ಲಖನೌ​:ಹಗಲು-ರಾತ್ರಿಯೆನ್ನದೆ ಕಷ್ಟಪಟ್ಟು ದುಡಿದು ಪತ್ನಿಯನ್ನು ಸಬ್​ ಡಿವಿಷನಲ್​ ಮ್ಯಾಜಿಸ್ಟ್ರೇಟ್​ (ಎಸ್​ಡಿಎಂ) ಮಾಡಿ, ಇದೀಗ ಪತ್ನಿಯ ವಿರುದ್ಧ ದಾಂಪತ್ಯ ದ್ರೋಹ ಆರೋಪ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಮಾಹಿತಿ ಹೊರ ಬಿದ್ದಿದೆ. 2016ರಲ್ಲಿ ಪತ್ನಿ ನೀಡಿದ್ದ ಹೇಳಿಕೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದು, ಆರೋಪಕ್ಕೆ ಪುಷ್ಠಿ ನೀಡುವಂತಿದೆ.
ಅಲೋಕ್​ ಮೌರ್ಯ ಎಂಬುವರು ತಮ್ಮ ಪತ್ನಿ ಎಸ್​ಡಿಎಂ ಜ್ಯೋತಿ ಮೌರ್ಯ ವಿರುದ್ಧ ಆರೋಪ ಮಾಡಿದ್ದಾರೆ. ನನಗೆ ವಂಚನೆ ಮಾಡಿ, ಬೇರೆ ಅಧಿಕಾರಿಯೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾಳೆ ಎಂದು ಅಲೋಕ್​ ಮೌರ್ಯ ಆರೋಪಿಸಿದ್ದು, ಮಾಧ್ಯಮಗಳ ಮುಂದೆ ಕಣ್ಣೀರಿಟ್ಟಿದ್ದಾರೆ.
ಇದನ್ನೂ ಓದಿ:ಪ್ರಚಾರಕ್ಕಾಗಿ ಕೆಜಿಎಫ್​ ಹಾಡು ಬಳಕೆ: ಪ್ರಕರಣ ರದ್ದತಿಗೆ ಹೈಕೋರ್ಟ್​ ನಕಾರ, ರಾಹುಲ್ ಗಾಂಧಿಗೆ ಮತ್ತಷ್ಟು ಸಂಕಷ್ಟ
2016ರಲ್ಲಿ ಸರ್ಕಾರಿ ಕೆಲಸ ಗಿಟ್ಟಿಸಿದ್ದ ಜ್ಯೋತಿ ಮೌರ್ಯ, ತನ್ನ ಯಶಸ್ಸಿಗೆ ಪತಿ ಅಲೋಕ್​ ಮೌರ್ಯ ಮತ್ತು ಮಾವ ಕಾರಣ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು. ಇದಕ್ಕೆ ಸಂಬಂಧಿಸಿದ ವರದಿಯ ಸ್ಕ್ರೀನ್​ಶಾಟ್​ ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿದೆ. ಆದರೆ, ಇದೀಗ ಗಂಡ ಮತ್ತು ಮಾವನ ವಿರುದ್ಧವೇ ಜ್ಯೋತಿ ಮೌರ್ಯ ವರದಕ್ಷಿಣೆ ಕಿರುಕುಳ ಆರೋಪ ಮಾಡಿದ್ದಾರೆ. ಇದರ ಬೆನ್ನಲ್ಲೇ ಸ್ಕ್ರೀನ್​ಶಾಟ್​ ವೈರಲ್​ ಆಗಿದ್ದು, ಜ್ಯೋತಿ ಮೌರ್ಯ ವಿರುದ್ಧವೇ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.
