ಪಟನಾ:ಬಿಹಾರದಲ್ಲಿ ಕರೊನಾ ವೈರಸ್​ ವಿಪರೀತ ಹೆಚ್ಚಾಗುತ್ತಿದೆ. ಬಿಜೆಪಿ ನಾಯಕರಿಗಂತೂ ಎಡಬಿಡದೆ ಕಾಡುತ್ತಿದೆ. ಈಗಾಗಲೇ 75ಕ್ಕೂ ಹೆಚ್ಚು ಬಿಜೆಪಿ ಮುಖಂಡರು ಕರೊನಾ ಸೋಂಕಿಗೆ ಒಳಗಾಗಿದ್ದಾರೆ.
ಇದೀಗ ಬಿಹಾರ ಬಿಜೆಪಿ ಅಧ್ಯಕ್ಷ ಸಂಜಯ್​ ಜೈಸ್ವಾನ್​ ಅವರಲ್ಲೂ ಕರೊನಾ ವೈರಸ್​ ದೃಢಪಟ್ಟಿದೆ. ಕೇವಲ ಸಂಜಯ್​ ಅವರಿಗೆ ಮಾತ್ರವಲ್ಲದೆ, ಅವರ ತಾಯಿ, ಪತ್ನಿಗೂ ಸೋಂಕು ತಗುಲಿದೆ. ಈ ಬಗ್ಗೆ ಸಂಜಯ್​ ಜೈಸ್ವಾನ್​ ಸಹೋದರ ದೀಪಕ್​ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಸಂಜಯ್​ ಅವರಲ್ಲಿ ಕೆಮ್ಮು ಮತ್ತು ಸಣ್ಣ ಪ್ರಮಾಣದಲ್ಲಿ ಕೆಮ್ಮು ಕಾಣಿಸಿಕೊಂಡಿದೆ. ಅವರು ಇತ್ತೀಚೆಗಷ್ಟೇ ಪಟನಾದಲ್ಲಿ ನಡೆದ ಪಕ್ಷದ ಪ್ರಾದೇಶಿಕ ಸಭೆಯಲ್ಲಿ ಪಾಲ್ಗೊಂಡಿದ್ದರು. ಅಲ್ಲಿಂದ ಬಂದ ಬಳಿಕ ಆರೋಗ್ಯದಲ್ಲಿ ಏರುಪೇರಾಗಲು ಪ್ರಾರಂಭವಾಗಿತ್ತು. ಅನುಮಾನಗೊಂಡು ಕೊವಿಡ್​-19 ಟೆಸ್ಟ್​ ಮಾಡಿಸಿದಾಗ, ಸೋಂಕು ಇರುವುದು ದೃಢಪಟ್ಟಿದೆ ಎಂದು ದೀಪಕ್​ ಅವರು ತಿಳಿಸಿದ್ದಾರೆ. ನಂತರ ಅವರ ಪತ್ನಿ ಮತ್ತು ತಾಯಿಯನ್ನೂ ತಪಾಸಣೆಗೆ ಒಳಪಡಿಸಲಾಗಿತ್ತು.ಇದನ್ನೂ ಓದಿ:ಸಿಬಿಎಸ್​ಇ ಫಲಿತಾಂಶ: ಅಭಿನಂದನೆ ಸಲ್ಲಿಸಿ…ಆತ್ಮವಿಶ್ವಾಸವನ್ನೂ ತುಂಬಿದ ಪ್ರಧಾನಿ ಮೋದಿ
ಬಿಹಾರದಲ್ಲಿ ಕರೊನಾ ಸೋಂಕಿನ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜು.16ರಿಂದ 31ರವರೆಗೆ ಮತ್ತೊಮ್ಮೆ ಲಾಕ್​ಡೌನ್ ಹೇರಿಕೆಯಾಗಲಿದೆ. ಅಕ್ಟೋಬರ್​ನಲ್ಲಿ ಚುನಾವಣೆ ನಡೆಯಲಿದ್ದು, ಬಿಜೆಪಿ ಮುಖಂಡರು ಅದರ ತಯಾರಿಯನ್ನೂ ನಡೆಸಿದ್ದಾರೆ. ಸಭೆ, ವರ್ಚ್ಯುವಲ್​ ರ್ಯಾಲಿಗಳೂ ನಡೆಯುತ್ತಿವೆ. (ಏಜೆನ್ಸೀಸ್​)
ಪಾಲ್ಗರ್​ ಸಾಧುಗಳ ಗುಂಪು ಹತ್ಯೆ: 25 ಮಂದಿಗೆ ಜಾಮೀನು ನಿರಾಕರಿಸಿದ ಕೋರ್ಟ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + two =
Remember me
