ಚೆನ್ನೈ:ಒಮ್ಮೊಮ್ಮೆ ವಿಷಯದ ಪರವಾಗಿ ಸರಿಯಾದ ವಾದ ಮಂಡಿಸಲು ವಕೀಲರು ಗಂಭೀರ ಅಧ್ಯಯನಕ್ಕೆ ಮುಂದಾಗುವುದನ್ನು ಕೇಳಿದ್ದೇವೆ, ಅದು ಸರ್ವೇ ಸಾಮಾನ್ಯ ಕೂಡ. ಆದರೆ ಇಲ್ಲೊಂದು ಪ್ರಕರಣದಲ್ಲಿ ನ್ಯಾಯಾಧೀಶರೊಬ್ಬರು ಸೂಕ್ತ ತೀರ್ಪು ನೀಡುವ ಸಲುವಾಗಿ ಮನಶಾಸ್ತ್ರಜ್ಞರಿಂದ ಕೌನ್ಸೆಲಿಂಗ್‌ಗೆ ಒಳಗಾಗಲು ನಿರ್ಧರಿಸಿದ್ದಾರೆ. ಅಂದಹಾಗೆ ಇಷ್ಟಕ್ಕೆಲ್ಲ ಕಾರಣ ಆ ಸಲಿಂಗಕಾಮಿ ಜೋಡಿ.
ಸಲಿಂಗಕಾಮಿ ಯುವತಿಯರಿಬ್ಬರು ಜೊತೆಗೆ ಜೀವನ ಸಾಗಿಸುವ ಸಲುವಾಗಿ ಮನೆ ಬಿಟ್ಟು ಬಂದು ಚೆನ್ನೈನಲ್ಲಿ ನೆಲೆಸಿದ್ದಾರೆ. ಆದರೆ ಇದಕ್ಕೆ ತಮ್ಮ ಮನೆಯವರು ಆಕ್ಷೇಪ ಹೊಂದಿದ್ದು, ಅವರಿಂದ ಏನೂ ತೊಂದರೆ ಆಗದಂತೆ ರಕ್ಷಣೆ ಕೊಡಿಸಬೇಕು ಎಂದು ಕೋರಿ ಈ ಜೋಡಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಮದ್ರಾಸ್‌ ಹೈಕೋರ್ಟ್‌ನಲ್ಲಿ ಈ ಪ್ರಕರಣವಿದೆ.
ಈ ಪ್ರಕರಣದ ವಾದ-ವಿವಾದಗಳನ್ನು ಆಲಿಸಿದ ನ್ಯಾಯಾಧೀಶ ಎನ್.‌ ಆನಂದ ವೆಂಕಟೇಶ್‌ ಅವರು, ಪ್ರಕರಣದ ಸಂಬಂಧ ಸಮಂಜಸವಾದ ತೀರ್ಪು ನೀಡುವ ಸಲುವಾಗಿ ಮನಶಾಸ್ತ್ರಜ್ಞರಿಂದ ಕೌನ್ಸೆಲಿಂಗ್‌ ಪಡೆಯಲು ನಿರ್ಧರಿಸಿದ್ದಾರೆ. ತಮಗೆ ಸಲಿಂಗಕಾಮಿ ಜೋಡಿಗಳ ನಡುವಿನ ಸಂಬಂಧದ ಕುರಿತು ಹೆಚ್ಚಿನ ವಿಷಯ ಗೊತ್ತಿಲ್ಲ, ಆ ಬಗ್ಗೆ ಇನ್ನಷ್ಟು ವಿಷಯ ತಿಳಿದುಕೊಂಡು ತೀರ್ಪು ನೀಡಬೇಕಿದೆ ಎಂದು ಅವರು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ:ಉಸಿರಾಟದ ಸಮಸ್ಯೆಯೇ..? ತುರ್ತು ಪರಿಹಾರಕ್ಕೆ ಇಲ್ಲಿದೆ ಸುಲಭದ ಮನೆಮದ್ದು..
ಅಂತಿಮವಾಗಿ ನಾನು ಈ ಪ್ರಕರಣದ ಬಗ್ಗೆ ತೀರ್ಪು ನೀಡುವಾಗ ಪದಗಳು ನನ್ನ ಹೃದಯದಿಂದ ಬರಬೇಕೇ ವಿನಃ ಮನಸಿನಿಂದಲ್ಲ. ಹೀಗಾಗಿ ಈ ಕುರಿತು ಇನ್ನಷ್ಟು ತಿಳಿದುಕೊಳ್ಳಬೇಕಿದೆ ಎಂದು ಹೇಳಿರುವ ಅವರು, ಈ ಕುರಿತು ಯುವತಿಯರಿಬ್ಬರ ಪಾಲಕರೂ ಕೌನ್ಸೆಲಿಂಗ್‌ಗೆ ಒಳಗಾಗಬೇಕು ಎಂದಿದ್ದಾರೆ. ಅಲ್ಲದೆ ಅಲ್ಲಿಯವರೆಗೆ ಯುವತಿಯರಿಗೆ ಸೂಕ್ತ ರಕ್ಷಣೆ ಒದಗಿಸುವಂತೆ ಪೊಲೀಸರಿಗೆ ಸೂಚಿಸಿದ್ದು, ಮುಂದಿನ ವಿಚಾರಣೆಯನ್ನು ಜೂ. 7ಕ್ಕೆ ಮುಂದೂಡಿದ್ದಾರೆ.
ಬೆಡ್ ಮ್ಯಾನೇಜ್‌ಮೆಂಟ್‌ ಪೋರ್ಟಲ್ ಬಿಡುಗಡೆ: ಕರೊನಾ ಸೋಂಕಿತರಿಗೆ ಬೆಡ್ ಸಮಸ್ಯೆ ಆಗದಂತೆ ಕ್ರಮ

ಕರೊನಾದಿಂದ ಆಸ್ಪತ್ರೆ ಸೇರಿದರೂ ನಿಲ್ಲದ ಕನಸು; ಹಾಸ್ಪಿಟಲ್​ ಬೆಡ್ ಮೇಲೆ ಸಿಎ ತಯಾರಿ ನಡೆಸಿದ ಸೋಂಕಿತ

ಕುಣಿಗಲ್​ ತಾಲೂಕಿನಲ್ಲಿ ಸರ್ಕಾರಿ ಶಾಲೆಯ ಮೂವರು ಶಿಕ್ಷಕರು ಕರೊನಾಗೆ ಬಲಿ

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:4 × four =
Remember me
