ನವದೆಹಲಿ:ಮಧ್ಯಪ್ರದೇಶ ಸರ್ಕಾರ ಪತನಕ್ಕೆ ಮುಖ್ಯ ಕಾರಣವಾದ ಜ್ಯೋತಿರಾದಿತ್ಯ ಸಿಂಧಿಯಾ ಈಗಾಗಲೇ ಒಂದು ಕಾಲನ್ನು ಬಿಜೆಪಿಯಲ್ಲಿ ಇಟ್ಟಾಗಿತ್ತು. ನಿನ್ನೆ ನವದೆಹಲಿಯಲ್ಲಿ ಗೃಹಸಚಿವ ಅಮಿತ್​ ಷಾ ಮತ್ತು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾದ ಬಳಿಕ ಕಾಂಗ್ರೆಸ್​ಗೆ ರಾಜೀನಾಮೆಯನ್ನೂ ನೀಡಿದ್ದ ಅವರು ಇಂದು ಅಧಿಕೃತವಾಗಿ ಕಮಲ ಹಿಡಿದರು.
ಇಂದು ದೆಹಲಿ ಬಿಜೆಪಿ ಮುಖ್ಯಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಪಕ್ಷದರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ವೈಯಕ್ತಿಕ ವರ್ಚಸ್ಸಿನಿಂದಲೇ ದೇಶದಲ್ಲಿ ಗುರುತಿಸಿಕೊಂಡಿರುವ ಓರ್ವ ಯುವ ನಾಯಕ ನಮಗಿಂದು ಸಿಕ್ಕಿದ್ದಾರೆ ಎಂದು ಜೆ.ಪಿ.ನಡ್ಡಾ ಇದೇ ವೇಳೆ ಹೇಳಿದರು.
ಜ್ಯೋತಿರಾದಿತ್ಯ ಸಿಂಧಿಯಾ ಅವರೊಂದಿಗೆ ಇನ್ನೂ 22 ಮಂದಿ ಕಾಂಗ್ರೆಸ್ ಶಾಸಕರು ಸ್ಪೀಕರ್​ಗೆ ರಾಜೀನಾಮೆ ಸಲ್ಲಿಸಿದ್ದಾರೆ. ಆದರೆ ಅವರು ಖುದ್ದಾಗಿ ಹೋಗಿ ರಾಜೀನಾಮೆ ಸಲ್ಲಿಸದ ಕಾರಣ ಇನ್ನೂ ಅಂಗೀಕಾರವಾಗಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. (ಏಜೆನ್ಸೀಸ್)
ಮಧ್ಯಪ್ರದೇಶದಲ್ಲಿ ಅಧಿಕಾರ ‘ಕೈ’ ಜಾರುತ್ತಿದ್ದರೂ ಕಳೆದಿಲ್ಲ ಭರವಸೆ; ಸಿಎಂ ಕಮಲ್​ನಾಥ್​ ಪುತ್ರ ನಕುಲ್​ ಮಾತುಗಳ ಅರ್ಥ ಏನಿರಬಹುದು..?

‘ಸಿಂಧಿಯಾ ರಾಹುಲ್​ ಗಾಂಧಿ ಭೇಟಿಗಾಗಿ ತಿಂಗಳಾನುಗಟ್ಟಲೆ ಕಾದಿದ್ದರು..ಈಗಂತೂ ಕಾಂಗ್ರೆಸ್​ನಲ್ಲಿ ಯುವ ನಾಯಕರಿಗೆ ಅನಾಥ ಭಾವ ಕಾಡುತ್ತಿದೆ…’

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + 7 =
Remember me
