ನವದೆಹಲಿ: ದೇಶದ ಆ್ಯಂಟಿ ಕರಪ್ಶನ್​ ಓಂಬುಡ್ಸ್​ಮನ್​ ಲೋಕಪಾಲದ ಸದಸ್ಯರಾಗಿ ನೇಮಕವಾದ ಒಂಬತ್ತು ತಿಂಗಳ ನಂತರ ವೈಯಕ್ತಿಕ ಕಾರಣ ನೀಡಿ ಆ ಸ್ಥಾನಕ್ಕೆ ನ್ಯಾಯಮೂರ್ತಿ ದಿಲೀಪ್ ಬಿ ಭೋಸಲೆ ರಾಜೀನಾಮೆ ಸಲ್ಲಿಸಿದ್ದಾರೆ.
ಲೋಕಪಾಲದ ಜುಡಿಷಿಯಲ್ ಮೆಂಬರ್ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವ ಪತ್ರವನ್ನು ಜನವರಿ 6ರಂದು ಕಳುಹಿಸಲಾಗಿದ್ದು, ಇದು ಜನವರಿ 12ರಂದು ಅಂಗೀಕಾರವಾಗಲಿದೆ ಎಂದು ನ್ಯಾಯಮೂರ್ತಿ ಭೋಸಲೆ ಟ್ವೀಟ್​ ಮೂಲಕ ತಿಳಿಸಿದ್ದಾರೆ.
ಭೋಸಲೆ ಅವರು ಅಲಹಾಬಾದ್ ಹೈಕೋರ್ಟ್​ನ ಮಾಜಿ ಮುಖ್ಯನ್ಯಾಯಮೂರ್ತಿಗಳು. ಲೋಕಪಾಲ ಚೇರ್​ಮನ್​ ನ್ಯಾಯಮೂರ್ತಿ ಪಿನಾಕಿ ಚಂದ್ರ ಘೋಸ್​ ಅವರಿಂದ 2019ರ ಮಾರ್ಚ್​ 27ರಂದು ಲೋಕಪಾಲ ಸದಸ್ಯರಾಗಿ ಪ್ರಮಾಣ ಸ್ವೀಕರಿಸಿದ್ದರು. ಈ ಸದಸ್ಯತ್ವದ ಅವಧಿ 5 ವರ್ಷ ಅಥವಾ ವಯೋಮಿತಿ 70 ವರ್ಷವಾಗಿದ್ದು ಯಾವುದು ಮೊದಲೋ ಅದನ್ನು ಪರಿಗಣಿಸಲಾಗುತ್ತದೆ.
‘ಭೋಸಲೆ ಅವರು ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದ ಹಿನ್ನೆಲೆಯವರಾಗಿದ್ದು, ನ್ಯಾಯಮೂರ್ತಿಯಾಗಿ ಬಾಂಬೆ, ಕರ್ನಾಟಕ ಹೈಕೋರ್ಟ್​ಗಳಲ್ಲೂ ಸೇವೆ ಸಲ್ಲಿಸಿದ್ದಾರೆ. ಅಖಂಡ ಆಂಧ್ರಪ್ರದೇಶ ವಿಭಜನೆಯಾದ ಸಂದರ್ಭದಲ್ಲಿ ಅಲ್ಲಿನ ಹೈಕೋರ್ಟ್​ ಆರ್ಫ್ ಜುಡಿಕೇಚರ್​ ನ ಚೀಫ್​ ಜಸ್ಟೀಸ್ ಆಗಿ 15 ತಿಂಗಳು ಕೆಲಸ ಮಾಡಿದ್ದರು.
ಲೋಕಪಾಲದಲ್ಲಿ 8 ಸದಸ್ಯರಿದ್ದಾರೆ. ಭೋಸಲೆ ಹೊರತಾಗಿ ವಿವಿಧ ಹೈಕೋರ್ಟ್​​ಗಳ ಮಾಜಿ ಮುಖ್ಯನ್ಯಾಯಮೂರ್ತಿಗಳಾದ ಪ್ರದೀಪ್ ಕುಮಾರ್ ಮೊಹಾಂತಿ, ಅಭಿಲಾಷಾ ಕುಮಾರಿ, ಅಜಯ್ ಕುಮಾರ್ ತ್ರಿಪಾಠಿ ಜುಡಿಷಿಯಲ್ ಮೆಂಬರ್ಸ್ ಆಗಿ ಇದ್ದಾರೆ. ಇದೇ ರೀತಿ, ಸಶಸ್ತ್ರ ಸೀಮಾ ಬಲದ ಮೊದಲ ಮಹಿಳಾ ಮುಖ್ಯಸ್ಥರಾದ ಅರ್ಚನಾ ರಾಮಸಮುದ್ರಂ, ಮಹಾರಾಷ್ಟ್ರದ ಮಾಜಿ ಮುಖ್ಯಕಾರ್ಯದರ್ಶಿ ದಿನೇಶ್ ಕುಮಾರ್ ಜೈನ್​, ಮಾಜಿ ಐಆರ್​ಎಸ್ ಅಧಿಕಾರಿ ಮಹೇಂದರ್ ಸಿಂಗ್, ಗುಜರಾತ್ ಕೆಡರ್​ನ ಮಾಜಿ ಐಎಎಸ್​ ಅಧಿಕಾರಿ ಇಂದ್ರಜೀತ್ ಪ್ರಸಾದ್ ಗೌತಮ್ ಜುಡಿಷಿಯಲೇತರ ಸದಸ್ಯರಾಗಿದ್ದಾರೆ. (ಏಜೆನ್ಸೀಸ್)
I have tendered my resignation from the post of Judicial Member Lokpal on 6th January, w.e.f. 12th January, 2020 due to personal reasons.— Justice Dilip Bhosale (@BhosaleDilipB1)January 9, 2020
I have tendered my resignation from the post of Judicial Member Lokpal on 6th January, w.e.f. 12th January, 2020 due to personal reasons.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:twenty − 8 =
Remember me
