ಲಖನೌ:ಕಾನ್ಪುರದಲ್ಲಿ ಎಂಟು ಪೊಲೀಸರನ್ನು ಹತ್ಯೆ ಮಾಡಿದ ವಿಕಾಸ್​ ದುಬೆಯನ್ನು ಇಂದು ಬೆಳಗ್ಗೆ ಪೊಲೀಸರು ಎನ್​ಕೌಂಟರ್​ನಲ್ಲಿ ಕೊಲೆ ಮಾಡಿದ್ದಾರೆ.
ಮಧ್ಯಪ್ರದೇಶದ ಉಜ್ಜಯನಿಯಿಂದ ಉತ್ತರ ಪ್ರದೇಶಕ್ಕೆ ಕರೆತರುವಾಗ ವಿಕಾಸ್​ ದುಬೆ ಪೊಲೀಸ್​ರ ಬಳಿ ಇದ್ದ ಗನ್​ ಕಿತ್ತುಕೊಂಡು, ಪರಾರಿಯಾಗಲು ಪ್ರಯತ್ನಿಸಿದ. ಹಾಗಾಗಿ ಎನ್​ಕೌಂಟರ್​ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಕಾಸ್​ ದುಬೆ ಎನ್​ಕೌಂಟರ್​ಗೆ ಪ್ರತಿಪಕ್ಷದ ಕೆಲವು ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅದರಲ್ಲಿ ತೃಣಮೂಲ ಕಾಂಗ್ರೆಸ್​ ನಾಯಕಿ, ಸಂಸದೆ ಮಾಹುವಾ ಮಯುತ್ರಾ ಅವರು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ವಿರುದ್ಧ ತೀವ್ರ ಕಿಡಿ ಕಾರಿದ್ದಾರೆ. ವಿಕಾಸ್​ ದುಬೆ ಎನ್​ಕೌಂಟರ್​ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಇದನ್ನೂ ಓದಿ:ಸುಶಾಂತ್​ ಸಿಂಗ್​ ಸಾವಿನ ಬಗ್ಗೆ ಮೌನ ಮುರಿದ ಸುದೀಪ್​!
ವಿಕಾಸ್​ ದುಬೆಯನ್ನು ಕೊಲ್ಲುವ ಬದಲು, ಕಾನೂನು ಪ್ರಕಾರ ಶಿಕ್ಷೆಗೆ ಒಳಪಡಿಸಬೇಕಿತ್ತು ಎಂದು ಟ್ವೀಟ್​ ಮಾಡಿರುವ ಮಯುತ್ರಾ, ಯೋಗಿ ಜೀ ಅವರ ಎನ್​ಕೌಂಟರ್​ ರಾಜ್ಯದಲ್ಲಿ ನ್ಯಾಯವನ್ನೇ ಹತ್ಯೆ ಮಾಡಲಾಗುತ್ತಿದೆ ಎಂದಿದ್ದಾರೆ.ಇದನ್ನೂ ಓದಿ:ಕರೊನಾಕ್ಕೆ ಬಲಿಯಾದ ಶಾಸಕ ಜಮೀರ್ ಆಪ್ತ- ರಾಮ್‌ದಾಸ್‌ ಆಪ್ತರಿಗೆ ಜ್ವರ
ಆರೋಪಿಯನ್ನು ಪತ್ತೆ ಹಚ್ಚುವುದು ಪೊಲೀಸರ ಕೆಲಸ. ನ್ಯಾಯ-ಅನ್ಯಾಯ ವಿಚಾರಣೆ ಮಾಡಿ, ಸೂಕ್ತ ತೀರ್ಪು ನೀಡಲು ನ್ಯಾಯಾಲಯ ಇದೆ. ಆದರೆ ಯುಪಿಯ ಬಿಜೆಪಿ ಸರ್ಕಾರದಡಿಯಲ್ಲಿ ಈ ನಿಯಮಗಳಿಗೆ ಅರ್ಥವೇ ಇಲ್ಲದಂತಾಗಿದೆ. ಇಡೀ ದೇಶಕ್ಕೆ ಶಾಕ್​ ಆಗಿದೆ. ಜನರೂ ಕೂಡ ಗೊಂದಲಕ್ಕೀಡಾಗುವಂತಾಗಿದೆ ಎಂದು ಹೇಳಿದ್ದಾರೆ. (ಏಜೆನ್ಸೀಸ್​)
ಚಿನ್ನ, ಬೆಳ್ಳಿ ಆಯ್ತು..ಇದೀಗ ವಜ್ರದ ಮಾಸ್ಕ್​ಗಳ ಸರದಿ; ಸಾಮಾನ್ಯರ ಕೈಗೆಟಕುವಂಥದ್ದಲ್ಲ ಇದು…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − 13 =
Remember me
