ಒಟ್ಟಾವಾ:ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಮಂಜಿಂದರ್ ಸಿಂಗ್ ಸಿರ್ಸಾ ಅವರು ಸೋಮವಾರ (ಜುಲೈ 15) ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ವಿರುದ್ಧ ವಾಗ್ದಾಳಿ ನಡೆಸಿದರು. ಟ್ರುಡೊ ತಮ್ಮ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ದಿಲ್ಜಿತ್ ದೋಸಾಂಜ್ ಅವರನ್ನು ಉದ್ದೇಶಪೂರ್ವಕವಾಗಿ ‘ಭಾರತೀಯ ಗಾಯಕ’ ಎಂದು ಕರೆಯುವ ಬದಲು ‘ಪಂಜಾಬಿ ಗಾಯಕ’ ಎಂದು ಕರೆದಿದ್ದಾರೆ. ಇದು ಕಿಡಿಗೇಡಿತನ ಎಂದು ಮಂಜಿಂದರ್ ಟೀಕಿಸಿದ್ದಾರೆ.
ಇದನ್ನು ಓದಿ:ಅನಂತ್​​​-ರಾಧಿಕಾ ಹೈಪ್ರೊಫೈಲ್ ವಿವಾಹ; ಪೊಲೀಸರ ಅತಿಥಿಗಳಾದ್ರೂ ಆಹ್ವಾನಿಸದೆ ಬಂದ ಈ ಇಬ್ಬರು
ಟೊರೊಂಟೊದ ರೋಜರ್ ಸೆಂಟರ್‌ನಲ್ಲಿ ಆಯೋಜಿಸಲಾಗಿದ್ದ ದಿಲ್ಜಿತ್ ಅವರ ಸಂಗೀತ ಕಚೇರಿಗೆ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಇದ್ದಕ್ಕಿದ್ದಂತೆ ಆಗಮಿಸಿದರು. ಬಳಿಕ ಗಾಯಕ ದಿಲ್ಜಿತ್ ಅವರೊಂದಿಗೆ ತೆಗೆಸಿಕೊಂಡಿರುವ ಫೋಟೋವನ್ನು ತಮ್ಮ ಸಾಮಾಜಿಕ ಜಾಲತಾಣದ ಪೋಸ್ಟ್​ನಲ್ಲಿ ಹಂಚಿಕೊಂಡಿದ್ದಾರೆ. ಜತೆಗೆ ಕೆನಡಾ ಒಂದು ದೊಡ್ಡ ದೇಶ. ಪಂಜಾಬ್‌ನ ಹುಡುಗನೊಬ್ಬ ಇತಿಹಾಸ ಸೃಷ್ಟಿಸಬಲ್ಲ ಮತ್ತು ಕ್ರೀಡಾಂಗಣಗಳನ್ನು ತುಂಬಬಲ್ಲ. ವೈವಿಧ್ಯತೆ ಮಾತ್ರ ನಮ್ಮ ಶಕ್ತಿಯಲ್ಲ. ಇದೊಂದು ಮಹಾಶಕ್ತಿ ಎಂದು ಬರೆದುಕೊಂಡಿದ್ದಾರೆ.

ಇನ್ನೂ ಈ ಬಗ್ಗೆ ಬಿಜೆಪಿ ನಾಯಕ ಮಂಜಿಂದರ್ ಸಿಂಗ್ ಸಿರ್ಸಾ ಅವರು ಕೆನಡಾ ಪ್ರಧಾನಿ ಟ್ರುಡೊ ಅವರ ಮಾತುಗಳನ್ನು ಸರಿಪಡಿಸಿ, ಮಿಸ್ಟರ್ ಪ್ರೈಮ್ ಮಿನಿಸ್ಟರ್, ನಾನು ಇದನ್ನು ಸರಿಪಡಿಸಲು ಬಯಸುತ್ತೇನೆ ಎಂದು ಹೇಳಿದ್ದಾರೆ. ಭಾರತದಿಂದ ಒಬ್ಬ ವ್ಯಕ್ತಿ ಇತಿಹಾಸವನ್ನು ನಿರ್ಮಿಸಬಹುದು ಮತ್ತು ಕ್ರೀಡಾಂಗಣಗಳನ್ನು ತುಂಬಬಹುದು. ಗಾಯಕ ದಿಲ್ಜಿತ್ ಅವರಂತಹ ಮೇಧಾವಿ ಕಲಾವಿದನನ್ನು ಹೊಗಳುವ ನಿಮ್ಮ ನಡೆಯನ್ನು ಮಾತಿನ ಆಟದ ಮೂಲಕ ಉದ್ದೇಶಪೂರ್ವಕವಾಗಿ ನಿಮ್ಮ ಕಿಡಿಗೇಡಿತನದಿಂದ ಸಂಪೂರ್ಣವಾಗಿ ಮರೆಮಾಡಲಾಗಿದೆ ಎಂದು ಹೇಳಿದ್ದಾರೆ.

ಅದೇ ಸಮಯದಲ್ಲಿ, ಗಾಯಕ ದಿಲ್ಜಿತ್ ದೋಸಾಂಜ್ ಅವರು ಕೆನಡಾದ ಪ್ರಧಾನಿ ಟ್ರುಡೊ ಅವರ ಭೇಟಿಯ ವೀಡಿಯೊವನ್ನು ತಮ್ಮ ಇನ್​ಸ್ಟಾಗ್ರಾಮ್​​​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ ಟ್ರುಡೊ ದಿಲ್ಜಿತ್ ಅವರನ್ನು ಅಪ್ಪಿಕೊಳ್ಳುತ್ತಿರುವುದನ್ನು ಕಾಣಬಹುದು. (ಏಜೆನ್ಸೀಸ್​​)
Diversity is 🇨🇦‘s strength. Prime Minister@JustinTrudeaucame to check out history in the making: we sold out the Rogers Centre!pic.twitter.com/vyIKlvvplM
— DILJIT DOSANJH (@diljitdosanjh)July 14, 2024
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 5 =
Remember me
