ಬೆಂಗಳೂರು:ಪ್ರತಿ ವರ್ಷ ಜೂ. 22ರಂದು ಶ್ರೀ ಶ್ರೀ ರವಿಶಂಕರ್ ದಿನವೆಂದು ಆಚರಿಸುವುದಾಗಿ ಘೋಷಣೆ ಮಾಡಲಾಗಿದೆ. 28 ಅಮೆರಿಕನ್ ಮತ್ತು ಕೆನಡದ ನಗರಗಳ ಲೀಗ್‌ಗೆ ಸೇರಿರುವ ಅಲ್ಲೆಘೆನಿಯು ಈ ಘೋಷಣೆಯನ್ನು ಮಾಡಿದೆ.
‘ಸ್ವಯಂಸೇವಕತೆ ಮತ್ತು ಸಾಮಾಜಿಕ ಉಪಕ್ರಮಗಳ ಮೂಲಕ ನಗರದೊಳಗಿನ ಹಿಂಸಾಚಾರ ಮತ್ತು ಅಪರಾಧಗಳನ್ನು ಕಡಿಮೆ ಮಾಡಲು ಹಾಗು ವೈವಿಧ್ಯಮಯ ಸಮುದಾಯಗಳನ್ನು ಒಂದುಗೂಡಿಸುವ ಪ್ರಯತ್ನಗಳಿಗಾಗಿ’ ಜೂನ್ 22 ಶ್ರೀ ಶ್ರೀ ರವಿಶಂಕರ್ ದಿನ ಎಂದು ಘೋಷಿಸಲಾಯಿತು.
ಕೌಂಟಿ ಎಕ್ಸಿಕ್ಯೂಟಿವ್ ರಿಚ್ ಫಿಟ್ಜ್‌ಗೆರಾಲ್ಡ್ ಅವರು ‘ಜಾಗತಿಕ ಮಾನವತಾವಾದಿ, ಆಧ್ಯಾತ್ಮಿಕ ನಾಯಕ ಮತ್ತು ಶಾಂತಿದೂತರಾಗಿ ಅವರನ್ನು ಗೌರವಿಸಲು’ ಜೂನ್ 22 ಶ್ರೀ ಶ್ರೀ ರವಿಶಂಕರ್ ದಿನವೆಂದು ಘೋಷಣೆ ಮಾಡಿದರು.
ಇದನ್ನೂ ಓದಿ:ನಾಚಿಕೆ-ಅವಮಾನ ಸಹಿಸಿಕೊಂಡು ಬಯಲಲ್ಲೇ ದೇಹದ ಒತ್ತಡ ನಿವಾರಿಸಿಕೊಂಡೆ: ಟಾಯ್ಲೆಟ್ ಇರದೆ ಪಟ್ಟ ಕಷ್ಟದ ಬಗ್ಗೆ ರಾಷ್ಟ್ರಪತಿಗೇ ಪತ್ರ ಬರೆದ ಮಹಿಳೆ
ಸಾಂಸ್ಕೃತಿಕ ವೈವಿಧ್ಯತೆಯ ನಡುವೆ ಸಾಮರಸ್ಯ ಪ್ರತಿಪಾದಿಸುವಲ್ಲಿ ಗುರುದೇವರು ಗಮನಹರಿಸುತ್ತಾರೆ. ಸ್ವಯಂಸೇವಕತೆ ಮತ್ತು ಆಂತರಿಕ ಹಿಂಸಾಚಾರ, ಅಪರಾಧವನ್ನು ಕಡಿಮೆ ಮಾಡಲು ಸಾಮಾಜಿಕ ಉಪಕ್ರಮಗಳ ಮೂಲಕ ವೈವಿಧ್ಯಮಯ ಸಮುದಾಯಗಳನ್ನು ಒಂದುಗೂಡಿಸುವ ಪ್ರಯತ್ನಗಳನ್ನು ಮಾಡಿದ್ದಾರೆ. ಸಂಘರ್ಷದ ಸಮಯದಲ್ಲಿ ಸಂಸ್ಕೃತಿ ಮತ್ತು ಸಮುದಾಯಗಳನ್ನು ಒಟ್ಟಿಗೆ ಸೇರಿಸುವ ಉಪಕ್ರಮಗಳು ಅವರದ್ದಾಗಿವೆ. ಜಾಗತಿಕ ನಾಯಕ ಗುರುದೇವ್ ಅವರು ಸಶಕ್ತ ಸಮುದಾಯಗಳನ್ನು ನಿರ್ಮಿಸಲು ವಿಶ್ವಾದ್ಯಂತ ಹತ್ತು ಲಕ್ಷಕ್ಕಿಂತಲೂ ಹೆಚ್ಚು ಜನರೊಂದಿಗೆ ಸ್ವಯಂಸೇವಕತೆ ಮತ್ತು ಸೇವೆಯ ಅಲೆಯನ್ನು ಪ್ರೇರೇಪಿಸಿದ್ದಾರೆ ಎಂದು ಇದೇ ಸಂದರ್ಭದಲ್ಲಿ ಉಲ್ಲೇಖಿಸಲಾಯಿತು.