2016 : Jyoti Maurya gives credit to her husband & father-in-law for her success as a PCS topper
2023 : Jyoti Maurya claims her husband and in-laws are dowry seekers because Alok Maurya goes public with evidence of#Adultery
Truth has its own way of emerging!pic.twitter.com/4eyeBsYZAD
— Deepika Narayan Bhardwaj (@DeepikaBhardwaj)June 28, 2023

ಜನತಾ ದರ್ಬಾರ್​ ಸಭೆಯ ವೇಳೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಭೇಟಿ ಮಾಡಿ, ತನ್ನ ಪತ್ನಿ ಜ್ಯೋತಿ ಮೌರ್ಯ ವಿರುದ್ಧ ಕ್ರಮ ಜರುಗಿಸುವಂತೆ ಮನವಿ ಮಾಡಲು ಅಲೋಕ್​ ಮೌರ್ಯ ಮುಂದಾಗಿದ್ದಾರೆ. ವಿಭಾಗೀಯ ಮಟ್ಟದ ಕ್ರಮ ಜರುಗಿಸಲು ಸಹ ದೂರು ದಾಖಲಿಸಲಾಗಿದೆ. ಭ್ರಷ್ಟಾಚಾರ ಮಾತ್ರವಲ್ಲದೆ, ಪತ್ನಿ ಮತ್ತು ಆಕೆಯ ಲವರ್​ ಜತೆ ನಡೆದಿರುವ ವಾಟ್ಸ್​ಆ್ಯಪ್​ ಚಾಟ್​ ಸ್ಕ್ರೀನ್​ಶಾಟ್​ ಅನ್ನು ಸಹ ದೂರಿನ ಜತೆ ದಾಖಲಿಸಿದ್ದಾರೆ.
ಜ್ಯೋತಿ ಮೌರ್ಯ ಮತ್ತು ಅಲೋಕ್​ 2010ರಲ್ಲಿ ಮದುವೆ ಆದರು. ಆ ಸಮಯದಲ್ಲಿ ಅಲೋಕ್​ ಪಂಚಾಯತ್​ ರಾಜ್​ ಇಲಾಖೆಯಲ್ಲಿ 4ನೇ ವರ್ಗದ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದರು. ಇದರ ನಡುವೆ ಜ್ಯೋತಿ ಓದು ಮುಂದುವರಿಸುವ ಬಯಕೆಯನ್ನು ಗಂಡನ ಬಳಿ ವ್ಯಕ್ತಪಡಿಸಿದ್ದರು. ಬಳಿಕ ಅಲೋಕ್​ ಕೂಡ ಇದಕ್ಕೆ ಓಕೆ ಎಂದಿದ್ದರು. ಮದುವೆ ಬಳಿಕ ಇಬ್ಬರು ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದೆವು. ಆದರೆ, ನಾನು ಬಿಡುವಿಲ್ಲದೆ, ತುಂಬಾ ಶ್ರಮವಹಿಸಿ ದುಡಿದು ಪತ್ನಿಗೆ ಶಿಕ್ಷಣ ಕೊಡಿಸಿದೆ. ಪ್ರಯಾಗ್​ರಾಜ್​ನಲ್ಲಿರುವ ಒಳ್ಳೆಯ ಕೋಚಿಂಗ್​ ಕೇಂದ್ರಕ್ಕೆ ದಾಖಲಿಸಿದೆ. ತನ್ನ ಪರಿಶ್ರಮ ಮತ್ತು ಸಮರ್ಪಣಾ ಮನೋಭಾವದಿಂದಾಗಿ 2016ರಲ್ಲಿ ಸಬ್​ ಡಿವಿಷನಲ್​ ಮ್ಯಾಜಿಸ್ಟ್ರೇಟ್​ (ಎಸ್​ಡಿಎಂ) ಆಗಿ ಸರ್ಕಾರಿ ಕೆಲಸ ಗಿಟ್ಟಿಸಿಕೊಂಡಳು. ಯಶಸ್ಸನ್ನು ತಲೆಗೆ ತುಂಬಿಸಿಕೊಂಡ ಪತ್ನಿ ನನಗೆ ವಂಚನೆ ಮಾಡಲು ಮುಂದಾದಳು ಎಂದು ಅಲೋಕ್​ ಆರೋಪಿಸಿದ್ದಾರೆ.
