ನವದೆಹಲಿ:ಕೋವಿಡ್​-19 ಪಿಡುಗಿನ ಹಿನ್ನೆಲೆಯಲ್ಲಿ ಈ ಸಾಲಿನ ಐಐಟಿ ಪ್ರವೇಶದ ನಿಯಮಗಳನ್ನು ಸಡಿಲಿಸಲು ಮಾನವಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ನಿರ್ಧರಿಸಿದೆ. ಜೆಇಇ ಅಡ್ವಾನ್ಸ್ಡ್​ ಪ್ರವೇಶ ಪರೀಕ್ಷೆಯಲ್ಲಿ ಅರ್ಹತೆ ಗಳಿಸುವ ಜತೆಗೆ 12ನೇ ತರಗತಿಯಲ್ಲಿ ಹೆಚ್ಚಿನ ಅಂಕಗಳಿಸದೆ ಕೇವಲ ಪಾಸ್​ ಆದವರಿಗೂ ಐಐಟಿಗಳಿಗೆ ಪ್ರವೇಶ ನೀಡಲಾಗುವುದು ಎಂದು ಘೋಷಿಸಿದೆ.
ಈ ಮೊದಲು ಜೆಇಇ ಅಡ್ವಾನ್ಸ್ಡ್​ ಪರೀಕ್ಷೆಯಲ್ಲಿ ಅರ್ಹತೆ ಗಳಿಸುವ ಜತೆಗೆ 12ನೇ ತರಗತಿಯಲ್ಲಿ ಶೇ.75 ಅಂಕ ಗಳಿಸಿರುವುದು ಕಡ್ಡಾಯವಾಗಿತ್ತು. ಆದರೆ, ಈ ಬಾರಿ ಶೇ.75 ಅಂಕ ಗಳಿಕೆಯ ನಿಯಮವನ್ನು ಸಡಿಲಿಸಲಾಗಿದೆ. ಕೋವಿಡ್​-19 ಹಿನ್ನೆಲೆಯಲ್ಲಿ 12ನೇ ತರಗತಿಯ ಪರೀಕ್ಷೆಯನ್ನು ಸಂಪೂರ್ಣವಾಗಿ ಆಯೋಜಿಸಲು ಸಾಧ್ಯವಾಗದೇ ಹೋಗಿದ್ದು ಮಾನವಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಈ ನಿರ್ಧಾರಕ್ಕೆ ಕಾರಣವಾಗಿದೆ.
ಇದನ್ನೂ ಓದಿ:ವೆಂಟಿಲೇಟರ್ ಗೋಲ್ಮಾಲ್: ಕೆಡಿಎಲ್​ಡಬ್ಲ್ಯುಎಸ್​ನಲ್ಲಿ ನಿಲ್ಲುತ್ತಿಲ್ಲ ಅಕ್ರಮಗಳ ಸರಮಾಲೆ
ಟ್ವೀಟ್​ ಮೂಲಕ ಈ ವಿಷಯವನ್ನು ತಿಳಿಸಿರುವ ಮಾನವಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್​ ಪೋಖ್ರಿಯಾಲ್​ ನಿಶಾಂಕ್​, ಕೋವಿಡ್​-19 ಪಿಡುಗು ಹಿನ್ನೆಲೆಯಲ್ಲಿ ವಿವಿಧ ರಾಜ್ಯಗಳ ಪರೀಕ್ಷಾ ಮಂಡಳಿಗಳು 12ನೇ ತರಗತಿ ಪರೀಕ್ಷೆಯನ್ನು ಆಯೋಜಿಸಲು ವಿಫಲವಾಗಿವೆ. ಆದ್ದರಿಂದ, ಜಂಟಿ ಪ್ರವೇಶ ಮಂಡಳಿ (ಜೆಎಬಿ) 2020ನೇ ಸಾಲಿಗೆ ಸೀಮಿತವಾಗಿ ಜೆಇಇ ಅಡ್ವಾನ್ಸ್ಡ್​ನ ಅರ್ಹತಾ ನಿಯಮಗಳನ್ನು ಸಡಿಲಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಎಲ್ಲೆಲ್ಲಿ 12ನೇ ತರಗತಿ ಪರೀಕ್ಷೆಯನ್ನು ಆಯೋಜಿಸಲು ಸಾಧ್ಯವಾಗಿಲ್ಲವೋ, ಆ ರಾಜ್ಯದಲ್ಲಿ ಅದುವರೆಗೆ ನಡೆದಿದ್ದ 12ನೇ ತರಗತಿ ಪರೀಕ್ಷೆಯ ಉಳಿದ ಪತ್ರಿಕೆಗಳಲ್ಲಿ ವಿದ್ಯಾರ್ಥಿಗಳು ಪಡೆದಿರುವ ಅಂಕಗಳನ್ನು ಆಧರಿಸಿ, ಬಾಕಿವುಳಿದ ಪತ್ರಿಕೆಗಳಿಗೆ ಅಂಕಗಳನ್ನು ಕೊಡಲಾಗಿದೆ.
ಮಾನನಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಈಗಾಗಲೆ ಐಐಟಿ ಹಾಗೂ ರಾಷ್ಟ್ರದ ಇತರೆ ಇಂಜಿನಿಯರಿಂಗ್​ ಕಾಲೇಜುಗಳ ಪ್ರವೇಶಕ್ಕಾಗಿ ಸೆ.1ರಿಂದ 6ರವರೆಗೆ ಜೆಇಇ ಮೇನ್​ ಪರೀಕ್ಷೆಗಳನ್ನು ಹಾಗೂ ಸೆ.27ರಂದು ಜೆಇಇ ಅಡ್ವಾನ್ಸ್ಡ್​ ಪರೀಕ್ಷೆಯನ್ನು ಆಯೋಜಿಸುವುದಾಗಿ ಪ್ರಕಟಿಸಿದೆ.
ಕನ್ನಡದ ಹಿರಿಯ ಪೋಷಕ ನಟ ಹುಲಿವಾನ್ ಗಂಗಾಧರಯ್ಯ ನಿಧನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + sixteen =
Remember me
