಿನ ಜನ್ಮಗಳಲ್ಲಿ ಬಡವಳಾಗಿ ಹುಟ್ಟುತ್ತಾಳೆ ಎಂಬಿತ್ಯಾದಿಯಾಗಿ ಪುಸ್ತಕದಲ್ಲಿ ಹೇಳಲಾಗಿದೆ. ಇದೆಲ್ಲ ಮಹಿಳಾ ವಿರೋಧಿ ಅಲ್ಲವೇ ಎಂದು ಪತ್ರಕರ್ತೆ ಸಮಜಾಯಿಶಿ ನೀಡಿದ್ದಾಳೆ.ಇದನ್ನೂ ಓದಿ:ಸುಶಾಂತ್‌ಗೆ ನ್ಯಾಯ ಸಿಗಲಿದೆ, ಸುರೇಶ್ ರೈನಾ ಭಾವಪೂರ್ಣ ಸಂದೇಶ
ಈಕೆ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾಳೆ ಎಂದು ಆರೋಪಿಸಿ ಹಲವು ಸೋಷಿಯಲ್​ ಮೀಡಿಯಾ ಬಳಕೆದಾರರು ದೂರು ದಾಖಲಿಸಿದ್ದಾರೆ. ಬಿಜೆಪಿ ವಕ್ತಾರ ಸಂಬಿತ್​ ಪಾತ್ರಾ ಅವರೂ ಕೂಡ ಟ್ವೀಟ್ ಮೂಲಕ ಪತ್ರಕರ್ತೆಯ ನಡೆಯನ್ನು ಖಂಡಿಸಿದ್ದಾರೆ. ಈ ಮಹಿಳೆ ಯಾರು..ವಿಡಿಯೋದ ಸತ್ಯಾಸತ್ಯತೆ ಏನು ಎಂಬುದನ್ನು ಯಾರಾದರೂ ತಿಳಿಸುವಿರಾ? ಶಿವ-ಪಾರ್ವತಿಯ ಚಿತ್ರವಿರುವ ಫೋಟೋವನ್ನು ಟಾಯ್ಲೆಟ್​ ಬಳಿ ಇಡಲಾಗಿದೆಯಲ್ಲ..ನಾಚಿಕೆಗೇಡು ಎಂದು ಕಿಡಿಕಾರಿದ್ದಾರೆ. (ಏಜೆನ್ಸೀಸ್​)

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + 1 =
Remember me
