ನವದೆಹಲಿ:ದೇಶಾದ್ಯಂತ್​ ಲಾಕ್​ಡೌನ್​ ಜಾರಿಯಲ್ಲಿದೆ. ಜನರು ಮನೆಯಿಂದ ಹೊರಗೆ ಬರುವಂತೆಯೇ ಇಲ್ಲ. ವಾಹನಗಳು ರಸ್ತೆಗಿಳಿಯುವಂತೆಯೂ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಇಬ್ಬರು ನ್ಯಾಯಮೂರ್ತಿಗಳು ಅಂದಾಜು 2,000 ಕಿ.ಮೀ.ಗೂ ಹೆಚ್ಚು ದೂರವನ್ನು ಪ್ರಯಾಣಿಸಿದ್ದು ನಿಜಕ್ಕೂ ಅಚ್ಚರಿ ಮೂಡಿಸುತ್ತದೆ.
ನ್ಯಾಯಮೂರ್ತಿ ದೀಪಂಕರ್​ ದತ್ತಾ ಕೋಲ್ಕತ್ತಾದಿಂದ ಮುಂಬೈಗೆ ಪ್ರಯಾಣ ಬೆಳೆಸಿದ್ದರೆ, ಇನ್ನೋರ್ವ ನ್ಯಾಯಮೂರ್ತಿ ಬಿಸ್ವನಾಥ್​ ಸೋಮದ್ದೇರ್​ ಅಲಹಾಬಾದ್​ನಿಂದ ಶಿಲ್ಲಾಂಗ್​ಗೆ ಕೋಲ್ಕತ್ತ ಮಾರ್ಗವಾಗಿ ತೆರಳುತ್ತಿದ್ದಾರೆ. ಇಷ್ಟೆಲ್ಲ ವಿವರಗಳು ತಿಳಿದಿವೆ ಎಂದ ಮೇಲೆ ಇದೊಂದು ಅಧಿಕೃತ ಪ್ರವಾಸವೇ ಇರಬೇಕು ಎಂದುಕೊಂಡರೆ ನಿಮ್ಮ ಊಹೆ ಸರಿಯಾಗಿದೆ.
ನ್ಯಾಮೂರ್ತಿ ದೀಪಂಕರ್​ ದತ್ತಾ ಆವರನ್ನು ಮುಂಬೈ ಹೈಕೋರ್ಟ್​ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕ ಮಾಡಲಾಗಿದೆ. ಅಂತೆಯೇ, ನ್ಯಾಯಮೂರ್ತಿ ಬಿಸ್ವನಾಥ್​ ಮೇಘಾಲಯ ಹೈಕೋರ್ಟ್​ನ ಸಾರಥ್ಯ ವಹಿಸಿಕೊಳ್ಳಲಿದ್ದಾರೆ. ಇವರಿಬ್ಬರೂ ಆ ಹೈಕೋರ್ಟ್​ಗಳ ಮುಖ್ಯ ನ್ಯಾಯಮೂರ್ತಿಗಳಾಗಿ ಅಧಿಕಾರ ಸ್ವೀಕರಿಸಲು ಕಾರಿನಲ್ಲೇ ಪ್ರಯಾಣ ಬೆಳೆಸಿದ್ದಾರೆ. ವಿಮಾನ, ರೈಲು ಹಾಗೂ ವಿಮಾನ ಹಾರಾಟ ಸ್ಥಗಿತಗೊಂಡಿರುವುದರಿಂದ ,ಇದು ಅನಿವಾರ್ಯವೂ ಆಗಿದೆ.
ದೀಪಂಕರ್​ ಸೋಮವಾರ ಮಧ್ಯಾಹ್ನದ ವೇಳೆಗೆ ಮುಂಬೈ ತಲುಪಲಿದ್ದರೆ, ಭಾನುವಾರ ಮಧ್ಯಾಹ್ನ ವೇಳೆಗೆ ಬಿಸ್ವನಾಥ್​ ಶಿಲ್ಲಾಂಗ್​ ಸೇರಿಕೊಂಡಿದ್ದಾರೆ. ರಸ್ತೆ ಮಾರ್ಗದಲ್ಲಿ ಒಟ್ಟಾರೆ 2,000ಕ್ಕೂ ಅಧಿಕ ಕಿ.ಮೀ. ಪ್ರಯಾಣ ಇವರದ್ದಾಗಿದೆ.ದೀಪಂಕರ್​ ದತ್ತಾ ಮಗನೊಂದಿಗೆ ಸರದಿಯಲ್ಲಿ ಕಾರು ಚಲಾಯಿಸುತ್ತ ಮುಂಬೈಗೆ ಪ್ರಯಾಣ ಬೆಳೆಸಿದ್ದಾರೆ. ಏಕೆಂದರೆ, ಕುಟುಂಬವೂ ಮುಂಬೈಗೆ ಸ್ಥಳಾಂತರಗೊಳ್ಳುತ್ತಿದೆ.
ಇನ್ನು, ಬಿಸ್ವನಾಥ್​ ಅಲಹಾಬಾದ್​ನಿಂದ ಕಚೇರಿಯ ಕಾರಿನಲ್ಲಿಯೇ ಪತ್ನಿ ಜತೆಗೂಡಿ ಪ್ರಯಾಣ ಆರಂಭಿಸಿದ್ದಾರೆ. ಶನಿವಾರ ಸಂಜೆ ಕೋಲ್ಕತ್ತ ತಲುಪಿದ ನ್ಯಾಯಮೂರ್ತಿಗಳು ಇಲ್ಲಿ ಕೆಲ ಕಾಲ ವಿಶ್ರಾಂತಿ ಪಡೆದರು. ಭಾನುವಾರ ಮಧ್ಯಾಹ್ನ ಶಿಲ್ಲಾಂಗ್​ ತಲುಪಿದ್ದಾರೆ.
ಅಂದಿನ​ ಲಾಕ್​ಡೌನ್​ ವೇಳೆ ಸಹೃದಯತೆ ಮೆರೆದಿದ್ದ ಮೈಸೂರು ಅರಸರು, ಮನೆ ಕಟ್ಟಿಕೊಳ್ಳಲು ವರ್ಷದ ವೇತನ ಮುಂಗಡ ಮಂಜೂರು

Judges travelled over 2000 km by road amid lockdown to assume charge as HC chief justices
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + twenty =
Remember me
