ನವದೆಹಲಿ:ಸ್ವರಕ್ಷಣೆಗಾಗಿ ಮಾತನಾಡುವುದರಿಂದ ತಮ್ಮನ್ನು ತಾವು ತಡೆಯುವ ಕಾರಣ ಜಡ್ಜ್​ಗಳು ಸೋಷಿಯಲ್ ಮೀಡಿಯಾಗಳಲ್ಲಿ ಜ್ಯೂಸಿ ಗಾಸಿಪ್​, ಅಪಪ್ರಚಾರಗಳ ಸಂತ್ರಸ್ತರಾಗುತ್ತಿದ್ದಾರೆ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎನ್.ವಿ.ರಮಣ ಕಳವಳ ವ್ಯಕ್ತಪಡಿಸಿದ್ದಾರೆ. ಭಾವಿ ಮುಖ್ಯನ್ಯಾಯಮೂರ್ತಿಗಳೆನ್ನುವ ಕಾರಣಕ್ಕೆ ಅವರ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.
ಸುಪ್ರೀಂ ಕೋರ್ಟ್​ನ ನಿವೃತ್ತ ನ್ಯಾಯಮೂರ್ತಿ ಆರ್. ಬಾನುಮತಿ ಬರೆದ ಜುಡಿಷಿಯರಿ, ಜಡ್ಜ್ ಆ್ಯಂಡ್ ದ ಅಡ್ಮನಿಷ್ಟ್ರೇಶನ್ ಆಫ್ ಜಸ್ಟೀಸ್ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಭಾಗಿಯಾಗಿ ಮಾತನಾಡಿದರು. ಜಡ್ಜ್​ಗಳ ಬದುಕು ಎನ್ನುವುದು ಇತರರಿಗಿಂತ ಭಿನ್ನವಾಗೇನೂ ಇಲ್ಲ. ಅವರು ದಂತದ ಮಹಲಿನಲ್ಲಿ ಐಷಾರಾಮಿ ಬದುಕನ್ನೇನೂ ಸಾಗಿಸುತ್ತಿಲ್ಲ. ಹಾಗೊಂದು ತಪ್ಪು ತಿಳಿವಳಿಕೆ ಇರುವವರು ಇದನ್ನು ಅರ್ಥಮಾಡಿಕೊಳ್ಳಬೇಕು ಎಂದು ನ್ಯಾಯಮೂರ್ತಿ ರಮಣ ಅವರು ಅಭಿಪ್ರಾಯಪಟ್ಟರು.
ಇದನ್ನೂ ಓದಿ:ತೆರಿಗೆ ವಂಚನೆ ಕೇಸ್ – ಎ.ಆರ್.ರೆಹಮಾನ್​ಗೆ ಮದ್ರಾಸ್ ಹೈಕೋರ್ಟ್ ನೋಟಿಸ್​
ಇದೇ ಕಾರ್ಯಕ್ರಮದಲ್ಲಿ ಮುಖ್ಯನ್ಯಾಯಮೂರ್ತಿ ಎಸ್​.ಎ.ಬೊಬ್ಡೆ ಅವರು ಕೂಡ ಭಾಗಿಯಾಗಿದ್ದು, ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ತದ್ವಿರುದ್ಧವಾಗಿ ತಮಗೆ ಬೇಕಾದಂತೆ, ಬಾಯಿಗೆ ಬಂದಂತೆ ಮಾತನಾಡುವುದರಿಂದ ಜನಸಾಮಾನ್ಯರನ್ನು ಯಾವ ಕಾನೂನು ತಡೆಯುತ್ತದೆಯೋ ಅದೇ ಕಾನೂನು ಜಡ್ಜ್​ಗಳ ವಾಕ್​ ಸ್ವಾತಂತ್ರ್ಯಕ್ಕೂ ಕಡಿವಾಣ ಹಾಕಿದೆ ಎಂದು ಹೇಳಿದರು.
ಇದನ್ನೂ ಓದಿ:1 ರೂಪಾಯಿ ಮತ್ತು ಪ್ರಶಾಂತ್ ಭೂಷಣ್ ಅವರ ಮೊದಲ ಪ್ರತಿಕ್ರಿಯೆ!
ಅವರಿಬ್ಬರ ಈ ಹೇಳಿಕೆಯು, ಆ್ಯಕ್ಟಿವಿಸ್ಟ್ -ಲಾಯರ್ ಪ್ರಶಾಂತ್ ಭೂಷಣ್ ಅವರ ನ್ಯಾಯಾಂಗ ನಿಂದನೆ ಪ್ರಕರಣದ ಹಿನ್ನೆಲೆಯಲ್ಲಿ ಮಹತ್ವ ಪಡೆದುಕೊಂಡಿದೆ. (ಏಜೆನ್ಸೀಸ್)
ಒಂದ್​ ರೂಪಾಯಿ ಕಟ್ಟೋದಿಲ್ಲ, ಹೊಸ ಪೀಠದಲ್ಲಿ ಕೇಸ್​ ವಿಚಾರಣೆ ನಡೆಸಿ – ಪ್ರಶಾಂತ್ ಭೂಷಣ್ ಮೇಲ್ಮನವಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × two =
Remember me