ಇದನ್ನೂ ಓದಿ:ಡಾ. ವಿಜಯ ಸಂಕೇಶ್ವರರ ತ್ಯಾಗದಿಂದ ಯತ್ನಾಳ್ ಕೇಂದ್ರ ಸಚಿವ ಆಗಲು ಸಾಧ್ಯವಾಗಿದ್ದು: ಮುರುಗೇಶ್ ನಿರಾಣಿ
2023ರ ಮೇ 7ರಂದು ತನ್ನ ಮಾವ ಮತ್ತು ಗಂಡನ ವಿರುದ್ಧ ಜ್ಯೋತಿ ಮೌರ್ಯ ವರದಕ್ಷಿಣೆ ಕಿರುಕುಳ ದಾಖಲಿಸಿದರು. ಫಾರ್ಚೂನರ್​ ಕಾರು ಮತ್ತು ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ ಎಂದು ದೂರಿನಲ್ಲಿ ಜ್ಯೋತಿ ಉಲ್ಲೇಖಿಸಿದ್ದರು. ಅಲ್ಲದೆ, ಗಂಡನನ್ನು ಜೈಲಿಗೆ ಕಳುಹಿಸಿದ್ದು, ಇದೀಗ ಅಲೋಕ್​ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ ಮತ್ತು ತನ್ನ ಕೆಲಸವನ್ನು ಕಳೆದುಕೊಂಡಿದ್ದಾರೆ. ಇದರಿಂದ ಸಂಕಷ್ಟಕ್ಕಿಡಾಗಿದ್ದು, ಮಾಧ್ಯಮಗಳ ಮುಂದೆ ಅಲೋಕ್​ ಕಣ್ಣೀರಿಟ್ಟಿದ್ದಾರೆ.
ಇದೀಗ ಅಲೋಕ್​ ಮೌರ್ಯ ಕೂಡ ತನ್ನ ಪತ್ನಿ ವಿರುದ್ಧ ದೂರು ದಾಖಲಿಸಿದ್ದಾರೆ. ಗಾಜಿಯಾಬಾದ್‌ನಲ್ಲಿರುವ ರಾಷ್ಟ್ರೀಯ ಕಾವಲು ಪಡೆಯ ಕಮಾಂಡರ್ ಮನೀಶ್​ ದುಬೆ ಎಂಬುವರ ಜತೆ ಪತ್ನಿ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾರೆ. ಜ್ಯೋತಿ ತನ್ನ ಅಧಿಕೃತ ನಿವಾಸದಲ್ಲಿ ಮನೀಶ್​ ಜೊತೆ ಸರಸ ಸಲ್ಲಾಪದಲ್ಲಿ ತೊಗಿದ್ದಳು. ಇದನ್ನು ನಾನು ಕಣ್ಣಾರೆ ಕಂಡೆ ಎಂದು ದೂರಿದ್ದಾರೆ. ನನಗೆ ಜ್ಯೋತಿ ಕಡೆಯಿಂದ ಜೀವಕ್ಕೆ ಬೆದರಿಕೆ ಇದೆ. ಡಿವೋರ್ಸ್​ ಕೊಡದಿದ್ದರೆ ಕೊಲೆ ಮಾಡುತ್ತೇವೆ ಎಂದು ಬೆದರಿಕೆ ಹಾಕುತ್ತಿದ್ದಾರೆ ಎಂದು ಅಲೋಕ್​, ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ಪ್ರಕರಣ ಸಂಬಂಧ ಸದ್ಯ ತನಿಖೆ ನಡೆಯುತ್ತಿದ್ದು, ಇದರ ನಡುವೆ 2016ರಲ್ಲಿ ಜ್ಯೋತಿ ಮೌರ್ಯ ನೀಡಿದ್ದ ಹೇಳಿಕೆಯ ಸ್ಕ್ರೀನ್​ಶಾಟ್​ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.(ಏಜೆನ್ಸೀಸ್​)
ಹಗಲು-ರಾತ್ರಿ ದುಡಿದು ಪತ್ನಿಯ ಓದಿಗೆ ನೆರವು: ಸರ್ಕಾರಿ ಕೆಲಸ ಸಿಗುತ್ತಿದ್ದಂತೆ ಗಂಡನಿಗೆ ಬಿಗ್ ಶಾಕ್!​

3 ವರ್ಷದ ಹಿಂದೆ ತಾಯಿ, ಮದ್ವೆಗೆ 1 ದಿನ ಇರುವಾಗ ತಂದೆ ಸಾವು: ನೋವಿನ ಮಧ್ಯೆಯೂ ವಧುಗಳಿಬ್ಬರ ವಿವಾಹ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 7 =
Remember me
