ದೆಹಲಿ:ಕಾಡಿನಲ್ಲಿ ಅಡಗಿ, ಅಲ್ಲಿಂದಲೇ ಕಾರ್ಯಾಚರಣೆ ನಡೆಸುತ್ತ ಜಂಗಲ್ ಬಾಯ್ ಎಂದೇ ಕುಖ್ಯಾತಿ ಪಡೆದಿದ್ದ ರಾಮ್​​ಬಾಬು ನನ್ನು ಪೊಲೀಸರು ಬಂಧಿಸಿದ್ದಾರೆ. ಸೈನಿಕ್ ಫಾರ್ಮ್ಸ್ ವಲಯದಿಂದ ಗುಂಡಿನ ಚಕಮಕಿ ನಡೆಸಿ ದೆಹಲಿ ಪೊಲೀಸರು ಸೋಮವಾರ ಆತನನ್ನು ಬಂಧಿಸಿದ್ದಾರೆ.ಆರೋಪಿಯ ಸುಳಿವು ನೀಡಿದವರಿಗೆ 25 ಸಾವಿರ ರೂ. ಘೋಷಿಸಲಾಗಿತ್ತು. ಕೊಲೆ ಮತ್ತು ಕ್ರೂರ ಹಿಂಸೆ ಕೃತ್ಯ ಸೇರಿ ಮೂರು ಪ್ರಕರಣಗಳಿಗೆ ಸಂಬಂಧಿಸಿದಂತೆ ಆತ ಪೊಲೀಸರಿಗೆ ಬೇಕಾಗಿದ್ದ.
ಇದನ್ನೂ ಓದಿ:ಕೊಳದಲ್ಲಿ ಹದಿನಾರರ ಬಾಲೆಯ ಶವ ಪತ್ತೆ… ಅತ್ಯಾಚಾರ ಮತ್ತು ಕೊಲೆ ಶಂಕೆ
ಆರೋಪಿ ಫರಿದಾಬಾದ್ ಅರಣ್ಯ ಪ್ರದೇಶದಿಂದ ಸೈನಿಕ್ ಫಾರ್ಮ್ಸ್ ನತ್ತ ತನ್ನ ಸಹಚರನನ್ನು ಭೇಟಿಯಾಗಲು ಬರಲಿದ್ದ ಎಂಬ ಸುಳಿವು ಸಿಕ್ಕಿತ್ತು. ಆತ ಮಾರಣಾಂತಿಕ ಶಸ್ತ್ರಾಸ್ತ್ರಗಳನ್ನೂ ಸಹ ತೆಗೆದುಕೊಂಡು ಹೋಗಬಹುದು ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು.ಮಾಹಿತಿಯ ಮೇರೆಗೆ ಪೊಲೀಸ್ ತಂಡ ಸೋಮವಾರ ಬೆಳಿಗ್ಗೆ ಸೈನಿಕ್ ಫಾರ್ಮ್ಸ್ ಪ್ರದೇಶದ ರಾಮ್-ಬಲರಾಮ್ ಜಮೀನಿನ ಬಳಿ ಬಲೆ ಹಾಕಿತು. ಪೊಲೀಸರು ಮದ್ದುಗುಂಡು ಮತ್ತು ಬುಲೆಟ್ ಪ್ರೂಫ್ ಜಾಕೆಟ್‌ಗಳನ್ನು ಹೊಂದಿದ್ದರು.
ಇದನ್ನೂ ಓದಿ;ಹಾಸಿಗೆಯಿಂದ ಫ್ಯಾನ್​ವರೆಗಿನ ಎತ್ತರ 5’11, ಸುಶಾಂತ್​ ಹೈಟು 5’10; ಆತ್ಮಹತ್ಯೆ ಹೇಗೆ ಸಾಧ್ಯ? ತನಿಖೆ ವೇಳೆ ಹೊಸ ವಾದ
ಬೆಳಿಗ್ಗೆ 8.10 ಕ್ಕೆ ಆರೋಪಿ ಕಾಡಿನಿಂದ ಬರುತ್ತಿದ್ದಂತೆ, ಪೊಲೀಸ್ ತಂಡ ಆತನನ್ನು ಸುತ್ತುವರಿಯಿತು. ಆತನಿಗೆ ನಿಲ್ಲುವಂತೆ ಪೊಲೀಸರು ತಿಳಿಸಿದರೂ ಆತ ಪರಾರಿಯಾಗಲು ಯತ್ನಿಸಿದ. ಪೊಲೀಸರು ಆತನನ್ನು ಬೆನ್ನಟ್ಟುತ್ತಿದ್ದಂತೆ, ಆತ ಪೊಲೀಸ್ ಅಧಿಕಾರಿಗಳ ಮೇಲೆ ಮತ್ತೆ ಗುಂಡು ಹಾರಿಸಿದ, ನಂತರ ಆರೋಪಿಗೆ ಎಚ್ಚರಿಕೆ ನೀಡಲು ಪೊಲೀಸರು ಮೂರು ಸುತ್ತುಗಳನ್ನು ಗಾಳಿಯಲ್ಲಿ ಹಾರಿಸಿದರು. ಆದರೆ, ಆತ ಮತ್ತೊಂದು ಗುಂಡು ಹಾರಿಸಲು ಪ್ರಯತ್ನಿಸಿದಾಗ, ಆತನನ್ನು ಪೊಲೀಸ್ ಅಧಿಕಾರಿಗಳು ಆಕ್ರಮಿಸಿಕೊಂಡರು. ಕಾರ್ಯಾಚರಣೆ ವೇಳೆ ಗಾಯಗೊಂಡ ಪೇದೆಯೋಬ್ಬರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು.ಪೊಲೀಸರು ಆತನಿಂದ ನಾಡಪಿಸ್ತೂಲು ಮತ್ತು ಮೂರು ಸಜೀವ ಕಾರ್ಟ್​​ರಿಡ್ಜ್​​ಗಳನ್ನು ವಶಪಡಿಸಿಕೊಂಡಿದ್ದಾರೆ. ನ್ಯಾಯಾಲಯವು ಅವನಿಗೆ ಜಾಮೀನು ರಹಿತ ವಾರಂಟ್ ಹೊರಡಿಸಿದೆ.ಮೇ 17 ರಂದು ಸಂಗಮ್ ವಿಹಾರ್ ನಿವಾಸಿ ರೋಹಿತ್ ಎಂಬ 21 ವರ್ಷದ ಯುವಕನ ಹತ್ಯೆಯಾಗಿತ್ತು. ಕೊಲೆಗೆ ಬಳಸಿದ ಶಸ್ತ್ರಾಸ್ತ್ರವನ್ನು ಆರೋಪಿ ರಾಮ್​​ಬಾಬು ಅಲಿಯಾಸ್ ಜಂಗಲ್ ಬಾಯ್‌ನಿಂದ ವಶಪಡಿಸಿಕೊಳ್ಳಲಾಗಿದೆ.
ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ : ಎಂಇಟಿ – 2020 ಶ್ರೇಯಾಂಕ ಪಟ್ಟಿ ಬಿಡುಗಡೆ


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen + fifteen =
Remember me
