ಚೆನ್ನೈನಲ್ಲಿರುವ ಅಮೆರಿಕ ದೂತಾವಾಸದ ಕಾನ್ಸಲ್​ ಜನರಲ್​ ಆಗಿ ಜ್ಯುಡಿತ್​ ರೇವಿನ್​ ಅವರು ಇಂದು ಅಧಿಕಾರ ಸ್ವೀಕರಿಸಿದ್ದಾರೆ.ನಂತರ ಮಾತನಾಡಿ, ಕೊವಿಡ್​-19ನಂತಹ ಒಂದು ಐತಿಹಾಸಿಕ ಸಂಕಷ್ಟ ಸಮಯದಲ್ಲಿ ದಕ್ಷಿಣ ಏಷ್ಯಾದಲ್ಲಿ ಅಮೆರಿಕವನ್ನು ಪ್ರತಿನಿಧಿಸುತ್ತಿರುವುದು ನನ್ನ ದೊಡ್ಡ ಸೌಭಾಗ್ಯವೇ ಸರಿ. ಭಾರತ ಮತ್ತು ಅಮೆರಿಕದ ಉದ್ದೇಶ, ಧ್ಯೇಯಗಳನ್ನು ಕರ್ನಾಟಕ, ಕೇರಳ, ತಮಿಳುನಾಡು, ಅಂಡಮಾನ್​ ನಿಕೋಬಾರ್​, ಲಕ್ಷದ್ವೀಪ ಮತ್ತು ಪುದುಚೇರಿಗಳಲ್ಲಿ ಮುನ್ನಡೆಸಿಕೊಂಡು ಹೋಗುವತ್ತ ಕೆಲಸ ಮಾಡುತ್ತೇನೆ. ಈ ಮೂಲಕ ಭಾರತ-ಅಮೆರಿಕ ನಡುವಿನ ಸ್ನೇಹ ವೃದ್ಧಿಗೆ ಶ್ರಮಿಸುತ್ತೇನೆ ಎಂದು ಹೇಳಿದ್ದಾರೆ.
ಜ್ಯುಡಿತ್​ ಅವರು ಚೆನ್ನೈಗೆ ಆಗಮಿಸುವ ಮೊದಲು, 2017ರಿಂದ ಪೆರುವಿನ ಲಿಮಾದಲ್ಲಿ ಪಬ್ಲಿಕ್​ ಅಪೇರ್ಸ್​ ಕಾನ್ಸುಲರ್​ ಆಗಿ ಕಾರ್ಯ ನಿರ್ವಹಿಸಿದ್ದರು. 2015ರಿಂದ 2017ರವರೆಗೆ ವಾಷಿಂಗ್ಟನ್​ ಡಿಸಿಯಲ್ಲಿ ಹೈಟಿ ವಿಶೇಷ ಸಂಯೋಜನಾಧಿಕಾರಿ ಕಚೇರಿಯಲ್ಲಿ ಇಂಟರ್​ನ್ಯಾಷನಲ್​ ರಿಲೇಷನ್ಸ್​ ಜನರಲ್​ ಆಗಿದ್ದರು. ಇಸ್ಲಮಾಬಾದ್​ನಲ್ಲಿ ಡೆಪ್ಯುಟಿ ಕಲ್ಚರಲ್​ ಅಫೇರ್ಸ್ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ ಅನುಭವವೂ ಇವರಿಗೆ ಇದೆ.ಇದನ್ನೂ ಓದಿ:ಡ್ರಗ್ಸ್ ಜಾಲದ ಮಾಹಿತಿ ನೀಡಿ; ಡ್ರಗ್ಸ್ ಮುಕ್ತ ಕರ್ನಾಟಕ ಅಭಿಯಾನಕ್ಕೆ ಜತೆಯಾಗಿ; ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ಕುಮಾರ್​ ಕರೆ
2003ರಲ್ಲಿ ಸ್ಟೇಟ್​ ಡಿಪಾರ್ಟ್​​ಮೆಂಟ್​ನಲ್ಲಿ ಸೇವೆ ಆರಂಭಿಸಿದ ರೇವಿನ್​, 2005ರವರೆಗೆ ಮೆಕ್ಸಿಕೋದ ಸಿಯುಡಾಡ್​​ನ ಜುವಾರೆನ್​ ದೂತಾವಾಸದಲ್ಲಿ ವೈಸ್​ ಕಾನ್ಸಲ್​ ಆಗಿ ಕೆಲಸ ಮಾಡಿದ್ದಾರೆ. ಇವರು ಪತ್ರಕರ್ತೆ, ಸಂಪಾದಕಿ, ಅನುವಾದಕಿಯೂ ಹೌದು. Beyond Our Degrees of Separation: Washington Monsoons and Islamabad Blues, (ಸಹಲೇಖಕಿ), Ballet in the Cane Fields: Vignettes from a Dominican Wanderlogue ಎಂಬ ಪುಸ್ತಕಗಳನ್ನು ರಚಿಸಿದ್ದಾರೆ.
ಕಾನ್ಸಲ್​ ಜನರಲ್​ ಜ್ಯುಡಿತ್​ ರೇವಿನ್​ ಅವರು ರೊಮಾನ್ಸ್​ ಲ್ಯಾಂಗ್ವೇಜಸ್​ ಆ್ಯಂಡ್​ ಲಿಟರೇಚರ್ಸ್​ ವಿಷಯದಲ್ಲಿ, ಹಾವರ್ಡ್​ ವಿವಿಯಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಸ್ಪ್ಯಾನಿಷ್​ ಮತ್ತು ಫ್ರೆಂಚ್​ ಭಾಷೆಗಳನ್ನೂ ಇವರು ಮಾತನಾಡಬಲ್ಲರು.
ಇಂದೂ 9 ಸಾವಿರದ ಗಡಿ ದಾಟಿದ ಕರೊನಾ ಸೋಂಕಿತರ ಸಂಖ್ಯೆ; 95 ಮಂದಿ ಸಾವು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 2 =
Remember me