ಇದನ್ನೂ ಓದಿ:ಇದನ್ನು ಕುಡಿದರೆ ಹೃದಯಾಘಾತದ ಸಾಧ್ಯತೆ ತೀರಾ ಕಡಿಮೆ ಅಂತೆ!; ಏನಿದು, ಎಷ್ಟು ಕುಡಿಯಬೇಕು?
ಅವರ ಗೌರವಾರ್ಥ ದಿನಗಳನ್ನು ಆಚರಿಸುವ 25 ನಗರಗಳ ಹೊರತಾಗಿಯೂ ಗುರುದೇವ್ 5 ದೇಶಗಳಿಂದ ಅತ್ಯುನ್ನತ ನಾಗರಿಕ ಗೌರವಗಳನ್ನು, ವಿಶ್ವಾದ್ಯಂತ ಸರ್ಕಾರಗಳಿಂದ 39ಕ್ಕೂ ಹೆಚ್ಚು ಪ್ರಶಂಸನೀಯ ಗೌರವ-ಪ್ರಶಸ್ತಿಗಳನ್ನು ಮತ್ತು 26 ಗೌರವ ಡಾಕ್ಟರೇಟ್‌ಗಳನ್ನು ತಮ್ಮ ಜಾಗತಿಕ ಮಾನವೀಯ ಕಾರ್ಯಕ್ಕಾಗಿ ಗುರುತಿಸಿಕೊಂಡು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
ವಾಷಿಂಗ್ಟನ್ ಡಿಸಿಯ ನ್ಯಾಷನಲ್ ಮಾಲ್​ನಲ್ಲಿ ಸೆ.29 ಮತ್ತು ಅ. 1 ರ ನಡುವೆ ಹಮ್ಮಿಕೊಂಡಿರುವ ವಿಶ್ವ ಸಂಸ್ಕೃತಿ ಉತ್ಸವದ ಮೂಲಕ ಶಾಂತಿ ಮತ್ತು ಸಾಂಸ್ಕೃತಿಕ ವೈವಿಧ್ಯತೆಯ ಆಚರಣೆಗಾಗಿ ಗುರುದೇವ್ ದೊಡ್ಡ ಒಕ್ಕೂಟವನ್ನು ಅದ್ಧೂರಿಯಾಗಿ ಮುನ್ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ವಾಸ್ತು ಸರಿ ಇಲ್ಲವೆಂದು ಮುಚ್ಚಿದ್ದ ದ್ವಾರವನ್ನು ತೆರೆಸಿ ಸಿಎಂ ಕಚೇರಿಗೆ ಪ್ರವೇಶಿಸಿದ ಸಿದ್ದರಾಮಯ್ಯ!

ಸಿದ್ದರಾಮಯ್ಯ ಮತಾಂತರದ ರಾಯಭಾರಿ, ಸಿದ್ದರಾಮಯ್ಯ ಟಿಪ್ಪುವಿನ ರಾಯಭಾರಿ: ಆರ್.ಅಶೋಕ್ ಆರೋಪ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × four =
Remember me
